ರಾಮನಗರ: ಟ್ರಾಫಿಕ್ ಪೇದೆಯೊಬ್ಬರು ರಸ್ತೆಯಲ್ಲಿ ವಾಹನ ತಡೆಗಟ್ಟಿ ಲಂಚ ಸ್ವೀಕರಿಸಿದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಮನಗರ ಸಂಚಾರಿ ಠಾಣೆಯ ಪೇದೆ ಅರಸು ಎಂಬುವರು 100 ರೂಪಾಯಿಗೆ ದುಂಬಾಲು ಬಿದ್ದು ರಸ್ತೆಯಲ್ಲಿಯೇ ಹಣ ವಸೂಲಿ ಮಾಡಿರುವ ಘಟನೆ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಬಳಿ ನಡೆದಿದೆ.
ಮೈಸೂರು ಕಡೆಯಿಂದ ಹೊರಟಿದ್ದ ಟಾಟಾ ಏಸ್ ವಾಹನವನ್ನು ತಡೆದಿರುವ ಪೇದೆ ಹೆಚ್ಚಿನ ಲೋಡ್ ಹಾಕಿರುವ ಬಗ್ಗೆ ವಾಗ್ವಾದ ನಡೆಸಿದ್ದಾರೆ. ಅಲ್ಲದೇ ವಾಹನದಲ್ಲಿದ್ದ ವ್ಯಕ್ತಿ 50 ರೂಪಾಯಿ ಕೊಡಲು ಮುಂದಾದಾಗ ಬೈದು 100 ರೂಪಾಯಿ ಕೊಟ್ಟರೇ ಮಾತ್ರ ವಾಹನ ಬಿಡ್ತೇನೆ ಇಲ್ಲವೇ ಕೇಸ್ ಹಾಕ್ತೇನೆ ಎಂದು ದಬಾಯಿಸಿದ್ದಾರೆ.
ಕೊನೆಗೆ ವಾಹನದಲ್ಲಿನ ವ್ಯಕ್ತಿ 100 ರೂ. ಕೊಟ್ಟಿದ್ದಾರೆ. ಲಂಚ ಸ್ವೀಕರಿಸಿದ ಕೂಡಲೇ ಪೇದೆ ಅರಸು ಅವರು ವಾಹನವನ್ನು ಮುಂದಕ್ಕೆ ಬಿಟ್ಟಿದ್ದಾರೆ.
ನೂರು ರೂ. ನೀಡುತ್ತಿರುವ ದೃಶ್ಯದ ವಿಡಿಯೋವನ್ನು ಬೇರೊಂದು ವಾಹನದಲ್ಲಿದ್ದ ವ್ಯಕ್ತಿಯೊಬ್ಬರು ಚಿತ್ರೀಕರಣ ಮಾಡಿ ಫೇಸ್‍ಬುಕ್ ಗೆ ಅಪ್ಲೋಡ್ ಮಾಡಿದ್ದಾರೆ. ಈಗ ಪೇದೆ ಅರಸು ಲಂಚ ತೆಗೆದುಕೊಳ್ಳುವ ವಿಡಿಯೋ ವೈರಲ್ ಆಗಿದ.
https://www.youtube.com/watch?v=BxM_XLSXLjQ







Leave a Reply