ನವದೆಹಲಿ: ಚಿತ್ರನಟ ಸಂಜಯ್ ದತ್ತಾ ಜೀವನಾಧಾರಿತ ಸಂಜು ಸಿನಿಮಾ ನಿರ್ಮಾಗೊಳ್ಳುತ್ತಿದೆ. ಇದರಲ್ಲಿ ಟ್ಯಾಲೆಂಟೆಡ್ ಸ್ಟಾರ್ ಖ್ಯಾತಿಯ ನಟ ರಣಬೀರ್ ಕಪೂರ್ ಅವರು ದತ್ತಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸಂಜಯ್ ದತ್ತಾ ಅವರ ಖಾಸಗಿ ಹಾಗೂ ವೃತ್ತಿ ಜೀವನ ತಿಳಿಸಲು ಸಂಜು ಸಿನಿಮಾ ತಂಡ ಮುಂದಾಗಿದೆ. ಹೀಗಾಗಿ ಸಂಜಯ್ ಜೈಲಿನ ದಿನಗಳ ಪೋಸ್ಟರ್ ಹಾಗೂ ಟ್ರೇಲರ್ ಅನ್ನು ನಿರ್ದೇಶಕ ರಾಜ್‍ಕುಮಾರ ಹಿರಾನಿ ಬಿಡುಗಡೆ ಮಾಡಿದ್ದಾರೆ. ಇವು ದತ್ತಾ ಪುಣೆಯ ಯರವಾಡ ಜೈಲಿನಲ್ಲಿರುವಾಗಿನ ದೃಶ್ಯಗಳನ್ನು ಬಿಂಬಿಸುವಂತಿವೆ.
ಇತ್ತೀಚೆಗೆ ಬಿಡುಗಡೆ ಮಾಡಲಾದ ಟ್ರೇಲರ್‍ಗಳಲ್ಲಿ ಸಂಜಯ್ ದತ್ತ ಅವರ ಪ್ರತಿಬಿಂಬದಂತೆ ರಣಬೀರ್ ಕಾಣುತ್ತಿದ್ದಾರೆ. ಸಿನಿಮಾದ ಪ್ರತಿ ಹಂತದಲ್ಲಿಯೂ ಸಂಜಯ್ ಅವರನ್ನೇ ಹೋಲುವ ಅವರು, ನಟನೆ, ಕೇಶವಿನ್ಯಾಸ, ಉಡುಗೆಯಿಂದ ಪ್ರೇಕ್ಷಕರಲ್ಲಿ ಸಂಜಯ್ ಅವರನ್ನೇ ಹೋಲುವಂತಿದೆ.
ಈ ಸಿನಿಮಾದಲ್ಲಿ ಸೋನಂ ಕಪೂರ್, ದಿಯಾ ಮಿರ್ಜಾ, ಪರೇಶ್ ರಾವಲ್, ಮನೀಶಾ ಕೊಯಿರಾಲಾ, ಅನುಷ್ಕಾ ಶರ್ಮಾ, ಕರಿಷ್ಮಾ ತಾನ್ನಾ, ಜಿಮ್ ಸರ್ಬ್ ಮೊದಲಾದ ತಾರಾಗಣ ಕಾಣಿಸಿಕೊಳ್ಳಲಿದೆ. ಚಿತ್ರವು ಈ ವರ್ಷದ ಜೂನ್ 29 ರಂದು ಬಿಡುಗಡೆಯಾಗಲಿದೆ.

Leave a Reply