ಅಭಿಮಾನಿ ಬಳಗಕ್ಕೆ ದೀಪಿಕಾ ಕೊಟ್ರು ಸ್ಯಾಡ್ ನ್ಯೂಸ್

ಮುಂಬೈ: ಬಾಲಿವುಡ್ ಗುಳಿ ಕೆನ್ನೆ ಚೆಲುವೆ ದೀಪಿಕಾ ಪಡುಕೋಣೆ ತಮ್ಮ ಅಭಿಮಾನಿ ಬಳಗಕ್ಕೆ ಸ್ಯಾಡ್ ನ್ಯೂಸ್ ಕೊಟ್ಟಿದ್ದಾರೆ.

ಬಹುದಿನಗಳಿಂದ ದೀಪಿಕಾ ಮದುವೆಗೆ ಕಾಯುತ್ತಿರುವ ಅಭಿಮಾನಿಗಳಿಗೆ ಭಾರೀ ನಿರಾಸೆಯುಂಟಾಗಿದೆ. ದೀಪಿಕಾ ಆಪ್ತರ ಪ್ರಕಾರ ಇದೇ ವರ್ಷ ಅಂದ್ರೆ ನವೆಂಬರ್‍ನಲ್ಲಿ ರಣ್‍ವೀರ್ ಮತ್ತು ದೀಪಿಕಾ ಮದುವೆ ನಡೆಯಲಿದೆ ಎಂದು ಹೇಳಲಾಗಿತ್ತು. ಈಗಾಗಲೇ ದೀಪಿಕಾ ಮತ್ತು ರಣ್‍ವೀರ್ ಕುಟುಂಬಸ್ಥರು ಚಿನ್ನಾಭರಣ ಖರೀದಿಯಲ್ಲಿಯೂ ತೊಡಗಿಕೊಂಡಿದ್ದಾರಂತೆ ಕೆಲವು ಸುದ್ದಿಗಳು ಸಹ ಪ್ರಕಟವಾಗಿತ್ತು. ಸದ್ಯ ದಿಢೀರ್ ಅಂತಾ ದೀಪಿಕಾ ಮತ್ತು ರಣ್‍ವೀರ್ ಮದುವೆಯನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ ಎಂಬ ಸುದ್ದಿಯೊಂದು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

ದಿನಾಂಕ ಬದಲಾಗಿದ್ದೇಕೆ..?: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಸಹ ನವೆಂಬರ್ ತಿಂಗಳಲ್ಲಿಯೇ ಇಟಲಿಯ ರೆಸಾರ್ಟ್ ನಲ್ಲಿ ಮದುವೆ ಆಗಿದ್ದರು. ಅಲ್ಲದೇ ನವೆಂಬರ್ ನಲ್ಲಿ ಅಂತಹ ವಿಶೇಷ ದಿನಗಳಿಲ್ಲ. ವಿಶೇಷವಾದ ದಿನದಂದು ಮದುವೆ ಆದ್ರೆ ಎಲ್ಲರಿಗೂ ನೆನಪು ಇರುತ್ತದೆ. ಹಾಗಾಗಿ 2019ರ ವಿಶೇಷವಾದ ದಿನದಂದು ಮದುವೆಯಾಗಲು ದೀಪಿಕಾ ತೀರ್ಮಾನಿಸಿದ್ದಾರೆ ಎನ್ನಲಾಗುತ್ತಿದೆ.

ಇಟಲಿಯ ಕೋಮೋ ಸಿಟಿಯಲ್ಲಿ ಮದುವೆ ನಡೆಯಲಿದ್ದು, ನಂತರ ಬೆಂಗಳೂರು ಅಥವಾ ದೆಹಲಿ ಅಥವಾ ಮುಂಬೈನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯುವ ಸಾಧ್ಯತೆಗಳಿವೆ. ದೀಪಿಕಾ ಮತ್ತು ರಣ್‍ವೀರ್ ಇಬ್ಬರ ನೆಚ್ಚಿನ ತಾಣವಾಗಿರುವ ಕಾರಣ ಕೋಮೋ ಸಿಟಿಯಲ್ಲಿ ಮದುವೆ ನಡೆಯಲಿದೆ. ಮದುವೆಯಲ್ಲಿ ಕೇವಲ ಕುಟುಂಬಸ್ಥರು ಮತ್ತು ಆಪ್ತರು ಭಾಗಿಯಾಗಲಿದ್ದಾರೆ. ಮೂಲಗಳ ಪ್ರಕಾರ ಮದುವೆಯಲ್ಲಿ 30ಕ್ಕಿಂತ ಅಧಿಕ ಸದಸ್ಯರು ಪಾಲ್ಗೊಳ್ಳುವುದಿಲ್ಲವಂತೆ. ಇದನ್ನೂ ಓದಿ: ಇಟಲಿಯಲ್ಲಿ ರಣ್‍ವೀರ್, ದೀಪಿಕಾ ಮದುವೆ ಫಿಕ್ಸ್-ಬಾಲಿವುಡ್ ಹಿರಿಯ ನಟನಿಂದ ಶುಭಾಶಯ

ಇದೂವರೆಗೂ ರಣ್‍ವೀರ್ ಮತ್ತು ದೀಪಿಕಾ ಎಲ್ಲಿಯೂ ತಮ್ಮ ಮದುವೆಯ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿಲ್ಲ. ಈ ಜೋಡಿ ಮಾತ್ರ ಪ್ರೇಮಪಾಶದಲ್ಲಿದ್ದಾರೆ ಎಂಬುವುದಕ್ಕೆ ನಮ್ಮ ಮುಂದೆ ಹಲವು ಉದಾಹರಣೆಗಳಿವೆ. ರಾಮ್‍ಲೀಲಾ, ಬಾಜೀರಾವ್ ಮಸ್ತಾನಿ ಮತ್ತು ಪದ್ಮಾವತ್ ಮೂರು ಸೂಪರ್ ಹಿಟ್ ಚಿತ್ರಗಳನ್ನು ಈ ಜೋಡಿ ನೀಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Comments

Leave a Reply

Your email address will not be published. Required fields are marked *