ಮಂಡ್ಯ: ಮತದಾರರ ಪಟ್ಟಿಯಲ್ಲಿ ಮಾಜಿ ಸಂಸದೆ ರಮ್ಯಾಗೆ ಮತ್ತೆ 420 ಸಂಖ್ಯೆ ಸಿಕ್ಕಿದೆ.
ಮತದಾರರ ಪಟ್ಟಿಯಲ್ಲಿ ರಮ್ಯಾ ಹೆಸರು ದಿವ್ಯಸ್ಪಂದನ ಆಗಿದೆ. ರಮ್ಯಾ ಕಳೆದ ವಿಧಾನಸಭಾ ಚುನಾವಣೆಯಲ್ಲೂ 420 ಸಂಖ್ಯೆ ಹೊಂದಿದ್ದರು. ಆದರೆ ನಗರಸಭೆ ಚುನಾವಣೆಯ ಮತದಾರರ ಪಟ್ಟಿಯಲ್ಲಿ ರಮ್ಯಾ ಸಂಖ್ಯೆ 671ಕ್ಕೆ ಬದಲಾಗಿತ್ತು.

ನಾಳೆ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ. ಇದೀಗ ಮತ್ತೆ ಮತದಾರರ ಪಟ್ಟಿಯಲ್ಲಿ ರಮ್ಯಾಗೆ 420 ಸಂಖ್ಯೆ ದೊರಕಿದೆ.
ಸದ್ಯ ರಮ್ಯಾ ನಾಳೆ ನಡೆಯುವ ಚುನಾವಣೆಯಲಾದರೂ ಮತದಾನ ಮಾಡುತ್ತಾರಾ ಎಂಬ ಚರ್ಚೆ ಮಂಡ್ಯ ಜನರಲ್ಲಿ ಮತ್ತೆ ಆರಂಭವಾಗಿದೆ. ಈ ಹಿಂದೆ ರಮ್ಯಾ ವಿಧಾನಸಭೆ ಹಾಗೂ ನಗರಸಭೆ ಚುನಾವಣೆಯಲ್ಲಿ ಮತದಾನಕ್ಕೆ ಬರಲಿಲ್ಲ. ಮಾಜಿ ಸಂಸದೆ ಜೊತೆಗೆ ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥೆಯಾಗಿದ್ದುಕೊಂಡು ಮತದಾನದ ಹಕ್ಕು ಚಲಾಯಿಸದ್ದಕ್ಕೆ ರಮ್ಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply