RGV ನಿರ್ದೇಶನದ ಲೆಸ್ಬಿಯನ್ ಸಿನಿಮಾ ಬಿಡುಗಡೆ ಮುಂದೂಡಿಕೆ

ಬಾಲಿವುಡ್ ಖ್ಯಾತ ನಿರ್ದೇಶಕ ರಾಮ್‍ಗೋಪಾಲ್ ವರ್ಮಾ ಆ್ಯಕ್ಷನ್ ಕಟ್ ಹೇಳಿರುವ ಪ್ಯಾನ್ ಇಂಡಿಯಾ ಸಿನಿಮಾ ಖತ್ರಾ- ಡೇಂಜರಸ್ ಏಪ್ರಿಲ್ 8 ರಂದು ಬಿಡುಗಡೆಯಾಗಬೇಕಿತ್ತು. ಆದರೆ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆಗೊಳಿಸಲು ನಿರಾಕರಿಸಿರುವುದರಿಂದ ಚಿತ್ರ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ.

ಈ ವಿಚಾರವಾಗಿ ರಾಮ್‍ಗೋಪಾಲ್ ವರ್ಮಾ ಅವರು, ಇದೊಂದು ಲೆಸ್ಬಿಯನ್ ಥೀಮ್ ಇರುವ ಚಿತ್ರವಾಗಿರುವುದರಿಂದ ಅನೇಕ ಚಿತ್ರಮಂದಿರಗಳು ಸಿನಿಮಾ ಬಿಡುಗಡೆಗೊಳಿಸಲು ಸಹಕರಿಸದ ಕಾರಣ ನಾವು ಈ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡುತ್ತಿದ್ದೇವೆ ಎಂದು ತಿಳಿಸಲು ವಿಷಾದಿಸುತ್ತೇನೆ. ಈ ಅನ್ಯಾಯದ ವಿರುದ್ಧ ಹೋರಾಡಲು ನಾವು ಎಲ್ಲಾ ರೀತಿಯಲ್ಲಿ ಮುಂದಾಗಿದ್ದೇವೆ ಮತ್ತು ನಂತರದ ದಿನಗಳಲ್ಲಿ ನಿಮ್ಮ ಮುಂದೆ ಬರುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ನನ್ನ ಹತ್ತಿರ ಡೇಂಜರ್ಸ್ ಹುಡುಗೀರು ಇದ್ದಾರೆ- ರಾಜಮೌಳಿಗೆ ರಾಮ್ ಗೋಪಾಲ್ ವರ್ಮಾ ಹೀಗಂದಿದ್ಯಾಕೆ..?

ಖತ್ರಾ- ಡೇಂಜರಸ್ ಭಾರತೀಯ ಸಿನಿಮಾ ರಂಗದಲ್ಲಿ ಬರುತ್ತಿರುವ ಮೊದಲ ಲೆಸ್ಬಿಯನ್ ಚಿತ್ರವಾಗಿದ್ದು, ಸಿನಿಮಾದ ಪ್ರಮುಖ ಪಾತ್ರದಲ್ಲಿ ನೈನಾ ಗಂಗೂಲಿ ಮತ್ತು ಅಪ್ಸರ ರಾಣಿ ಅಭಿನಯಿಸಿದ್ದಾರೆ. ಇದೊಂದು ಇಬ್ಬರು ಮಹಿಳೆಯರ ಪ್ರೇಮಕತೆಯ ಹಿನ್ನೆಲೆಯನ್ನು ಹೊಂದಿರುವ ಕಮರ್ಷಿಯಲ್ ಆ್ಯಕ್ಷನ್ ಸಿನಿಮಾವಾಗಿದೆ.

ಇತ್ತೀಚೆಗಷ್ಟೇ ಈ ಸಿನಿಮಾ ಬಿಡುಗಡೆಯಾಗುತ್ತದೆ ಎಂದು ವರ್ಮಾ ಅವರು ಬೆಂಗಳೂರಿಗೆ ಕೂಡ ಬಂದಿದ್ದರು. ಈ ವೇಳೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನಗೆ ಆ ಕ್ಷಣಕ್ಕೆ ಯಾವುದು ಎಕ್ಸೈಟ್ ಮಾಡುವುದೋ ಆ ಸಿನಿಮಾಗಳನ್ನು ಮಾತ್ರ ಮಾಡುತ್ತೇನೆ. ಬೇರೆಯವರು ಏನು ಹೇಳುತ್ತಾರೆ ಅನ್ನುವುದನ್ನು ನಾನು ಕೇರ್ ಮಾಡುವುದಿಲ್ಲ. ಇಬ್ಬರು ಗಂಡಸರ ಸಿನಿಮಾ ಆಗಿದ್ದರೆ ಯಾರೂ ನೋಡುತ್ತಿರಲಿಲ್ಲವೇನೋ, ಆದರೆ ಇಲ್ಲಿ ಇಬ್ಬರು ಹುಡುಗಿಯರು ಇರುವುದರಿಂದ ತುಂಬಾ ಜನ ಸಿನಿಮಾ ನೋಡುವ ನಂಬಿಕೆ ನನಗಿದೆ ಎಂದು ಹೇಳಿದ್ದರು. ಇದನ್ನೂ ಓದಿ: ಮೆಲೋಡಿ ಕ್ವೀನ್‍ನನ್ನು ಭೇಟಿಯಾದ ಶರ್ಮಿಳಾ

Comments

Leave a Reply

Your email address will not be published. Required fields are marked *