ಕೊಪ್ಪಳ: ಅನರ್ಹ ಶಾಸಕ ರಮೇಶ್ ಜಾರಕಿಹೊಳಿಯವರ ಫೋಟೋ ಆಗಲೇ ಬಿಜೆಪಿ ಫ್ಲೆಕ್ಸ್, ಬ್ಯಾನರ್ ಗಳಲ್ಲಿ ಭಾವಚಿತ್ರ ರಾರಾಜಿಸುತ್ತಿದೆ.
ಕೊಪ್ಪಳದಲ್ಲಿ ಬಿಜೆಪಿ ನಾಯಕರು ಹಾಕಿರುವ ಫ್ಲೆಕ್ಸ್ ನಲ್ಲಿ ಗೋಕಾಕ್ ಕ್ಷೇತ್ರದ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಭಾವಚಿತ್ರವಿದ್ದು, ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಜಾರಕಿಹೊಳಿ ಅವರ ಮೇಲೆ ಇನ್ನೂ ಅನರ್ಹತೆ ತೂಗುಗತ್ತಿ ನೇತಾಡುತ್ತಿದೆ. ಅಲ್ಲದೆ, ಜಾರಕಿಹೊಳಿ ಪಕ್ಷಕ್ಕೆ ಸೇರುವ ಕುರಿತು ಬಿಜೆಪಿ ನಾಯಕರು ಇನ್ನೂ ಯಾವುದೇ ರೀತಿಯ ತೀರ್ಮಾನ ಕೈಗೊಂಡಿಲ್ಲ. ಆಗಲೇ ಫ್ಲೆಕ್ಸ್ ನಲ್ಲಿ ರಮೇಶ್ ಜಾರಕಿಹೊಳಿ ಭಾವಚಿತ್ರವನ್ನು ಹಾಕಲಾಗಿದೆ.

ನಗರದ ಅಶೋಕ ವೃತ್ತದಲ್ಲಿ ಬಿಜೆಪಿ ಯುವ ಮುಖಂಡ ಹಾಲೇಶ್ ಕಂದಾರಿ, ಯಡಿಯೂರಪ್ಪನವರು ಮುಖ್ಯಮಂತ್ರಿ ಆದ ಹಿನ್ನಲೆಯಲ್ಲಿ ಅಭಿನಂದನೆ ಸಲ್ಲಿಸಲು ಹಾಕಿರುವ ಫ್ಲೆಕ್ಸ್ ನಲ್ಲಿ ರಮೇಶ್ ಜಾರಕಿಹೊಳಿ ಫೋಟೋ ಹಾಕಿದ್ದಾರೆ. ರಮೇಶ್ ಜಾರಕಿಹೊಳಿ ಅವರನ್ನು ಇತ್ತೀಚಿಗಷ್ಟೇ ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದ್ದು, ಅಲ್ಲದೆ ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಲಾಗಿದೆ.
ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಬಿಜೆಪಿ ಸೇರುವುದಕ್ಕೂ ಮೊದಲೇ ರಮೇಶ್ ಜಾರಕಿಹೊಳಿ ಅವರ ಭಾವಚಿತ್ರವನ್ನು ಬಿಜೆಪಿ ನಾಯಕರು ತಮ್ಮ ಫ್ಲೆಕ್ಸ್‌ನಲ್ಲಿ ಹಾಕಿಕೊಂಡಿರುವುದು ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

Leave a Reply