ಪದ್ಮಾವತಿ ಸಿನಿಮಾ ನೋಡಲು ಕಾತುರನಾಗಿದ್ದೇನೆ: ರಣ್‍ಬೀರ್ ಕಪೂರ್

ಮುಂಬೈ: ಮಾಜಿ ಲವರ್ಸ್ ಒಳ್ಳೆ ಗೆಳೆಯರು ಆಗಬಹುದು ಎಂದು ದೀಪಿಕಾ ಪಡುಕೋಣೆ ಮತ್ತು ರಣ್‍ಬೀರ್ ಕಪೂರ್ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಪದ್ಮಾವತಿ ಚಿತ್ರವನ್ನು ನೋಡಲು ಕಾತುರನಾಗಿದ್ದೇನೆ ಎಂದು ರಣ್‍ಬೀರ್ ಕಪೂರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇತ್ತೀಚೆಗೆ ನಡೆದ ಜಿಯೋ ಮುಂಬೈ ಫಿಲಂ ಫೆಸ್ಟಿವಲ್ ಗೆ ಆಗಮಿಸಿದ ರಣ್‍ಬೀರ್‍ಗೆ ಮಾಧ್ಯಮದವರು ಕಾಂಪಿಟೀಷನ್ ಬಗ್ಗೆ ಕೇಳಿದ ಪ್ರಶ್ನೆಗೆ, ಕೆಲವು ಬಾರಿ ಬೇಸರವಾಗುತ್ತದೆ. ಮತ್ತೆ ಕೆಲವು ಬಾರಿ ಅದನ್ನೇ ಸ್ಫೂರ್ತಿಯನ್ನಾಗಿ ತೆಗೆದುಕೊಳ್ಳುತ್ತೇನೆ ಎಂದು ಉತ್ತರಿಸಿದರು.

ಬಾಲಿವುಡ್ ಅಂಗಳಕ್ಕೆ ನಾನು ಪಾದರ್ಪಣೆ ಮಾಡಿ ಹತ್ತು ವರ್ಷಗಳಾಗಿವೆ. ಮೊದಲು ನಾನು ಇನ್ನೊಬ್ಬರೊಂದಿಗೆ ತುಂಬಾ ಸ್ಪರ್ಧಿಸುತ್ತಿದ್ದೆ ಹಾಗೂ ಅಸೂಯೆ ಪಡುತ್ತಿದ್ದೆ. ಆದರೆ ಈಗ ಜೀವನದಲ್ಲಿ ಒಂದು ಗುರಿ ತಲುಪಿದ ಮೇಲೆ ನಮ್ಮ ಆಯ್ಕೆಗಳು ಹೆಚ್ಚು ಮಹತ್ವ ನೀಡುತ್ತದೆ ಎಂದು ರಣ್‍ಬೀರ್ ತಿಳಿಸಿದ್ದಾರೆ.

ದೀಪಿಕಾ ಪಡುಕೋಣೆ, ಶಾಹಿದ್ ಕಪೂರ್ ಮತ್ತು ರಣ್‍ವೀರ್ ಸಿಂಗ್ ಫಸ್ಟ್ ಲುಕ್ ನೋಡಿದ ಮೇಲೆ ಪದ್ಮಾವತಿ ಸಿನಿಮಾ ನೋಡುವುದಕ್ಕೆ ಕಾತುರನಾಗಿದ್ದೇನೆ ಎಂದು ರಣ್‍ಬೀರ್ ಕಪೂರ್ ತಿಳಿಸಿದ್ದಾರೆ.

 

 

Comments

Leave a Reply

Your email address will not be published. Required fields are marked *