ಚುನಾವಣೆ ಹೊಸ್ತಿಲಲ್ಲಿ ಡಿಕೆಶಿ ರಾಮನಗರ ಸಸ್ಪೆನ್ಸ್- ಡಿಕೆಸು ಬದಲಿಗೆ ಇಕ್ಬಾಲ್‍ಗೆ ಟಿಕೆಟ್ ಸಾಧ್ಯತೆ

ಬೆಂಗಳೂರು: 2023ರ ಚುನಾವಣೆಗೆ ಘಟಾನುಘಟಿ ನಾಯಕರು ಅಖಾಡ ಹುಡುಕುತ್ತಿದ್ದಾರೆ. ರಾಮನಗರ (Ramanagar) ಫೈಟ್‍ನಲ್ಲಿ ಸಂಸದ ಡಿಕೆ ಸುರೇಶ್ (DK Suresh) ಸ್ಪರ್ಧೆ ತೀವ್ರ ಕುತೂಹಲ ಹುಟ್ಟಿಸಿದೆ.

ಇಷ್ಟು ದಿನ ಡಿಕೆ ಸುರೇಶ್ ರಾಮನಗರದಿಂದ ಸ್ಪರ್ಧೆ ಮಾಡುತ್ತಾರೆ ಅಂತ ಚರ್ಚೆ ಆಗುತ್ತಿತ್ತು. ಆದರೆ ಇದೀಗ ರಾಮನಗರದಿಂದ ಡಿಕೆ ಸುರೇಶ್ ಸ್ಪರ್ಧೆ ಡೌಟ್ ಎಂದು ಹೇಳಲಾಗುತ್ತಿದೆ. ರಾಮನಗರದ ಅಖಾಡದಲ್ಲಿ ಡಿಕೆ ಶಿವಕುಮಾರ್ (DK Shivakumar) ರಾಜಕೀಯ ಆಟ ಶುರುಮಾಡಲಿದ್ದು, ಡಿಕೆ ಸುರೇಶ್ ಬದಲಿಗೆ ರಾಮನಗರದಿಂದ ಡಿಕೆಶಿವಕುಮಾರ್ ಆಪ್ತ ಇಕ್ಬಾಲ್ ಹುಸೇನ್ (Iqbal Hussain) ಅರ್ಜಿ ಸಲ್ಲಿಸುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿದೆ.

ಇಕ್ಬಾಲ್ ಹುಸೇನ್ ಅರ್ಜಿ ಸಲ್ಲಿಕೆಯಿಂದ ಡಿಕೆ ಸುರೇಶ್ ಸ್ಪರ್ಧೆ ಬಹುತೇಕ ಡೌಟ್ ಎನ್ನಲಾಗಿದೆ. ಈ ಮೂಲಕ ಡಿಕೆ ಶಿವಕುಮಾರ್ ಅವರು ರಾಮನಗರದಿಂದಲೇ ರಾಜಕೀಯ ಒಳ ಅಸ್ತ್ರ ಪ್ರಯೋಗ ಮಾಡಿದ್ರಾ ಎಂಬ ಪ್ರಶ್ನೆ ಹುಟ್ಟಿದೆ. ಅಷ್ಟಕ್ಕೂ ಸಹೋದರನನ್ನ ರಾಮನಗರದಿಂದ ಸ್ಪರ್ಧೆ ಮಾಡೋದನ್ನ ಡಿಕೆಶಿವಕುಮಾರ್ ತಡೆದಿದ್ದು ಯಾಕೆ ಎಂಬು ಕುತೂಹಲವೂ ಮೂಡಿದೆ.

ರಾಮನಗರ ಸಸ್ಪೆನ್ಸ್ ಏನು..?: ಡಿಕೆ ಶಿವಕುಮಾರ್ ಕನಕಪುರ (Kanakapura) ದಿಂದ ನಿಲ್ತಾರೆ. ಹೀಗಾಗಿ ಸಹೋದರ ಡಿಕೆ ಸುರೇಶ್ ರಾಮನಗರದಲ್ಲಿ ನಿಂತರೆ ರಾಜ್ಯದ ಬೇರೆ ಕಡೆ ತಪ್ಪು ಸಂದೇಶ ಹೋಗುತ್ತೆ. ಅಲ್ಲದೆ ಒಂದೇ ಜಿಲ್ಲೆಯಲ್ಲಿ ಸಹೋದರರು ನಿಲ್ಲುವುದರಿಂದ ವಿರೋಧಿಗಳಿಗೆ ಇದೇ ಚುನಾವಣೆ ಅಸ್ತ್ರ ಅಗುವ ಆತಂಕ ಎದುರಾಗಿದೆ. ಇದನ್ನೂ ಓದಿ: ಅಲೆಮಾರಿ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಪಡೆದುಕೊಳ್ಳಲಿ: ಈಶ್ವರಪ್ಪ

ರಾಮನಗರದಿಂದ ಸಹೋದರರು ಸ್ಪರ್ಧೆ ಮಾಡಿದ್ರೆ ಒಕ್ಕಲಿಗ ಸಮುದಾಯಕ್ಕೆ ಕೂಡ ತಪ್ಪು ಸಂದೇಶ ಹೋಗುತ್ತೆ ಅನ್ನೋ ಭಯವಿದ್ದು, ಕುಮಾರಸ್ವಾಮಿ ತುಳಿಯೋಕೆ ಸಹೋದರರನ್ನ ನಿಲ್ಲಿಸಿದ್ದಾರೆ ಎಂಬ ಸಂದೇಶ ಸಮುದಾಯಕ್ಕೆ ರವಾನೆ ಆಗಿ ಚುನಾವಣೆ ಮೇಲೆ ಎಫೆಕ್ಟ್ ಆಗೋ ಭೀತಿ ಇದೆ. ಕಾಂಗ್ರೆಸ್ ಮೇಲೆ ಕುಟುಂಬ ರಾಜಕೀಯದ ಆರೋಪ ಇದೆ. ಮತ್ತೆ ಡಿಕೆ ಸಹೋದರರು ಒಂದೇ ಜಿಲ್ಲೆಯಲ್ಲಿ ನಿಂತರೇ ಬಿಜೆಪಿ-ಜೆಡಿಎಸ್ (BJP- JDS) ಇದನ್ನೆ ಚುನಾವಣೆ ಪ್ರಚಾರದಲ್ಲಿ ಬಳಸಿಕೊಳ್ಳೋ ಆತಂಕ ಉಂಟಾಗಿದೆ.

ಕುಮಾರಸ್ವಾಮಿ ವಿರುದ್ಧ ಡಿಕೆ ಸಹೋದರರು ಕೆಲಸ ಮಾಡ್ತಿದ್ದಾರೆ ಎಂಬ ಸಂದೇಶ ರವಾನೆ ಆದರೆ ಹಳೆ ಮೈಸೂರು ಭಾಗದಲ್ಲಿ ಪಕ್ಷಕ್ಕೆ ದೊಡ್ಡ ಹೊಡೆತ ಬೀಳುವ ಭಯವಿದೆ. ಸಹೋದರನಿಗೆ ಟಿಕೆಟ್ ನೀಡದೆ ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ರಾಮನಗರ ಸೇರಿದಂತೆ ರಾಜ್ಯದ ಬೇರೆ ಕ್ಷೇತ್ರಗಳ ಮೇಲೆ ಪಕ್ಷದ ಪರವಾಗಿ ಅಲ್ಪಸಂಖ್ಯಾತ ಮತಗಳು ಮತ್ತೆ ಹೆಚ್ಚಾಗುತ್ತೆ ಎಂಬ ಲೆಕ್ಕಾಚಾರವಿದೆ. ಕಾಂಗ್ರೆಸ್ ಅಲ್ಪಸಂಖ್ಯಾತರ ಪರವಾಗಿದೆ ಎಂಬ ಸಂದೇಶ ರವಾನೆ ಮಾಡುವುದು ಉದ್ದೇಶವಾಗಿದೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *