ಬೆಂಗಳೂರು: ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ, ನಟಿ ರಮ್ಯಾ, ಫೋಟೋ ಶಾಪ್ ಮಾಡಿದ್ದಫೋಟೋವನ್ನು ಟ್ವೀಟ್ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರ ಕಾಲೆಳೆಯಲು ಪ್ರಯತ್ನಿಸಿದ್ದು, ಆದರೆ ನೈಜ ಫೋಟೋವನ್ನು ಟ್ವೀಟ್ ಮಾಡುವ ಮೂಲಕ ನೆಟ್ಟಿಗರು ರಮ್ಯಾ ವಿರುದ್ಧ ಕಿಡಿಕಾರಿದ್ದಾರೆ.
ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಮಕ್ಕಳೊಂದಿಗೆ ಇರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಆದರೆ ಈ ಫೋಟೋದಲ್ಲಿ ಹಿಟ್ಲರ್ ಅವರ ಫೋಟೋವನ್ನು ಫೋಟೋಶಾಪ್ ಮಾಡಲಾಗಿದೆ. ಮಗುವಿನೊಂದಿಗೆ ಇರುವ ಹಿಟ್ಲರ್ ಫೋಟೋವನ್ನು ಮಗುವಿನ ಕಿವಿ ಹಿಂಡುವಂತೆ ಫೋಟೋಶಾಪ್ ಮಾಡಲಾಗಿದೆ. ಇದೇ ರೀತಿ ಮೋದಿ ಅವರ ಪುಟ್ಟ ಬಾಲಕನೊಂದಿಗೆ ಇರುವ ಫೋಟೋಗೆ ಹೋಲಿಕೆ ಮಾಡಿ ನಿಮ್ಮ ಅಭಿಪ್ರಾಯ ಏನು ಎಂದು ಪ್ರಶ್ನಿಸಿ ರಮ್ಯಾ ಟ್ವೀಟ್ ಮಾಡಿದ್ದಾರೆ.
What are your thoughts? pic.twitter.com/b8GcgKL2ih
— Ramya/Divya Spandana (@divyaspandana) April 29, 2019
ರಮ್ಯಾ ಅವರ ಟ್ವೀಟ್‍ಗೆ ತಿರುಗೇಟು ನೀಡಿ ಟ್ವೀಟ್ ಮಾಡಿರುವ ಹಲವು ಮಂದಿ ಹಿಟ್ಲರ್ ಮಗುವಿನೊಂದಿಗೆ ಇರುವ ಆಸಲಿ ಫೋಟೋ ಟ್ವೀಟ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಫೋಟೋಶಾಪ್ ಮಾಡಿದ ಫೋಟೋವನ್ನು ನೀವು ಟ್ವೀಟ್ ಮಾಡಿದ್ದು, ಆಸಲಿ ಫೋಟೋ ಇಲ್ಲಿದೆ ನೋಡಿ ಎಂದಿದ್ದಾರೆ. ಅಲ್ಲದೇ ಅಪ್ಪು ಎಂಬವರು ರಾಜೀವ್ ಗಾಂಧಿ ಅವರು ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಇರುವ ಫೋಟೋವನ್ನು ಹಿಟ್ಲರ್‍ಗೆ ಹೋಲಿಕೆ ಮಾಡಿ ತಿರುಗೇಟು ನೀಡಿದ್ದಾರೆ.
ಇದೇ ವೇಳೆ ಹಲವರು ರಮ್ಯಾ ಅವರು ವೋಟ್ ಮಾಡದ ಬಗ್ಗೆ ಪ್ರಸ್ತಾಪ ಮಾಡಿ ಕಾಲೆಳೆದಿದ್ದು, ಮೊದಲು ನೀವು ವೋಟ್ ಮಾಡಿ ಮೇಡಂ. ಆ ಬಳಿಕ ಇತರರಿಗೆ ಬುದ್ಧಿ ಹೇಳಿ ಎಂದು ಬರೆದು ತರಾಟೆಗೆ ತೆಗೆದುಕೊಂಡಿದ್ದಾರೆ.
Pic – 1 Original
Pic – 2 PhotoshopNext time try harder or sack your Photoshop Intern! pic.twitter.com/5ACSXq5RWj
— Darshan Pathak (@darshanpathak) April 29, 2019
https://twitter.com/17_appu/status/1122759483891994624

Leave a Reply