ಸಿಎಂ ರಾಜೀನಾಮೆ ಪಕ್ಕಾನಾ? – ರಾಮನಗರ ಬ್ಯಾನರ್‍ ಗಳಲ್ಲಿ ಇಲ್ಲ ಮುಖ್ಯಮಂತ್ರಿ ಎಂಬ ಪದ

ರಾಮನಗರ: ಸಿಎಂ ಸೋಮವಾರ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯೋದು ಪಕ್ಕಾನಾ.? ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನದಿಂದ ಬೇಸರಗೊಂಡು ಸೋಮವಾರ ಮುಖ್ಯಮಂತ್ರಿ ಹುದ್ದೆಗೆ ಸಿಎಂ ರಾಜೀನಾಮೆ ನೀಡುತ್ತರಾ? ರಾಮನಗರ ಜೆಡಿಎಸ್ ಪ್ರಮುಖ ಮುಖಂಡರಿಗೆ ಸಿಎಂ ಈ ಬಗ್ಗೆ ಮಾಹಿತಿ ರವಾನೆ ಮಾಡಿದ್ದರಾ ಎಂಬ ಪ್ರಶ್ನೆ ಈಗ ಉದ್ಭವವಾಗಿದೆ.

ಇದಕ್ಕೆ ಪೂರಕ ಎಂಬಂತೆ ರಾಮನಗರದಲ್ಲಿ ಜುಲೈ 23 ರಂದು ನಡೆಯಲಿರುವ ಚಾಮುಂಡಿ ಕರಗದಲ್ಲಿ ಮುಖ್ಯಮಂತ್ರಿ ಪದ ಬಳಕೆ ಮಾಡದಂತೆ ಸಿಎಂ ತಾಕೀತು ಮಾಡಿರುವ ಆಗಿದೆ. ಅದ್ದರಿಂದಲೇ ರಾಮನಗರದಲ್ಲಿ ಹಾಕಿರುವ ಬಹುತೇಕ ಎಲ್ಲಾ ಬ್ಯಾನರ್‍ ಗಳಲ್ಲಿ ಮುಖ್ಯಮಂತ್ರಿ ಎಂಬ ಪದವನ್ನೇ ಬಳಕೆ ಮಾಡಿಲ್ಲ.

ಕೇವಲ ಹೆಸರನ್ನು ಬಳಸಿ ಅವರ ಅಭಿಮಾನಿ ಬಳಗದಿಂದ ಚಾಮುಂಡಿ ಉತ್ಸವಕ್ಕೆ ಸ್ವಾಗತ ಎಂದು ಬ್ಯಾನರ್ ಹಾಕಲಾಗಿದೆ. ಪತ್ರಿ ವರ್ಷ ಸಿಎಂ ನೇತೃತ್ವದಲ್ಲಿ ನಡೆಯಲಿರುವ ಅದ್ಧೂರಿ ಕರಗ, ಈ ವರ್ಷವೂ ಮಂಗಳವಾರ ನಡೆಯಲಿದೆ. ಆದರೆ ಈ ಅದ್ಧೂರಿ ಚಾಮುಂಡೇಶ್ವರಿ ಕರಗದ ಬ್ಯಾನರ್‍ ಗಳಲ್ಲಿ ಸಿಎಂ ಪದವೇ ಇಲ್ಲವಾಗಿರುವುದು ಈ ಎಲ್ಲಾ ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ.

Comments

Leave a Reply

Your email address will not be published. Required fields are marked *