ಬೆಂಗಳೂರು: ಪ್ರತಿಭಟನೆ ಮಾಡುವುದು ಪ್ರತಿಯೊಬ್ಬರ ಸಾಂವಿಧಾನಿಕ ಹಕ್ಕು. ಅದರಲ್ಲಿ ತಪ್ಪೇನು ಇಲ್ಲ. ಪಾಪ ಹುಡುಗರು ಭಾವುಟ ತಗೊಂಡು ಹೋಗಿದ್ದಾರೆ ಅದರಲ್ಲಿ ತಪ್ಪೇನಿದೆ? ಎಂದು ಮಾಜಿ ಸಚಿವರೂ ಆಗಿರುವ ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ಡಿ ಟೀಕಿಸಿದರು.

ಎನ್‌ಎಸ್‌ಯುಐ ಕಾರ್ಯಕರ್ತರು ಸಚಿವ ನಾಗೇಶ್ ಮನೆಗೆ ಬೆಂಕಿ ಹಚ್ಚಲು ಬಂದಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವರೇನು ಪೆಟ್ರೋಲ್ ತಗೊಂಡು ಹೋಗಿದ್ರಾ? ಪಾಪ ಭಾವುಟ ತಗೊಂಡು ಹೋಗಿದ್ದಾರೆ. ಪ್ರತಿಭಟನೆ ಮಾಡೋದ್ರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ನಾವು ಅಧಿಕಾರಕ್ಕೆ ಬರಬೇಕು ಎನ್ನುವ ಕಾರಣಕ್ಕೆ ಗೆಲ್ಲುವುದು ಬೇಡ ರಾಜ್ಯದ ಜನರನ್ನು ಉಳಿಸಲು ಗೆಲ್ಲೋಣ: ಸಿದ್ದರಾಮಯ್ಯ

ಬಿಜೆಪಿಯವರು ಹುಟ್ಟು ಸುಳ್ಳುಗಾರರು, ಮಾಡುವುದೆಲ್ಲ ಕಚಡಾ ಕೆಲಸ. ಅವರ ಬಾಯಲ್ಲಿ ಸುಳ್ಳು ಬಿಟ್ಟು ಬೇರೇನೂ ಬರಲ್ಲ. ಸುಮ್ಮನೆ ಕಾಂಗ್ರೆಸ್‌ನವರ ಮೇಲೆ ಮುಖ್ಯವಾಗಿ ವಿದ್ಯಾರ್ಥಿಗಳ ಮೇಲೆ ಗೂಬೆ ಕೂರಿಸುವ ಕೆಲಸ ಮಾಡ್ತಿದ್ದಾರೆ. ಪ್ರತಿಭಟನೆ ಮಾಡಲು ಬಂದ ಹುಡುಗರನ್ನ ಮನೆಗೆ ಬೆಂಕಿ ಹಚ್ಚಲು ಬಂದಿದ್ದಾರೆ ಅಂತ ಸುಳ್ಳು ಹೇಳಿದ್ದಾರೆ. ಈ ದೇಶವನ್ನ ಇನ್ನೂ ಎಲ್ಲಿಗೆ ತಗೊಂಡು ಹೋಗ್ತಾರೆ ಅನ್ನೋದೆ ಗೊತ್ತಿಲ್ಲ ಎಂದು ಆತಂಕಪಟ್ಟರು. ಇದನ್ನೂ ಓದಿ: ಸುಪ್ರೀಂ ಆದೇಶ ಪಾಲಿಸದವರ ಮೇಲೆ ಗುಂಡು ಹೊಡಿತೀವಿ: ಮುತಾಲಿಕ್

Leave a Reply