ಸಿಂಪಲ್ ಸ್ಟಾರ್ ಹೊಸ ಚಿತ್ರ ಅನೌನ್ಸ್: ಕನ್ನಡದಲ್ಲಿ ಬರಲಿದೆ `ಆರ್‌ಆರ್‌ಆರ್’ ಚಿತ್ರ

ಸ್ಯಾಂಡಲ್‌ವುಡ್ ಸಿಂಪಲ್ ಸ್ಟಾರ್ ಬತ್ತಳಿಕೆಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಬ್ಯಾಕ್ ಟು ಬ್ಯಾಕ್ ಚಿತ್ರಗಳು ರಿಲೀಸ್‌ಗೂ ರೆಡಿಯಿದೆ. ಈ ಬೆನ್ನಲ್ಲೇ ನಟ ರಕ್ಷಿತ್ ಶೆಟ್ಟಿ ತಮ್ಮ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಕನ್ನಡದಲ್ಲೂ ʻಆರ್‌ಆರ್‌ಆರ್ʼ ಸಿನಿಮಾ ಬೆಳ್ಳಿತೆರೆಯಲ್ಲಿ ರಾರಾಜಿಸಲಿದೆ ಅಂತಾ ಸ್ವತಃ ರಕ್ಷಿತ್ ರಿವೀಲ್ ಮಾಡಿದ್ದಾರೆ.

ನಟನೆ, ನಿರ್ದೇಶನ, ನಿರ್ಮಾಣದ ಜವಾಬ್ದಾರಿಯಲ್ಲಿ ಬ್ಯುಸಿಯಿರುವ ನಟ ರಕ್ಷಿತ್ ಶೆಟ್ಟಿ ಈಗ ತಮ್ಮ ಹೊಸ ಚಿತ್ರದ ಬಗ್ಗೆ ರಿವೀಲ್ ಮಾಡಿದ್ದಾರೆ. ಕನ್ನಡದಲ್ಲೂ ಆರ್‌ಆರ್‌ಆರ್ ಸಿನಿಮಾ ತೆರೆಗೆ ಬರಲಿದೆ. ರಾಜಮೌಳಿ ನಿರ್ದೇಶನದ `ಆರ್‌ಆರ್‌ಆರ್’ ಸಿನಿರಂಗದಲ್ಲಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿತ್ತು. ತೆಲುಗಿನ `ಆರ್‌ಆರ್‌ಆರ್’ಗೆ ಸೆಡ್ಡು ಹೊಡೆಯಲು ಕನ್ನಡದಲ್ಲೂ `ಆರ್‌ಆರ್‌ಆರ್’ ಚಿತ್ರ ತೆರೆಗೆ ಬರಲಿದೆ. ಇದನ್ನೂ ಓದಿ: ತೆಲಂಗಾಣದ ಸೆಲೆಬ್ರಿಟಿ ಡಿಸೈನರ್ ಪ್ರತ್ಯೂಷಾ ಗರಿಮೆಲ್ಲಾ ಅನುಮಾನಾಸ್ಪದ ಸಾವು

ಇತ್ತೀಚೆಗಷ್ಟೇ ನಟ ರಕ್ಷಿತ್ ನೀಡಿದ ಸಂದರ್ಶನವೊಂದರಲ್ಲಿ `ಆರ್‌ಆರ್‌ಆರ್’ ಚಿತ್ರ ಕನ್ನಡದಲ್ಲೂ ಬರಲಿದೆ. ಕನ್ನಡದ `ಆರ್‌ಆರ್‌ಆರ್’ ಎಂದರೆ ರಕ್ಷಿತ್, ರಿಷಬ್, ರಾಜ್ ಒಟ್ಟಿಗೆ ನಟಿಸುವುದು ಯಾವಾಗ ಎಂಬ ಪ್ರಶ್ನೆಗೆ ಉತ್ತರಿಸಿರುವ ರಕ್ಷಿತ್, ನನ್ನ ಬಳಿ ಈಗಾಗಲೇ ಚಿತ್ರಕಥೆ ರೆಡಿಯಿದೆ. ಅದನ್ನು ಸಿನಿಮಾ ಮಾಡುವ ಆಲೋಚನೆಯಿದೆ ಎಂದು ನಟ ರಕ್ಷಿತ್ ತಮ್ಮ ಮುಂದಿನ ಚಿತ್ರದ ಕುರಿತು ಹೇಳಿದ್ದಾರೆ. ಈ ಸುದ್ದಿ ಕೇಳಿ ಸಿಂಪಲ್ ಸ್ಟಾರ್ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

Comments

Leave a Reply

Your email address will not be published. Required fields are marked *