‘ಜೈ ಹನುಮಾನ್’ ಸೀಕ್ವೆಲ್‌ನಲ್ಲಿ ರಣ್‌ವೀರ್ ಸಿಂಗ್

ಪ್ರಶಾಂತ್ ವರ್ಮಾ ನಿರ್ದೇಶನ ಮತ್ತು ತೇಜಾ ಸಜ್ಜಾ (Teja Sajja) ನಟನೆಯ ‘ಜೈ ಹನುಮಾನ್’ (Jai Hanuman)  ಮೊದಲ ಭಾಗ ಸಕ್ಸಸ್ ಕಂಡಿದೆ. ಇದರ ಪಾರ್ಟ್ 2 ಬರುವ ಬಗ್ಗೆ ಇತ್ತೀಚೆಗೆ ಚಿತ್ರತಂಡ ಅನೌನ್ಸ್ ಮಾಡಿದೆ. ಆಂಜನೇಯ ಪಾತ್ರದಲ್ಲಿ ಯಾರು ನಟಿಸುತ್ತಾರೆ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.

ತೇಜಾ ಸಜ್ಜಾ, ಅಮೃತಾ ನಟನೆಯ ಜೈ ಹನುಮಾನ್ ಸಿನಿಮಾದಲ್ಲಿ ಆಂಜನೇಯನಾಗಿ ರಣ್‌ವೀರ್ ಸಿಂಗ್ (Ranveer Singh) ನಟಿಸುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈಗಾಗಲೇ ಚಿತ್ರದ ನಿರ್ದೇಶಕ ಪ್ರಶಾಂತ್‌ ವರ್ಮಾ ಅವರು ರಣ್‌ವೀರ್‌ರನ್ನು ಭೇಟಿಯಾಗಿದ್ದು, ಪಾತ್ರದ ಬಗ್ಗೆ ಮಾತುಕತೆ ಕೂಡ ನಡೆದಿದೆ ಎನ್ನಲಾಗಿದೆ.

ಈ ಚಿತ್ರದ ಭಾಗವಾಗಲು ಒಪ್ಪಿಕೊಂಡ್ರಾ? ಜೈ ಹನುಮಾನ್ ಚಿತ್ರಕ್ಕೆ ರಣ್‌ವೀರ್ ಕೈಜೋಡಿಸ್ತಾರಾ ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ಇದನ್ನೂ ಓದಿ:ಮತ್ತೆ ಕಾಣಿಸಿಕೊಂಡ ರಾಹಾ- ರಣ್‌ಬೀರ್ ದಂಪತಿ ಪುತ್ರಿಗೆ ನೆಟ್ಟಿಗರ ಮೆಚ್ಚುಗೆ

ಸಿಂಗಂ ಅಗೇನ್, ಡಾನ್ 3 ಸೇರಿದಂತೆ ಹಲವು ಸಿನಿಮಾಗಳು ರಣ್‌ವೀರ್ ಸಿಂಗ್ ಕೈಯಲ್ಲಿವೆ.