ರಣಬೀರ್ – ಆಲಿಯಾ ಮದುವೆ : ದಿಲ್ಬರೋ ಹಾಡಿಗೆ ಹೆಜ್ಜೆ ಹಾಕಲಿದೆ ಸ್ಟಾರ್ ಜೋಡಿ

ಭಾರತೀಯ ಸಿನಿಮಾ ರಂಗದಲ್ಲಿ ಥಿಯೇಟರ್ ಮೇಲೆ ಕೆಜಿಎಫ್ 2 ಸಿನಿಮಾದ ರಾಕಿಭಾಯ್ ಗರ್ಜಿಸುತ್ತಿದ್ದರೆ, ತೆರೆಯಾಚೆ ಬಾಲಿವುಡ್ ತಾರೆ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ಮದುವೆ ಸುದ್ದಿಯಾಗುತ್ತಿದೆ. ಇದನ್ನೂ ಓದಿ : ಕೆಜಿಎಫ್ 2 ಜೊತೆ ನೋಡಬಹುದು ಹೊಂಬಾಳೆ ಫಿಲ್ಮ್ಸ್ ನ ಮತ್ತೆರಡು ಸಿನಿಮಾ ಟೀಸರ್

ranbir alia

ನಿನ್ನೆಯಿಂದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ಮದುವೆ ಕಾರ್ಯಗಳು ಶುರುವಾಗಿದ್ದವು. ಮೊದಲು ಹಲ್ದಿ ಕಾರ್ಯಕ್ರಮಗಳು ನಡೆದಿವೆ. ಈ ಕಾರ್ಯಕ್ರಮದಲ್ಲಿ ಬಾಲಿವುಡ್ ನ ಅನೇಕ ತಾರೆಯರು ಭಾಗಿಯಾಗಿದ್ದರು. ಇವತ್ತು ಮೆಹಂದಿ ಮತ್ತು ಸಂಗೀತ ಕಾರ್ಯಕ್ರಮಗಳು ನಡೆಯುತ್ತಿದ್ದು, ಸಂಗೀತ ಕಾರ್ಯಕ್ರಮದಲ್ಲಿ ತಮ್ಮದೇ ಸಿನಿಮಾ ಹಾಡಿಗೆ ಆಲಿಯಾ ಭಟ್ ನೃತ್ಯ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ : ವಿಜಯ್ ಕಿರಗಂದೂರು ತವರಿಗೆ ಭೇಟಿ ನೀಡಿ ಹಿರಿಯರ ಆಶೀರ್ವಾದ ಪಡೆದ ಕೆಜಿಎಫ್ ಟೀಂ

ಆಲಿಯಾ ಭಟ್ ಅವರ ವೃತ್ತಿ ಜೀವನದ ಅತೀ ಮಹತ್ವದ ಸಿನಿಮಾವಾದ ‘ರಾಝಿ’ಯ ದಿಲ್ಬರೋ ಹಾಡಿಗೆ ಆಲಿಯಾ ಡಾನ್ಸ್ ಮಾಡಲಿದ್ದಾರಂತೆ. 2018ರಲ್ಲಿ ತೆರೆಕಂಡ ಈ ಸಿನಿಮಾ ಆಲಿಯಾ ಭಟ್ ಅವರ ವೃತ್ತಿ ಬದುಕಿಗೆ ಮಹತ್ವದ ತಿರುವು ನೀಡಿತ್ತು. ಈ ಚಿತ್ರದ ಅಭಿನಯಕ್ಕಾಗಿ ಅವರು ಸಾಕಷ್ಟು ಪ್ರಶಸ್ತಿಗಳು ಬಂದಿದ್ದವು. ಅಲ್ಲದೇ, ಈ ಸಿನಿಮಾದ ನಟನೆಯು ಪ್ರಶಂಸೆಗೆ ಪಾತ್ರವಾಗಿತ್ತು. ರಾ ಏಜೆಂಟ್ ಆಗಿ ಆಲಿಯಾ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದನ್ನೂ ಓದಿ: ಗ್ರೌಂಡ್ ರಿಪೋರ್ಟ್ : ರಿಲೀಸ್ ಹಿಂದಿನ ಪಕ್ಕಾ ಲೆಕ್ಕಾಚಾರ, ಆರ್.ಆರ್.ಆರ್ ದಾಖಲೆ ಮುರಿದ ಕೆಜಿಎಫ್ 2

ಈಗಾಗಲೇ ಈ ಹಾಡಿನ ನೃತ್ಯಕ್ಕೆ ಸರ್ವ ರೀತಿಯಲ್ಲೂ ಸಿದ್ಧತೆ ಮಾಡಿಕೊಂಡಿದ್ದು, ದಿಲ್ಬರೋ ಹಾಡಿನ ನಂತರ ಆಲಿಯಾ ಮತ್ತು ರಣಬೀರ್ ಕಾಂಬಿನೇಷನ್ ನ ಗೀತೆಗಳಿಗೆ ಈ ಜೋಡಿ ನೃತ್ಯ ಮಾಡಲಿದೆಯಂತೆ. ಒಟ್ಟು ಐದು ದಿನಗಳ ಕಾಲ ನಡೆಯುವ ಮದುವೆ ಕಾರ್ಯಗಳನ್ನು ಆದಷ್ಟು ಗೌಪ್ಯವಾಗಿ ಇಡಲಾಗಿದೆ. ಬೆರಳೆಣಿಕೆಯ ಗಣ್ಯರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ನಂತರ ಆರತಕ್ಷತೆ ಕಾರ್ಯಕ್ರಮಕ್ಕೆ ಪ್ರತಿಷ್ಠಿತ ಹೋಟಲ್ ಬುಕ್ ಆಗಿದ್ದು, ಅಲ್ಲಿ ಸಿನಿ ತಾರೆಯರಿಗೆ ಆಹ್ವಾನ ನೀಡಿದ್ದಾರಂತೆ.

Comments

Leave a Reply

Your email address will not be published. Required fields are marked *