‘ಟಕ್ಕರ್’ ನಲ್ಲಿ ಡಾಕ್ಟರ್ ಆದ ನಟಿ ರಂಜನಿ ರಾಘವನ್

ನ್ನಡತಿ ಧಾರಾವಾಹಿ ಮೂಲಕ ಮನೆ ಮಾತಾಗಿರುವ ರಂಜನಿ ರಾಘವನ್ ಸಿನಿಮಾದಲ್ಲೂ ಛಾಪು ಮೂಡಿಸುತ್ತಿದ್ದಾರೆ. ಕನ್ನಡತಿಯಲ್ಲಿ ಭುವಿಯಾಗಿ ಕಿರುತೆರೆ ಪ್ರೇಕ್ಷಕರ ಅಚ್ಚುಮೆಚ್ಚು ಎನಿಸಿಕೊಂಡಿರುವ ರಂಜನಿ ಇದೇ ಮೇ 6ರಂದು ಬೆಳ್ಳಿತೆರೆ ಮೇಲೆ ‘ಟಕ್ಕರ್’ ಕೊಟ್ಟು ಸಿನಿರಸಿಕರ ಮನಸ್ಸಿಗೆ ಲಗ್ಗೆ ಇಡೋಕೆ ಸಜ್ಜಾಗಿದ್ದಾರೆ.

ರಾಜಹಂಸ ಸಿನಿಮಾ ಮೂಲಕ ಬೆಳ್ಳಿ ತೆರೆಯಲ್ಲಿ ಅದೃಷ್ಟ ಪರೀಕ್ಷೆ ಗಿಳಿದಿರುವ ರಂಜನಿ ರಾಘವನ್ ಇದೀಗ ‘ಟಕ್ಕರ್’ ಸಿನಿಮಾದಲ್ಲಿ ನಾಯಕ ನಟಿಯಾಗಿ ಮಿಂಚುತ್ತಿದ್ದಾರೆ. ಸೈಬರ್ ಕ್ರೈಂ ಕಥಾಹಂದರ ಒಳಗೊಂಡ ಈ ಚಿತ್ರದ ಮೂಲಕ ಮತ್ತೊಬ್ಬ ಪ್ರತಿಭೆ ಮನೋಜ್ ಕುಮಾರ್ ನಾಯಕನಟನಾಗಿ ಸ್ಯಾಂಡಲ್‍ವುಡ್ ಅಂಗಳಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಚಿತ್ರದಲ್ಲಿ ರಂಜನಿ ಅವರದ್ದು ಡಾಕ್ಟರ್ ಪಾತ್ರ. ಎಲ್ಲರಿಗೂ ಕನೆಕ್ಟ್ ಆಗುವ ಪಾತ್ರ ಇದಾಗಿದ್ದು, ಹೀಗೆ ಬಂದು ಹಾಗೆ ಹೋಗುವ ಪಾತ್ರ ಇದಲ್ಲ. ಸಿನಿಮಾದ ಕಥೆಯ ಪ್ರಮುಖ ಜೀವಾಳ ತಮ್ಮ ಪಾತ್ರವಾಗಿರುತ್ತದೆ ಎನ್ನುತ್ತಾರೆ ನಟಿ ರಂಜನಿ ರಾಘವನ್.

ರನ್ ಆಂಟನಿ ಚಿತ್ರದ ಮೂಲಕ ಚಿತ್ರರಂಗದಲ್ಲಿ ಭರವಸೆ ಮೂಡಿಸಿರುವ ರಘು ಶಾಸ್ತ್ರಿ ಈ ಬಾರಿ ಸೈಬರ್ ಕ್ರೈಂ ಕಥಾಹಂದರ ಹೊತ್ತು ಬಂದಿದ್ದಾರೆ. ಚಿತ್ರದ ತಾರಾಬಳಗವೂ ದೊಡ್ಡದಿದ್ದು ಸಾಧುಕೋಕಿಲ, ಸುಮಿತ್ರ, ಭಜರಂಗಿ ಲೋಕಿ, ಜೈ ಜಗದೀಶ್ ಸೇರಿದಂತೆ ಹಲವರನ್ನೊಳಗೊಂಡ ದೊಡ್ಡ ತಾರಾಬಳಗ ಚಿತ್ರದಲ್ಲಿರುವುದರಿಂದ ಮನರಂಜನೆಗೇನು ಕೊರತೆಯಿಲ್ಲ ಎನ್ನುವುದು ಕನ್ಫರ್ಮ್. ಇದನ್ನೂ ಓದಿ:  ಪೊಲೀಸರೊಂದಿಗೆ ಹಾಡಿ ಕುಣಿದ ಹ್ಯಾಟ್ರಿಕ್ ಹೀರೋ : ‘ಟಗರು-2’ ಸುಳಿವು ಕೊಟ್ಟ ಶಿವಣ್ಣ

ಚಿತ್ರದ ಸಂಗೀತ ಸಾರಥ್ಯವನ್ನು ಕದ್ರಿ ಮಣಿಕಾಂತ್ ವಹಿಸಿಕೊಂಡಿದ್ದು, ಈಗಾಗಲೇ ಆಡಿಯೋ ಬಿಡುಗಡೆಯಾಗಿ ಎಲ್ಲರ ಮನಸೂರೆಗೊಂಡಿದೆ. ಎಸ್‍ಎಲ್‍ಎನ್ ಕ್ರಿಯೇಷನ್ಸ್ ಬ್ಯಾನರ್ ನಡಿ ನಾಗೇಶ್ ಕೋಗಿಲು ಚಿತ್ರವನ್ನು ನಿರ್ಮಾಣ ಮಾಡಿದ್ದು, ಮೇ 6ಕ್ಕೆ ರಾಜ್ಯಾದ್ಯಂತ ಚಿತ್ರ ಬಿಡುಗಡೆಯಾಗುತ್ತಿದೆ. ಇದನ್ನೂ ಓದಿ: ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಇಲ್ಲ, ಬೊಮ್ಮಾಯಿ ನೇತ್ರತ್ವದಲ್ಲಿ ಚುನಾವಣೆ: ನಳಿನ್

Comments

Leave a Reply

Your email address will not be published. Required fields are marked *