ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಆರ್‍ಎಸ್‍ಎಸ್ ಕಾರ್ಯಕರ್ತ ಮೃತ ಶರತ್ ಮಡಿವಾಳ ಮನೆಗೆ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ರಮಾನಾಥ ರೈ ಭೇಟಿ ನೀಡಿದ್ದಾರೆ.
ಘಟನೆ ನಡೆದು ಒಂಬತ್ತು ದಿನಗಳ ಬಳಿಕ ರೈ ಬಂಟ್ವಾಳದ ಸಜಿಪದಲ್ಲಿರುವ ಶರತ್ ಮನೆಗೆ ಭೇಟಿ ನೀಡಿ ಶರತ್ ತಂದೆ ತನಿಯಪ್ಪ ಹಾಗೂ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಭೇಟಿ ವೇಳೆ ಸ್ಥಳೀಯರಿಗೆ ಮಾತ್ರ ರೈ ಬೆಂಬಲಿಗರು ಸೂಚನೆ ನೀಡಿದ್ದು, ಮಾಧ್ಯಮದವರ ಪ್ರವೇಶವನ್ನು ನಿರಾಕರಿಸಿದ್ದಾರೆ. ಅಲ್ಲದೇ ಯಾರೂ ಕೂಡ ಫೊಟೋ ಕ್ಲಿಕ್ಕಿಸದಂತೆ ಸೂಚಿಸಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಮೃತ ಶರತ್ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದ ಸಚಿವ ಡಿವಿಎಸ್
20 ವರ್ಷ ರಮಾನಾಥ ರೈ ಬಟ್ಟೆ ಒಗೆದು ಇಸ್ತ್ರಿ ಮಾಡಿಕೊಟ್ಟಿದ್ರೂ ಇಂದು ನನ್ನ ನೋವನ್ನು ಕೇಳಲು ಬಂದಿಲ್ಲ ಅಂತ ಶರತ್ ತಂದೆ ತನಿಯಪ್ಪ ಮಡಿವಾಳ ಮಾಧ್ಯಮದ ಮುಂದೆ ಕಣ್ಣೀರಿಟ್ಟ ಬಳಿಕ ಇದೀಗ ಯಾರಿಗೂ ಮಾಹಿತಿ ನೀಡದೆ ರೈ ಶರತ್ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ. ಇದೇ ವೇಳೆ ಪ್ರಕರಣದ ಕುರಿತು ತನಿಖೆ ಮಾಡಿ ಆರೋಪಿಗಳನ್ನು ಶೀಘ್ರವೇ ಬಂಧಿಸುವ ಭರವಸೆ ನೀಡಿದ್ದಾರೆ.
ಮಾಧ್ಯಮಗಳಲ್ಲಿ ಸುದ್ದಿಪ್ರಸಾರವಾಗಿ ಒಂದು ಗಂಟೆಯೊಳಗೆ ಶರತ್ ಮನೆಗೆ ಭೇಟಿ ಮಾಡಿದ ಫೋಟೋವನ್ನು ರೈ ಆಪ್ತ ಕಾರ್ಯದರ್ಶಿ ರಿಲೀಸ್ ಮಾಡಿದ್ದಾರೆ.
ಇದನ್ನೂ ಓದಿ: 20 ವರ್ಷ ಬಟ್ಟೆ ಒಗೆದು ಕೊಟ್ರೂ ರೈ ನನ್ನ ನೋವನ್ನು ಕೇಳಲು ಬಂದಿಲ್ಲ: ಶರತ್ ತಂದೆ ತನಿಯಪ್ಪ ಕಣ್ಣೀರು

https://www.youtube.com/watch?v=L5WjxAOQ_VE




Leave a Reply