ರಾಮ್ ಚರಣ್ ‘ಪೆದ್ದಿ’ ಚಿತ್ರದ ಗ್ಲಿಂಪ್ಸ್ ಔಟ್‌- ನಟನ ಮಾಸ್‌ ಅವತಾರಕ್ಕೆ ಫ್ಯಾನ್ಸ್‌ ಫಿದಾ

ಗ್ಲೋಬಲ್ ಸ್ಟಾರ್ ರಾಮ್ ಚರಣ್ (Ram Charan) ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ‘ಪೆದ್ದಿ’ ಸಿನಿಮಾ ಬಗ್ಗೆ ಬಿಗ್‌ ಅಪ್‌ಡೇಟ್‌ವೊಂದು ಹೊರಬಿದ್ದಿದೆ. ರಾಮನವಮಿ ಪ್ರಯುಕ್ತ ಫಸ್ಟ್ ಝಲಕ್ ಅನ್ನು ಚಿತ್ರತಂಡ ರಿಲೀಸ್ ಮಾಡಿದೆ. ಈ ಚಿತ್ರದ ಬಿಡುಗಡೆ ದಿನಾಂಕ ಕೂಡ ರಿವೀಲ್ ಮಾಡಲಾಗಿದೆ. ಇದನ್ನೂ ಓದಿ:‘ರಾನಿ’ ಬಳಿಕ ಗುರುತೇಜ್ ಶೆಟ್ಟಿ ಜೊತೆ ಮತ್ತೆ ಕೈಜೋಡಿಸಿದ ಕಿರಣ್ ರಾಜ್

 

View this post on Instagram

 

A post shared by Ram Charan (@alwaysramcharan)

ಪವರ್‌ಫುಲ್ ಡೈಲಾಗ್ ಹೊಡೆಯುತ್ತಾ ಸಿಗರೇಟ್ ಬಾಯಲ್ಲಿ ಕಚ್ಚಿಕೊಂಡು ಭರ್ಜರಿ ಆಕ್ಷನ್ ಮಾಡುತ್ತಾ ರಗಡ್ ಲುಕ್ ನಲ್ಲಿ ರಾಮ್ ಚರಣ್ ಎಂಟ್ರಿ ಕೊಟ್ಟಿದ್ದಾರೆ. ನಟನ ಅಬ್ಬರ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ‘ಪೆದ್ದಿ’ ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ರಾಮ್‌ ಚರಣ್‌ ಹುಟ್ಟುಹಬ್ಬದ ತಿಂಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಮುಂದಿನ ವರ್ಷದ ಮಾರ್ಚ್ 27ಕ್ಕೆ ‘ಪೆದ್ದಿ’ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಇದನ್ನೂ ಓದಿ:ಲೈಫ್‌ಲ್ಲಿ ಏನೇನೋ ಒಂದಷ್ಟು ಆದ್ಮೇಲೆ ನಾನು ಇಷ್ಟು ಗಟ್ಟಿಯಾಗಿರೋಕೆ ತಂದೆಯೇ ಕಾರಣ- ನಿವೇದಿತಾ ಭಾವುಕ

ರಾಮ್ ಚರಣ್‌ಗೆ ಜೋಡಿಯಾಗಿ ಜಾನ್ವಿ ಕಪೂರ್ ನಟಿಸಿದ್ದಾರೆ. ಹ್ಯಾಟ್ರಿಕ್‌ ಹೀರೋ ಶಿವಣ್ಣ, ಜಗಪತಿ ಬಾಬು ಪವರ್‌ಫುಲ್‌ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಎ.ಆರ್. ರೆಹಮಾನ್ ಸಂಗೀತ, ನವೀನ್ ನೂಲಿ‌ ಸಂಕಲನ, ಆರ್ ರತ್ನವೇಲು ಛಾಯಾಗ್ರಹಣ ಚಿತ್ರಕ್ಕಿದೆ.