ಪತ್ನಿಯ ಪೆಟ್ ನೇಮ್ ರಿವೀಲ್ ಮಾಡಿದ ರಣ್‍ವೀರ್ ಸಿಂಗ್

ಮುಂಬೈ: ಬಾಲಿವುಡ್ ಹಾಟ್ ಕಪಲ್ ದೀಪಿಕಾ ಪಡುಕೋಣೆ ಮತ್ತು ರಣ್‍ವೀರ್ ಸಿಂಗ್ 2018ರಲ್ಲಿ ಸಾಂಸಾರಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಮದುವೆಯ ಬಳಿಕ ತಮ್ಮ ಕೆಲಸಗಳಲ್ಲಿ ಬ್ಯೂಸಿಯಾಗಿದ್ದರೂ, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡಿಕೊಳ್ಳುತ್ತಿರುತ್ತಾರೆ. ಪ್ರಿಯಾಂಕ ಚೋಪ್ರಾ ಆರತಕ್ಷತೆಯಲ್ಲಿ ದಂಪತಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಕೆಲವು ದಿನಗಳ ಹಿಂದೆ ಇನ್ ಸ್ಟಾಗ್ರಾಮ್ ನಲ್ಲಿ ಪತ್ನಿಯ ಪೆಟ್ ಅಥವಾ ನಿಕ್ ನೇಮ್ ನ್ನು ಪತಿ ರಣ್‍ವೀರ್ ಸಿಂಗ್ ರಿವೀಲ್ ಮಾಡಿದ್ದಾರೆ.

ದೀಪಿಕಾ ಪಡುಕೋಣೆ ಇತ್ತೀಚೆಗೆ ತಮ್ಮ ಇನ್ಸ್ಟಾದಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿಕೊಂಡಿದ್ದರು. ವಿಡಿಯೋ ನೋಡಿದ ರಣ್‍ವೀರ್, ಐ ಲವ್ ಯು, ಜಾನಾ-ಬನಾನಾ ಎಂದು ಬರೆದು ಹಾರ್ಟ್, ನಗು ಮತ್ತು ನಮಸ್ತೆ ಎಮೋಜಿ ಹಾಕಿ ಕಮೆಂಟ್ ಮಾಡಿದ್ದಾರೆ. ಪತಿಯ ಕಮೆಂಟ್ ಗೆ ಉತ್ತರ ನೀಡಿ, ನಿಮ್ಮ ಈ ಮಾತುಗಳು ನನ್ನನ್ನು ಖುಷಿಯಲ್ಲಿರುವಂತೆ ಮಾಡುತ್ತೇವೆ ಎಂದು ಉತ್ತರಿಸಿದ್ದಾರೆ.

ಮನೆಯಲ್ಲಿ ದೀಪಿಕಾರನ್ನು ಜಾನಾ-ಬನಾನಾ ಎಂದು ರಣ್‍ವೀರ್ ಎಂದು ಸಂಭೋದಿಸುತ್ತಾರೆಂದು ಪತ್ರಿಕೆಯೊಂದು ವರದಿ ಮಾಡಿದೆ. ಸಿನಿ ಅಂಗಳದಲ್ಲಿ ದೀಪಿಕಾರನ್ನು ‘ಡಿಪ್ಪಿ’ ಎಂದೇ ಕರೆಯುವುದುಂಟು. ಪತಿಯ ಜೊತೆಗೆ ನಟಿಸಿರುವ ಮೂರು ಚಿತ್ರಗಳು ಬಾಲಿವುಡ್ ನಲ್ಲಿ ಹಲವು ದಾಖಲೆಗಳನ್ನು ಬರೆದಿದ್ದು, ಮೂರು ಸಿನಿಮಾಗಳಿಗೆ ಸಂಜಯ್ ಲೀಲಾ ಬನ್ಸಾಲಿ ಆ್ಯಕ್ಷನ್ ಕಟ್ ಹೇಳಿರುವುದು ಮತ್ತೊಂದು ವಿಶೇಷ.

ಮದುವೆಯ ಬಳಿಕ ರಣ್‍ವೀರ್ ಸಿಂಗ್ ಭಾಗಿಯಾದ ಎಲ್ಲ ಕಾರ್ಯಕ್ರಮಗಳಲ್ಲಿ ಪತ್ನಿಯ ಗುಣಗಾನ ಮಾಡುತ್ತಿದ್ದಾರೆ. ನವೆಂಬರ್ 14ರಂದು ಇಟಲಿಯ ಕೋಮೋ ಸಿಟಿಯಲ್ಲಿ ಇಬ್ಬರು ಸಿಖ್ ಮತ್ತು ಕೊಂಕಣಿ ಸಂಪ್ರದಾಯದಂತೆ ಮದುವೆ ಆಗಿದ್ದು, ಬೆಂಗಳೂರು ಹಾಗು ಮುಂಬೈನಲ್ಲಿ ಆರತಕ್ಷತೆಯನ್ನು ಆಯೋಜಿಸಿದ್ದರು. ರಣ್‍ವೀರ್ ಸಿಂಗ್ ಅಭಿನಯದ ಸಿಂಬಾ ಬಿಡುಗಡೆಯಾಗಿದ್ದು, ನೂರು ಕೋಟಿಯ ಕ್ಲಬ್ ಸೇರಿದೆ. ಆಲಿಯಾ ಭಟ್ ಗೆ ಜೊತೆಯಾಗಿ ನಟಿಸಿರುವ ಗಲ್ಲಿ ಭಾಯ್ ಚಿತ್ರದ ಟ್ರೇಲರ್ ಸಹ ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *