ಬಟ್ಟೆ ಬಿಚ್ಚಿ ತಿರುಗುವವರಿಗೇನ್‌ ಗೊತ್ತು ಗಾಂಧಿ ಮೌಲ್ಯ: ಕಂಗನಾ ವಿರುದ್ಧ ರಮೇಶ್‌ ಕುಮಾರ್‌ ಕಿಡಿ

ಬೆಂಗಳೂರು: ಗಾಂಧೀಜಿ ಅಹಿಂಸಾ ಮಾರ್ಗದ ಬಗ್ಗೆ ವ್ಯಂಗ್ಯವಾಡಿದ್ದ ಬಾಲಿವುಡ್‌ ನಟಿ ಕಂಗನಾ ರಣಾವತ್‌ ವಿರುದ್ಧ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಕಿಡಿಕಾರಿದ್ದಾರೆ. ಬಟ್ಟೆ ಬಿಚ್ಚಿ ಓಡಾಡುವವರಿಗೆ ಗಾಂಧಿ ಮೌಲ್ಯದ ಬಗ್ಗೆ ಏನು ಗೊತ್ತು ಎಂದು ತಿರುಗೇಟು ನೀಡಿದರು.

ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ರಮೇಶ್‌ ಕುಮಾರ್‌, ಹೊಟ್ಟೆಪಾಡಿಗಾಗಿ ಬಟ್ಟೆಬಿಚ್ಚಿ ತಿರುಗುವವರು ಅವರು. ಅಂಥವರ ಬಗ್ಗೆ ಇಲ್ಲಿ ಮಾತನಾಡಿದರೆ ಅವರೇ ದೊಡ್ಡವರಾಗುತ್ತಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಅವಳಿ ಮಕ್ಕಳಿಗೆ ಪೋಷಕರಾದ ನಟಿ ಪ್ರೀತಿ ಜಿಂಟಾ ದಂಪತಿ

ಆರ್‌ಎಸ್‌ಎಸ್‌ ವಿರುದ್ಧ ಕಿಡಿಕಾರಿದ ಮಾಜಿ ಸ್ಪೀಕರ್‌, ಈ ದೇಶಕ್ಕೆ ಸ್ವಾತಂತ್ರ್ಯ ಯಾರೂ ಗಿಫ್ಟ್ ಕೊಡ್ಲಿಲ್ಲ. ಏನು ಮಾಡಿದೀರ ಅಂತ ಕೇಳ್ತೀರಲ್ಲ, ನೀವು ಹುಟ್ಟಿದ್ರಾ ಆಗ? ಬೇರೆಯವರೆಲ್ಲ ಸ್ವಾತಂತ್ರ್ಯ ಹೋರಾಟದಲ್ಲಿದ್ರು, ನೀವ್ಯಾಕೆ ಇರಲಿಲ್ಲ? ಆವತ್ತಿನ ಕಾಂಗ್ರೆಸ್‌ಗೂ ಇವತ್ತಿನ ಕಾಂಗ್ರೆಸ್‌ಗೆ ಸಂಬಂಧ ಇಲ್ಲ, ಒಪ್ಕೋತೀವಿ. ಆದರೆ ಅದರಿಂದಲೇ ಬಂದವರಲ್ವಾ ನಾವು? ಕಾಂಗ್ರೆಸ್ ಏನೂ ಮಾಡಿಲ್ಲ ಅಂತೀರ, ಹೆಡ್ಗೇವಾರ್ ಅವರೇ ನೀವು ದೇಶದ ಶಾಂತಿ ಭಂಗ ಮಾಡಿದವರು. ನಿಮ್ಮ ಗುರು ಮುಸಲೋನಿ. 1925ರಲ್ಲಿ ಹೆಡ್ಗೆವಾರ್ ಆರ್‌ಎಸ್‌ಎಸ್‌ ಸ್ಥಾಪಿಸಿದ್ದರು. ಇಡೀ ದೇಶ ಸ್ವಾತಂತ್ರ್ಯಕ್ಕೆ ಹೋರಾಡ್ತಿದ್ರೆ ಇವರು ಆರ್‌ಎಸ್‌ಎಸ್‌ ಸ್ಥಾಪಿಸಿ ಮಕ್ಕಳ ಮನಸ್ಸಿನಲ್ಲಿ ವಿಷ ತುಂಬಿದರು. ಆರ್‌ಎಸ್‌ಎಸ್‌ ಘೋಷಣೆ 2023 ರೊಳಗೆ ಈ ದೇಶವನ್ನು ಹಿಂದೂ ರಾಷ್ಟ್ರ ಮಾಡುವುದಾಗಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮಾತು ತಪ್ಪಿದ ಸಿಎಂ – ಝೀರೋ ಟ್ರಾಫಿಕ್‍ನಲ್ಲಿ ಬೊಮ್ಮಾಯಿ ಸಂಚಾರ

ಈಗ ದೇಶಭಕ್ತಿಯನ್ನು ನಾವು ಬಿಜೆಪಿಯಿಂದ ಕಲಿಯಬೇಕಾ? ಗಾಂಧಿ ಹಾರ್ಟ್ ಅಟ್ಯಾಕ್, ಆಕ್ಸಿಡೆಂಟ್, ಕ್ಯಾನ್ಸರ್‌ನಿಂದ ಸತ್ತಿಲ್ಲ. ಗಾಂಧಿ ದೊಡ್ಡ ರಾಮಭಕ್ತ. ಈ ದೇಶದಲ್ಲಿ ಗಾಂಧಿಗಿಂತ ದೊಡ್ಡ ರಾಮಭಕ್ತ ಇಲ್ಲ. ಅಂಥ ರಾಮಭಕ್ತನನ್ನೇ ಕೊಂದರು. ಭಕ್ತನ ಹಾಗೆ ನಟಿಸಿ ಬಗ್ಗಿ ನಮಸ್ಕರಿಸಿ ಬಚ್ಚಿಟ್ಕೊಂಡಿದ್ದ ಪಿಸ್ತೂಲಿನಿಂದ ಗೋಡ್ಸೆ ಗಾಂಧೀನ ಕೊಂದರು. ನಲವತ್ತು ಕೆ.ಜಿ. ತೂಕದ ದೇಹ ಗಾಂಧಿಯವರದ್ದು. ಅಂಥ ಗೋಡ್ಸೆಗೆ ಇವತ್ತು ದೇವಸ್ಥಾನ ಕಟ್ಟುತ್ತಾರಂತೆ. ಯಾಕೆ ಗಾಂಧಿಯನ್ನು ಕೊಂದ್ರಿ? ಅದರಿಂದ ನಿಮಗೆ ಏನ್ ಲಾಭ ಆಯ್ತು ಎಂದು ಖಾರವಾಗಿ ಪ್ರಶ್ನಿಸಿದರು.

Comments

Leave a Reply

Your email address will not be published. Required fields are marked *