ರಾಮೇಶ್ವರಂ ಕೆಫೆ ಸ್ಫೋಟ ಕೇಸ್‌- ಆರೋಪಿಯನ್ನು ಕರೆ ತಂದು ಮರು ಸೃಷ್ಟಿ ಹೇಗೆ ಮಾಡಲಾಯ್ತು?

ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ (Rameshwaram Cafe Bomb Blast) ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಉಗ್ರ ಮುಸ್ಸಾವೀರ್ ಹುಸೇನ್ (Mussavir Hussain) ಸಮ್ಮುಖದಲ್ಲಿ ಎನ್‌ಐಎ (NIA) ಇಂದು ಸ್ಥಳ ಮಹಜರು ನಡೆಸಿತು.

ಬಂಧನ ಮಾಡಿದ ಬಳಿಕ 5 ತಿಂಗಳ ನಂತರ ಮುಸ್ಸಾವೀರ್‌ ಹುಸೇನ್‌ನನ್ನು ರಾಮೇಶ್ವರಂ ಕೆಫೆಗೆ ಕರೆದುಕೊಂಡು ಬಂದು ಘಟನೆಯನ್ನು ಮರುಸೃಸ್ಟಿ ಮಾಡಿದ್ದಾರೆ. ಇದನ್ನೂ ಓದಿ: ಕೋಚಿಂಗ್‌ ಸೆಂಟರ್‌ಗಳು ಡೆತ್‌ ಚೇಂಬರ್‌ಗಳಾಗಿ ಮಾರ್ಪಟ್ಟಿವೆ – ಸುಪ್ರೀಂ ಚಾಟಿ

ವೋಲ್ವೋ ಬಸ್ಸಿನಲ್ಲಿ ಬಂದ ಮುಸ್ಸಾವೀರ್‌ ರಾಮೇಶ್ವರಂ ಕೆಫೆ ಮುಂಭಾಗದಲ್ಲಿರುವ ಬಸ್ ನಿಲ್ದಾಣದಲ್ಲಿ ಇಳಿದಿದ್ದ. ಬಳಿಕ ಕಪ್ಪು ಬಣ್ಣದ ಬ್ಯಾಗ್‌ ತಲೆಗೆ ಟೊಪ್ಪಿ, ಮುಖಕ್ಕೆ ಮಾಸ್ಕ್ ಧರಿಸಿ ಹೋಟೆಲ್ ಒಳಗಡೆ ಪ್ರವೇಶಿಸಿದ್ದ.

ಕ್ಯಾಶ್‌ ಕೌಂಟರ್‌ನಲ್ಲಿ ಇಡ್ಲಿ ಮತ್ತು ವಡೆಯನ್ನು ಖರೀದಿಸಿ ತಿಂಡಿ ತಿಂದು ಬಾಂಬ್‌ ಇಟ್ಟು ಬಟ್ಟೆ ಬದಲಿಸಿಕೊಂಡು ಬಸ್ ಮೂಲಕ ತಲೆಮರಿಸಿಕೊಂಡಿದ್ದ. ಇದನ್ನೂ ಓದಿ: Valmiki Scam | 3 ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ – ನಾಗೇಂದ್ರ, ದದ್ದಲ್‌ ಹೆಸರಿಲ್ಲ

ಮಾರ್ಚ್ 1 ರಂದು ಹೋಟೆಲ್‌ ಪ್ರವೇಶ ಮಾಡಿದ್ದು ಹೇಗೆ? ಪ್ರವೇಶ ಮಾಡಿದ ಬಳಿಕ ಪರಾರಿಯಾಗಿದ್ದು ಹೇಗೆ ಎನ್ನುವ ಮರು ಸೃಷ್ಟಿಯನ್ನು ಮುಸ್ಸಾವೀರ್ ಕೈಯಲ್ಲಿ ಮಾಡಿಸಲಾಯ್ತು. ಮುಂಜಾನೆ 5 ಗಂಟೆಯಿಂದ ಆರಂಭವಾದ ಎನ್‌ಐಎ ಮಹಜರು ಹಾಗೂ ಮರುಸೃಷ್ಟಿ ಕಾರ್ಯ ಸುಮಾರು ಮೂರು ಗಂಟೆಗಳ ಕಾಲ ನಡೆಯಿತು.

ಬಾಂಬ್‌ ಇಟ್ಟ ಬಳಿಕ ಮುಸಾವೀರ್ ಹೂಡಿ ಬಳಿ ಇರುವ ಮಸೀದಿ ಹತ್ತಿರ ಬಟ್ಟೆಯನ್ನು ಬದಲಾವಣೆ ಮಾಡಿ ಬೆಂಗಳೂರಿನಿಂದ  ಪರಾರಿಯಾಗಿದ. ಹೀಗಾಗಿ ಮಸೀದಿ ಹತ್ತಿರ ಕೂಡ ಮಹಜರ್ ಪ್ರಕ್ರಿಯೆ ಹಾಗೂ ಮರುಸೃಷ್ಟಿ ಪ್ರಕ್ರಿಯೆ ಮಾಡಲಾಯಿತು.