ಆಲಿಯಾ, ರಣಬೀರ್ ಮದುವೆ: 200 ಬೌನ್ಸರ್ ನೇಮಕ, ಹೊಸ ಮನೆ ಸೇರಿ RK ಸ್ಟುಡಿಯೋ ಫುಲ್ ಲಕಲಕ

ಬಾಲಿವುಡ್ ಲವ್‌ಬರ್ಡ್ಸ್ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆಗೆ ಕೆಲವೇ ದಿನಗಳು ಬಾಕಿಯಿದೆ. ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ. ಸೆಲೆಬ್ರಿಟಿ ಲಿಸ್ಟ್, ಆಪ್ತವರ್ಗಗನ್ನು ಮದುವೆ ಸಮಾರಂಭಕ್ಕೆ ಆಮಂತ್ರಿಸುವಲ್ಲಿ ಆಲಿಯಾ ಮತ್ತು ರಣಬೀರ್ ಟೀಮ್ ಫುಲ್ ಬ್ಯುಸಿಯಾಗಿದೆ. ಇವರ ಮದುವೆ ತಯಾರಿ ಬಗ್ಗೆ ಅಪ್ಡೇಟ್‍ಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಆಲಿಯಾ ಮತ್ತು ರಣಬೀರ್ ಇಬ್ಬರು ಬಾಲಿವುಡ್ ಸೂಪರ್ ಸ್ಟಾರ್ ಆಗಿ ಮಿಂಚಿದವರು. 5 ವರ್ಷಗಳ ಲವ್ ಲೈಫ್‍ಗೆ ಹೊಸ ಅರ್ಥ ಕೊಡಲು ಈ ಜೋಡಿ ದಾಂಪತ್ಯಕ್ಕೆ ಕಾಲಿಡುವ ಮುಂದಾಗಿದೆ. ಇವರ ಕನಸು ನನಸಾಗುವ ಕಾಲಕ್ಕೆ ಕೆಲವೇ ದಿನಗಳಿಗೆ. ಈ ಹಿನ್ನೆಲೆ ಇವರ ಮದುವೆ ವೇಳೆ ಸೆಲೆಬ್ರಿಟಿಗಳ ದಂಡೆ ಬರುತ್ತೆ ಎನ್ನಲಾಗಿದೆ. ಪರಿಣಾಮ ಈ ಜೋಡಿ ಮದುವೆಗೆ 200 ಬೌನ್ಸರ್‍ಗಳನ್ನು ನೇಮಿಸಲಾಗಿದೆ ಎಂಬ ಸುದ್ದಿ ಬಿ’ಟೌನ್‍ನಲ್ಲಿ ಹರಿದಾಡುತ್ತಿದೆ.  ಇದನ್ನೂ ಓದಿ: ಅಪ್ಪು ಮನೆಗೆ ಭೇಟಿ ಕೊಟ್ಟ ಟಾಲಿವುಡ್ ಕಾಮಿಡಿ ಸ್ಟಾರ್ ಬ್ರಹ್ಮಾನಂದಂ, ಅಲಿ 

ಅಲ್ಲದೇ ಈ ಜೋಡಿಯ ಹೊಸ ಮನೆ ಕೃಷ್ಣ ರಾಜ್ ಮತ್ತು ಆರ್‍ಕೆ ಸ್ಟುಡಿಯೋವನ್ನು ಕಲರ್‍ಫುಲ್ ಆಗಿ ಅಲಂಕರಿಸಲಾಗಿದೆ. ಆದರೆ ಈ ಕುರಿತು ಭಟ್ ಮತ್ತು ಕಪೂರ್ ಕುಟುಂಬ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ಕೊಟ್ಟಿಲ್ಲ. ಆದರೆ ಈ ಕುಟುಂಬ ಮದುವೆಗೆ ಭಾರೀ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆ ಮುಂದಿನ ವಾರ ಏಪ್ರಿಲ್ 17 ನಡೆಯಲಿದೆ. ಈ ಕುರಿತು ಆಲಿಯಾ ಅವರ ಸೋದರಸಂಬಂಧಿ ರಾಹುಲ್ ಭಟ್ ಅವರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರ ಮದುವೆಯ ಭದ್ರತೆಯನ್ನು ಯೂಸುಫ್ ಭಾಯ್ ವಹಿಸಿಕೊಂಡಿದ್ದಾರೆ. ಇದನ್ನೂ ಓದಿ: ಏಪ್ರಿಲ್ 11ರಿಂದ ಕಲಬುರಗಿಯಲ್ಲಿ ನಾಲ್ಕು ದಿನ ಸಂವಿಧಾನ ನಾಟಕ ಪ್ರದರ್ಶನ

Ranbir

ಯೂಸುಫ್ ಭಾಯ್ ಅವರು ಮುಂಬೈನ ಅತ್ಯುತ್ತಮ ಭದ್ರತಾ ಪಡೆಯನ್ನು ಹೊಂದಿರುವ ಏಜೆನ್ಸಿಯಾಗಿದೆ. ಈ ಏಜೆನ್ಸಿಯಿಂದ ಸುಮಾರು 200 ಬೌನ್ಸರ್‌ಗಳನ್ನು ಕರೆಸಲಾಗಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ.

Comments

Leave a Reply

Your email address will not be published. Required fields are marked *