ನಾನು ಬಾಸ್ಕೆಟ್‌ಬಾಲ್ ಪ್ಲೇಯರ್, ಸ್ಪೋರ್ಟ್ಸ್‌ಗೆ ಹೈಟ್ ಮ್ಯಾಟರ್ ಆಗಲ್ಲ: ರಮ್ಯಾ

ಕ್ವೀನ್ಸ್ ಪ್ರೀಮಿಯರ್ ಲೀಗ್ (QPL) ಲೋಗೊ ಲಾಂಚ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸ್ಯಾಂಡಲ್‌ವುಡ್‌ನ ಮೋಹಕತಾರೆ ರಮ್ಯಾ (Ramya) ಲೋಗೊ ಲಾಂಚ್ ಮಾಡಿದ್ದಾರೆ.

ಈ ಸಂದರ್ಭ ಮಾತನಾಡಿದ ಅವರು, ತಮ್ಮ ಬಾಲ್ಯದ ದಿನಗಳ ಬಗ್ಗೆ ಮೆಲುಕು ಹಾಕಿಕೊಂಡಿದ್ದಾರೆ. ಅಲ್ಲದೇ ಸಿನಿಮಾ ಇಂಡಸ್ಟ್ರಿಯಲ್ಲಿ ಹೆಣ್ಣುಮಕ್ಕಳಿಗೆ ಸಪೋರ್ಟ್ ಕಡಿಮೆ. ಕ್ರೀಡೆಯಲ್ಲಿ ಗಂಡು ಮಕ್ಕಳು ಡೊಮಿನೇಟ್ ಮಾಡ್ತಾರೆ. ಹೆಣ್ಮಕ್ಕಳು ಕ್ರೀಡೆಯಲ್ಲಿ ಭಾಗಿಯಾಗಬೇಕು ಎಂದಿದ್ದಾರೆ. ಇದನ್ನೂ ಓದಿ: ಕೆಡಿ ಟೀಸರ್ ಡೇಟ್ ಘೋಷಣೆ – ಪ್ರಚಾರದ ವೈಖರಿಯಲ್ಲಿದೆ ಮಿಸ್ಟರಿ!

ಬಡವ, ಶ್ರೀಮಂತ ಎನ್ನದೇ ಆಡೋ ಆಟ ಅಂದ್ರೆ ಅದು ಕ್ರೀಡೆ. ನಾನು ಬಾಸ್ಕೆಟ್‌ಬಾಲ್ ಪ್ಲೇಯರ್. ಅದರಲ್ಲಿ ನಾನು ಪ್ರವೀಣೆ. ನಾನು ಹೈಟ್ ಕಮ್ಮಿ ಇದೀನಿ ಅಂತಾ ಅಲ್ಲ. ಸ್ಪೋರ್ಟ್ಸ್‌ಗೆ ಹೈಟ್ ಮ್ಯಾಟರ್ ಆಗೋದೇ ಇಲ್ಲ. ಅಪ್ಪು ನಾನು ಇಬ್ಬರು ಆರ್‌ಸಿಬಿ ತಂಡಕ್ಕೆ ರಾಯಭಾರಿ ಆಗಿದ್ದೆವು. ಕನ್ನಡ ಚಿತ್ರರಂಗದಲ್ಲಿ ಯುನಿಟಿ ಕಾಣಿಸುತ್ತಿಲ್ಲ. ಈ ರೀತಿ ಸ್ಪೋರ್ಟ್ಸ್ ಹಮ್ಮಿಕೊಂಡ್ರೆ ಆಗಲಾದ್ರೂ ಒಗ್ಗಟ್ಟು ಕಾಣಿಸುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದರ್ಶನ್ ಫ್ಯಾಮಿಲಿ ಕುಡಿ ಶೀಘ್ರದಲ್ಲೇ ಹೀರೋ ಆಗಿ ಎಂಟ್ರಿ?

ಇತ್ತೀಚೆಗೆ ಸ್ಯಾಂಡಲ್‌ವುಡ್‌ನ ಹಲವಾರು ಕಾರ್ಯಕ್ರಮಗಳಿಗೆ ಬರುತ್ತಿರುವ ಬಗ್ಗೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹೊಸ ಹೊಸ ಸಿನಿಮಾ ತಂಡದವ್ರು ಆಹ್ವಾನ ಮಾಡಿದ್ರೆ ಅಥವಾ ಸಿನಿಮಾ ಪ್ರಮೋಷನ್ ಬಗ್ಗೆ ಕೇಳಿಕೊಂಡಾಗ ಮಾಡಿಕೊಟ್ಟಿದ್ದೇನೆ ಎಂದಿದ್ದಾರೆ.

ಹೊಸಬರಾದ್ರೂ ನಾನು ಅವರಿಗೆ ಸಪೋರ್ಟ್ ಮಾಡುತ್ತೇನೆ. ನಾನು ಇವತ್ತು ಈ ಸ್ಥಾನದಲ್ಲಿ ಇರೋಕೆ ಕಾರಣ ಮಾಧ್ಯಮದವರು ಹಾಗೂ ಕರುನಾಡಿನ ಜನತೆ. ನೀವು ಸಿನಿಮಾ ನೋಡಿ, ನನಗೆ ಸಪೋರ್ಟ್ ಮಾಡಿದ್ದೀರಾ. ಕ್ವೀನ್ಸ್ ಪ್ರೀಮಿಯರ್ ಲೀಗ್‌ನಿಂದ ಹೆಣ್ಣುಮಕ್ಕಳಿಗೆ ಸ್ಪೋರ್ಟ್ಸ್‌ನಲ್ಲಿ ಭಾಗಿಯಾಗೋಕೆ ಅವಕಾಶ ಸಿಗುತ್ತದೆ. ಎಲ್ಲರೂ ಒಗ್ಗಟ್ಟಾಗಿ ಬೆರೆಯೋಕೆ, ಟೈಂ ಕಳೆಯೋಕೆ ಅವಕಾಶ ಸಿಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾಷೆ ಹೆಸರಲ್ಲಿ ಜನರನ್ನು ವಿಭಜಿಸಬಾರದು: ಮರಾಠಿ-ಹಿಂದಿ ಸಂಘರ್ಷ ಬಗ್ಗೆ ಕಂಗನಾ ಪ್ರತಿಕ್ರಿಯೆ

ಮೋಹಕತಾರೆ ರಮ್ಯಾ ಇತ್ತೀಚೆಗೆ ಸ್ಯಾಂಡಲ್‌ವುಡ್ ಕಡೆ ಹಾಗೂ ಅದಕ್ಕೆ ಪೂರಕವಾದ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅಲ್ಲದೇ ಅವರ ಅಭಿಮಾನಿಗಳಿಗೆ ಸದ್ಯದಲ್ಲಿಯೇ ಗುಡ್‌ನ್ಯೂಸ್ ನೀಡಲು ರೆಡಿಯಾಗಿದ್ದಾರೆ.