ಡಿ.14ರಂದು ಡಿಕೆಶಿ ಪ್ರತಿ ಶಬ್ದಕ್ಕೆ ಉತ್ತರ ಸಿಗಲಿದೆ: ಜಾರಕಿಹೊಳಿ ಗುಡುಗು

ಬೆಳಗಾವಿ: ಮಾಧ್ಯಮದವರಿಗೆ ಬೇಕಿರೋ ಉತ್ತರ ಇಂದು ಸಿಗಲ್ಲ. ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ ದಿನ ಡಿ.14ರಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಪ್ರತಿ ಶಬ್ದಕ್ಕೆ ಉತ್ತರ ಸಿಗಲಿದೆ. ಅಂದು ಅತ್ಯಂತ ಕಠೋರವಾಗಿ ಉತ್ತರ ಕೊಡುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಗುಡುಗಿದ್ದಾರೆ.

ಡಿಕೆಶಿ ಹೇಳಿಕೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಗೆಲ್ಲಲೇಬೇಕು. ಇದಕ್ಕಾಗಿ ಜಿಲ್ಲೆಯ ಮೂಲೆ ಮೂಲೆಯಲ್ಲಿ ಪ್ರಚಾರ ಮಾಡುತ್ತಿದ್ದೇವೆ. ನಿಮಗೆ ಬೇಕಿರೋ ಉತ್ತರ ಇಂದು ಸಿಗಲ್ಲ. ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ ದಿನ ಅಂದರೆ ಡಿ.14ರಂದು ಡಿಕೆ ಶಿವಕುಮಾರ್ ಅವರ ಪ್ರತಿ ಶಬ್ದಕ್ಕೆ ಉತ್ತರ ಸಿಗಲಿದೆ. ಅತ್ಯಂತ ಕಠೋರವಾಗಿ ಅಂದು ಉತ್ತರ ಕೊಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ತಿರುಮಲ ಘಾಟ್‍ನಲ್ಲಿ ಉರುಳಿದ ಬೃಹತ್ ಬಂಡೆ – ತಿಮ್ಮಪ್ಪನ ದರ್ಶನಕ್ಕೆ ನೋ ಎಂಟ್ರಿ

ಅಂದು 1985ರಿಂದ ಇಲ್ಲಿಯವರೆಗೆ ನಡೆದ ಎಲ್ಲ ವಿಚಾರ ಬಹಿರಂಗವಾಗಿ ಮಾತನಾಡುತ್ತೇನೆ. ಆಗ ನನ್ನ ವ್ಯಕ್ತಿತ್ವ ಏನು? ಡಿಕೆ ಶಿವಕುಮಾರ್ ವ್ಯಕ್ತಿತ್ವ ಏನು? ಎಂದು ಹೇಳುತ್ತೇನೆ. ಅಂದು ಓಪನ್ ವಾರ್ ಆಗಲಿ. ಫಲಿತಾಂಶದ ದಿನ ಎಲ್ಲಕ್ಕೂ ಉತ್ತರ ಕೊಡುತ್ತೇನೆ ಎಂದು ಉತ್ತರಿಸಿದರು.

ಡಿಕೆ ಶಿವಕುಮಾರ್ ಅವರ ಕುಟುಂಬ, ರಮೇಶ್ ಜಾರಕಿಹೊಳಿ ಕುಟುಂಬ ಹೇಗಿತ್ತು? ಎಲ್ಲವನ್ನೂ ಬಹಿರಂಗವಾಗಿ ಮಾತಾಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೆಹಲಿ ವರಿಷ್ಠರ ಆಶೀರ್ವಾದ ನನ್ನ ಮೇಲೆ ಇದೆ. ದೆಹಲಿ ವರಿಷ್ಠರು ಇದ್ದಾರೆ ಎಂದು ನಾನು ಜೀವಂತ ಇದ್ದೇನೆ. ಇಲ್ಲದ್ದಿದ್ದಲ್ಲಿ ಇಷ್ಟೊತ್ತಿಗೆ ನನ್ನ ವಿರುದ್ಧ ಷಡ್ಯಂತ್ರ ಮಾಡಿ ಮುಗಿಸಿ ಬಿಡುತ್ತಿದ್ದರು. ಸಂಘ ಪರಿವಾರದ ನಾಯಕರ ಬೆಂಬಲದಿಂದ ನಾಯಕನಾಗಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಜಗ್ಗೇಶ್ ಅಭಿಮಾನಿಗಳಿಂದ ಪುನೀತ್ ಹೆಸರಲ್ಲಿ ವೃದ್ಧೆಗೆ ಸೂರು

bjp - congress

ಬ್ಲ್ಯಾಕ್‍ಮೇಲ್ ಯಾರು ಮಾಡುತ್ತಾರೆ ಎಂದು ಡಿ.14ನೇ ತಾರೀಕು ಹೇಳುತ್ತೇನೆ. ಈಗ ಇದ್ದ ಎಂಎಲ್‍ಎ ಸ್ಥಾನ ಉಳಿಸಿಕೊಳ್ಳಿ. ಆಮೇಲೆ ನೋಡೋಣ. ಡಿ.14 ರಂದು ಡಿಕೆ ಶಿವಕುಮಾರ್, ರಮೇಕ್ ಜಾರಕಿಹೊಳಿ ವಾರ್ ಆಗಲಿ ನೋಡೋಣ ಎಂದು ಸವಾಲು ಹಾಕಿದ ಅವರು, 2023ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ತರಲು ನಾವು ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *