ಅಮಿತ್ ಶಾ ಸಸ್ಯಹಾರಿ ಅಲ್ವಾ? ರಮ್ಯಾ ಪ್ರಶ್ನೆ

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಸ್ಯಹಾರಿ ಅಲ್ವಾ ಎಂಬ ಪ್ರಶ್ನೆಯೊಂದನ್ನು ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಟ್ವಟ್ಟರ್ ನಲ್ಲಿ ಕೇಳಿದ್ದಾರೆ.

ಕೊಪ್ಪಳದ ಗವಿಸಿದ್ದೇಶ್ವರ ಮಠದೊಳಗೆ ಪ್ರವೇಶಿಸಲು ಬಾಗಿಲು ಚಿಕ್ಕದಾಗಿರೋದ್ರಿಂದ ಅಮಿತ್ ಶಾ ಅವರಿಗೆ ಗರ್ಭಗುಡಿ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ ಅಂತಾ ಹೇಳಲಾಗಿದೆ. ಈ ಹಿಂದೆ ಇದೇ ಮಠಕ್ಕೆ ಭೇಟಿ ನೀಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗರ್ಭಗುಡಿ ಪ್ರವೇಶಿಸಿ ದೇವರ ದರ್ಶನ ಪಡೆದಿದ್ದರು.

ರಮ್ಯಾ ಟ್ವಟ್ಟರ್ ನಲ್ಲಿ ಫೆಬ್ರವರಿ 10ರಂದು ರಾಹುಲ್ ಗಾಂಧಿ ಗರ್ಭ ಗುಡಿ ಪ್ರವೇಶಿಸಿ ದರ್ಶನ ಪಡೆದಿರುವ ವಿಡಿಯೋ ಅಪ್ಲೋಡ್ ಮಾಡಿಕೊಂಡಿದ್ದಾರೆ. ಸ್ಲಿಮ್ ಆ್ಯಂಡ್ ಫಿಟ್ ಆಗಿರೋ ರಾಹುಲ್ ಗಾಂಧಿ ಸರಾಗವಾಗಿ ಗರ್ಭಗುಡಿ ಪ್ರವೇಶಿಸಿದ್ರು, ಆದ್ರೆ ದಪ್ಪವಾಗಿದ್ದರಿಂದ ಅಮಿತ್ ಶಾ ಒಳಗಡೆ ಹೋಗಿಲ್ಲ ಎಂದು ಪರೋಕ್ಷವಾಗಿ ಕಾಲೆಳೆದಿದ್ದಾರೆ. ಇನ್ನು ರಮ್ಯಾ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ಟ್ವಿಟ್ಟಿಗರು, ರಾಜಕೀಯವಾಗಿ ಕಾಲೆಳೆಯೋದು ಓಕೆ ಆದ್ರೆ ತೀರಾ ವೈಯಕ್ತಿಕವಾಗಿ ದೇಹದ ಗಾತ್ರದ ಬಗ್ಗೆ ಲೇವಡಿ ಮಾಡೋದು ಸರಿಯಲ್ಲ ಅಂತಾ ಕಿಡಿಕಾರಿದ್ದಾರೆ.

ಇಂದು ಸಹ ಚುನಾವಣೆ ಪ್ರಚಾರ ಹಿನ್ನೆಲೆಯಲ್ಲಿ ಅಮಿತ್ ಶಾ ಕೂಡಲ ಸಂಗಮಕ್ಕೆ ಭೇಟಿ ನೀಡಿದ್ದರು. ಸಂಗಮನಾಥ್ ಸ್ವಾಮಿಯ ದರ್ಶನ ಪಡೆದ ಅಮಿತ್ ಶಾ, ಬಸವಣ್ಣರ ಐಕ್ಯಮಂಟಪಕ್ಕೆ ತೆರಳದೇ ನೆಪ ಮಾತ್ರಕ್ಕೆ ಮೇಲಿನಿಂದಲೇ ನಿಂತು ನಮಸ್ಕರಿಸಿ ಹಿಂದಿರುಗಿದ್ರು.

Comments

Leave a Reply

Your email address will not be published. Required fields are marked *