ಮುಂಬೈನಲ್ಲಿ ರಮೇಶ್ ಜಾರಕಿಹೊಳಿ – ಗುರುವಿನ ಋಣ ತೀರಿಸಲು ಮುಂದಾದ್ರಾ?

ಬೆಳಗಾವಿ: ಕರ್ನಾಟಕದಲ್ಲಿ ಮೈತ್ರಿ ಸರ್ಕಾರದ ಪತನಕ್ಕೆ ಮುನ್ನುಡಿ ಬರೆದಿದ್ದ ರಮೇಶ್ ಜಾರಕಿಹೊಳಿ ಇದೀಗ ಮುಂಬೈ ತೆರಳಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ. ಅವರ ಮುಂಬೈ ಪ್ರವಾಸ ಕುತೂಹಲವನ್ನು ಮೂಡಿಸುತ್ತಿರುವುದರೊಂದಿಗೆ, ತಮ್ಮ ಗುರುವಿನ ಋಣ ತೀರಿಸಲು ಮುಂದಾಗಿದ್ದಾರಾ ಎಂಬ ಪ್ರಶ್ನೆಯೂ ಕಾಡುತ್ತಿದೆ.

ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಅವರನ್ನು ರಮೇಶ್ ಜಾರಕಿಹೊಳಿ ಯಾವಾಗಲೂ ತಮ್ಮ ಗುರು ಎಂದು ಹೇಳಿಕೊಳ್ಳುತ್ತಿದ್ದರು. ಇದೀಗ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನದ ಅಂಚಿನಲ್ಲಿದ್ದು, ಕಮಲ ಅರಳುವ ಮುನ್ಸೂಚನೆಯೂ ತೋರುತ್ತಿದೆ. ಇದನ್ನೂ ಓದಿ: ಬಾಳಾ ಠಾಕ್ರೆಯ ಹಿಂದುತ್ವ ಪಾಲಿಸುತ್ತೇವೆ: 40 ಶಾಸಕರ ಜೊತೆ ಸೂರತ್‌ನಿಂದ ಗುವಾಹಟಿಗೆ ಹಾರಿದ ಶಿಂಧೆ

ಕಳೆದ 3 ದಿನಗಳಿಂದ ಮುಂಬೈನಲ್ಲಿ ಮೊಕ್ಕಾಂ ಹೂಡಿರುವ ರಮೇಶ್ ಜಾರಕಿಹೊಳಿ, ಇಂದು ಅವರ ಆಪ್ತ ಮೂಲಗಳು ಪ್ರವಾಸದ ಬಗ್ಗೆ ಖಚಿತಪಡಿಸಿವೆ. ಮಂಗಳವಾರ ಮಧ್ಯಾಹ್ನದವರೆಗೂ ದೇವೇಂದ್ರ ಫಡ್ನಾವಿಸ್ ಜೊತೆ ಜಾರಕಿಹೊಳಿ ಇದ್ದರು ಎನ್ನಲಾಗುತ್ತಿದೆ. ಇದನ್ನೂ ಓದಿ: ಹಾನಿಯಾದ ಸರ್ಕಾರಿ ಆಸ್ತಿಗೆ ಅಗ್ನಿಪಥ್ ಪ್ರತಿಭಟನಾಕಾರರಿಂದಲೇ ವಸೂಲಿ: ವಾರಣಾಸಿ ಆಡಳಿತ

ರಮೇಶ್ ಜಾರಕಿಹೊಳಿ ಮಹಾರಾಷ್ಟ್ರದ ರಾಜಕಾರಣಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಇದೀಗ ಮಹಾರಾಷ್ಟ್ರದಲ್ಲಿ ಆಪರೇಷನ್ ಕಮಲ ಕಾರ್ಯಾಚರಣೆಯಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಕೇಳಿಬರುತ್ತಿದೆ.

Live Tv

Comments

Leave a Reply

Your email address will not be published. Required fields are marked *