ರಮ್ಯಾ ನನ್ನ ನೆಚ್ಚಿನ ನಟಿ ಎಂದ ಸಂಸದ ಪ್ರತಾಪ್ ಸಿಂಹ : ಶುರುವಾಯ್ತು ರಾಜಕೀಯ ಲೆಕ್ಕಾಚಾರ

ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ (Pratap Simha) ಇತ್ತೀಚೆಗಷ್ಟೇ ನಟಿ ರಮ್ಯಾರನ್ನು (Ramya) ಭೇಟಿ ಮಾಡಿದ್ದಾರೆ. ರಮ್ಯಾ ಜೊತೆಗೆ ಫೋಟೋವನ್ನೂ ತೆಗೆಸಿಕೊಂಡಿದ್ದಾರೆ. ಆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ, ‘ರಮ್ಯಾ ನನ್ನ ನೆಚ್ಚಿನ ನಟಿ’ ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್ ಭಾರಿ ಚರ್ಚೆಯನ್ನು ಹುಟ್ಟು ಹಾಕಿದೆ. ಅದಕ್ಕೆ ರಾಜಕೀಯ ಬಣ್ಣವನ್ನು ಬೆರೆಸಲಾಗಿದೆ.

ರಮ್ಯಾ ಕೇವಲ ನಟಿ ಮಾತ್ರವಲ್ಲ, ಕಾಂಗ್ರೆಸ್ (Congress) ಪಕ್ಷದ ಮುಖ್ಯ ಹುದ್ದೆಯಲ್ಲಿದ್ದವರು. ಮಾಜಿ ಸಂಸದೆ ಕೂಡ. ಪ್ರತಾಪ್ ಸಿಂಹ ಬಿಜೆಪಿ (BJP) ಪಕ್ಷದಿಂದ ಸಂಸದರಾದವರು. ಅಲ್ಲದೇ, ಹತ್ತಿರದಲ್ಲೇ ಚುನಾವಣೆಯಿದೆ. ಈ ಎಲ್ಲ ಕಾರಣದಿಂದಾಗಿ ಪ್ರತಾಪ್ ಶೇರ್ ಮಾಡಿರುವ ಫೋಟೋ ಮತ್ತು ಬರಹ ಮಹತ್ವ ಪಡೆದುಕೊಂಡಿದೆ. ಹಲವರು ಇದನ್ನು ಹಲವು ರೀತಿಯಲ್ಲಿ ಬಣ್ಣಿಸುವ ಕೆಲಸವನ್ನೂ ಮಾಡಿದ್ದಾರೆ. ಇದನ್ನೂ ಓದಿ: ಪ್ರೆಗ್ನೆನ್ಸಿ ಸುದ್ದಿ ಹಬ್ಬಿಸಿದವರಿಗೆ ಖಡಕ್ ಉತ್ತರ ಕೊಟ್ಟ ವಿದ್ಯಾ ಬಾಲನ್

ವಿರೋಧಿ ಪಕ್ಷದ ಮಾಜಿ ಸಂಸದೆಯನ್ನು ‘ನನ್ನ ನೆಚ್ಚಿನ ನಟಿ’ ಎಂದು ಕರೆಯುವುದರ ಹಿಂದೆ ಏನಾದರೂ ಉದ್ದೇಶವಿದೆಯಾ? ಎಂದು ಕೆಲವರು ಪ್ರಶ್ನೆ ಮಾಡಿದ್ದರೆ, ಇನ್ನೂ ಕೆಲವರು ‘ರಮ್ಯಾ ಅವರನ್ನು ಹಲವು ಬಾರಿ ಟೀಕಿಸಿದ್ದೀರಿ. ಈಗ ನೆಚ್ಚಿನ ನಟಿ ಎನ್ನುತ್ತಿರಲ್ಲ ಹೇಗೆ? ಎಂದೂ ಪ್ರಶ್ನೆ ಮಾಡಿದ್ದಾರೆ. ರಮ್ಯಾ ಏನಾದರೂ ಬಿಜೆಪಿಗೆ ಸೇರ್ಪಡೆಯಾಗುತ್ತಾರಾ? ಎಂದು ಹಲವರು ಕೇಳಿದ್ದೂ ಇದೆ. ಎಲ್ಲದಕ್ಕೂ ಪ್ರತಾಪ್ ಉತ್ತರಿಸಿದ್ದಾರೆ.

ರಮ್ಯಾ ನನ್ನ ನೆಚ್ಚಿನ ನಟಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರನ್ನು ನಟಿಯಾಗಿ ಮೆಚ್ಚಿಕೊಂಡಿದ್ದೇನೆ. ರಾಜಕೀಯವಾಗಿ ಈಗಲೂ ಟೀಕಿಸುವೆ. ರಾಜಕಾರಣ ಬೇರೆ, ಕಲೆ ಬೇರೆ ಎಂದು ಪ್ರತಾಪ್ ಉತ್ತರಿಸಿದ್ದಾರೆ. ಅಂದಹಾಗೆ  ನಿನ್ನೆಯಷ್ಟೇ ನಡೆದ ರಿಷಬ್ ಶೆಟ್ಟಿ ಮಗಳ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ತೆಗೆದ ಫೋಟೋ ಆಗಿದೆ.

Comments

Leave a Reply

Your email address will not be published. Required fields are marked *