ಶಿವಮೊಗ್ಗದಲ್ಲೂ Ransomware ಸೈಬರ್ ದಾಳಿ- 600 ಡಾಲರ್ ಹಣಕ್ಕೆ ಬೇಡಿಕೆ

ಶಿವಮೊಗ್ಗ: ಇಡೀ ವಿಶ್ವವೇ ವನ್ನಾಕ್ರೈ ransomware ಸೈಬರ್ ದಾಳಿಗೆ ತುತ್ತಾಗಿದ್ದು ಕಂಪ್ಯೂಟರ್‍ಗಳಿಗೆ ಸೆಕ್ಯುರಿಟಿ ನೀಡುವ ಸಂಸ್ಥೆಗಳಿಗೂ ತಲೆನೋವಾಗಿದೆ. ಸುಮಾರು 150 ದೇಶಗಳ 75 ಸಾವಿರ ಕಂಪ್ಯೂಟರ್ ಹಾಗೂ ಲ್ಯಾಪ್‍ಟಾಪ್ ಸಿಸ್ಟಂಗಳು ಈ ದಾಳಿಗೆ ತುತ್ತಾಗಿವೆ. ಈ ransomware ಮಲೆನಾಡಿಗೂ ದಾಳಿಯಿಟ್ಟಿದ್ದು ಶಿವಮೊಗ್ಗದ ಪೆಸಿಟ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರ ಲ್ಯಾಪ್‍ಟಾಪ್ ಕೂಡ ಸೈಬರ್ ದಾಳಿಗೆ ಒಳಗಾಗಿದೆ.

ಶಿವಮೊಗ್ಗದ ಗೋಪಾಲಗೌಡ ಬಡಾವಣೆಯ ಅರ್ಜುನ್ ಇಲ್ಲಿನ ಪೆಸಿಟ್-ಎಂ ಕಾಲೇಜಿನ ಐಎಸ್‍ಇ ವಿಭಾಗದ ಸಹಾಯಕ ಪ್ರಾಧ್ಯಾಪಕರು. ಇವರ ಲ್ಯಾಪ್‍ಟಾಪ್‍ನಲ್ಲಿ ಈ ತಂತ್ರಾಂಶ ಸ್ಥಾಪಿಸಲ್ಪಟ್ಟಿದೆ. ಇದು ಹೇಗೆ ಬಂತು ಎಂಬುದು ಅರ್ಜುನ್‍ಗೆ ಅರಿವಿಲ್ಲ. ಈಗ ಲ್ಯಾಪ್‍ಟಾಪ್‍ನ ಪರದೆ ಮೇಲೆ ಡೈಲಾಗ್ ಬಾಕ್ಸ್ ಕಾಣಿಸಿಕೊಂಡಿದ್ದು ಬಿಟ್‍ಕಾಯಿನ್ ರೂಪದಲ್ಲಿ 600 ಡಾಲರ್ ನೀಡಲು ಬೇಡಿಕೆ ಇಡಲಾಗಿದೆ.

ನಾವು ನಿಮ್ಮ ಎಲ್ಲಾ ಫೈಲ್‍ಗಳನ್ನು ಎನ್‍ಕ್ರಿಪ್ಟ್ ಮಾಡಿದ್ದೇವೆ. ಇವುಗಳನ್ನು ಡೀಕ್ರಿಪ್ಟ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಕೆಲವು ಫೈಲ್‍ಗಳನ್ನು ನಮ್ಮ ಫ್ರೀ ಟ್ರಯಲ್ ಸರ್ವಿಸ್‍ನಲ್ಲಿ ಡೀಕ್ರಿಪ್ಟ್ ಮಾಡಬಹುದು. ಎಲ್ಲಾ ಫೈಲ್‍ಗಳನ್ನು ಪುನಃ ಉಪಯೋಗಿಸಲು ನಾವು ಕೇಳಿದ ಹಣವನ್ನು ಮೂರು ದಿನಗಳಲ್ಲಿ ನಮಗೆ ನೀಡಬೇಕು ಎಂದು ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ: ಏನಿದು ವನ್ನಾಕ್ರೈ ಸೈಬರ್ ದಾಳಿ? ವಿಶ್ವವೇ ಬಿಚ್ಚಿ ಬಿದ್ದಿದ್ದು ಏಕೆ? ಯಾವ ದೇಶದಲ್ಲಿ ಏನಾಗಿದೆ?

 

Comments

Leave a Reply

Your email address will not be published. Required fields are marked *