ತೆಲುಗಿಗೆ ರಕ್ಷಿತ್‌ ನಟನೆಯ ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ- ರಿಲೀಸ್‌ ಡೇಟ್‌ ಫಿಕ್ಸ್

ಕ್ಷಿತ್ ಶೆಟ್ಟಿ(Rakshit Shetty), ರುಕ್ಮಿಣಿ ವಸಂತ್ (Rukmini Vasanth) ನಟನೆಯ ‘ಸಪ್ತಸಾಗರದಾಚೆ ಎಲ್ಲೋ’ (Sapta Sagaradacche Yello) ತೆಲುಗು ನೆಲದಲ್ಲಿ ಸದ್ದು ಮಾಡಲು ರೆಡಿಯಾಗಿದೆ. ಸ್ಯಾಂಡಲ್‌ವುಡ್‌ನಲ್ಲಿ ಕಮಾಲ್ ಮಾಡಿದ ರಕ್ಷಿತ್ ಸಿನಿಮಾ, ಈಗ ತೆಲುಗಿನಲ್ಲಿ (Tollywood) ಅಬ್ಬರಿಸಲು ಬರುತ್ತಿದೆ. ಇದೇ ಸೆ.22ರಂದು ‘ಸಪ್ತಸಾಗರದಾಚೆ ಎಲ್ಲೋ’ ತೆಲುಗು ವರ್ಷನ್‌ನಲ್ಲಿ ಬರುತ್ತಿದೆ.

ಹೇಮಂತ್ ನಿರ್ದೇಶಿಸಿದ ದೃಶ್ಯ ಕಾವ್ಯಕ್ಕೆ ಕನ್ನಡಿಗರು ಫಿದಾ ಆಗಿದ್ದಾರೆ. ಮನು- ಪ್ರಿಯಾ ಜೋಡಿಯ ಪ್ರೇಮ್ ಕಹಾನಿ ನೋಡಿ ಪ್ರೇಕ್ಷಕರು ಚಪ್ಪಾಳೆ ತಟ್ಟಿದ್ದಾರೆ. ಹಾಗಾಗಿ ತೆಲುಗು ಅಂಗಳಕ್ಕೆ ಹಾರಲು ಸಜ್ಜಾಗಿದೆ. ‘ಸಪ್ತ ಸಾಗರಲು ದಾಟಿ’ ಎಂಬ ಟೈಟಲ್‌ನಲ್ಲಿ ತೆಲುಗು ಸಿನಿಮಾ ಸೆ.22ರಂದು ಬಿಡುಗಡೆಯಾಗುತ್ತಿದೆ.

‘ಕವಲುದಾರಿ’ ಖ್ಯಾತಿಯ ಹೇಮಂತ್ ನಿರ್ದೇಶನದಲ್ಲಿ ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್, ಅಚ್ಯುತ್ ಕುಮಾರ್, ಪವಿತ್ರಾ ಲೊಕೇಶ್, ರಮೇಶ್ ಇಂದಿರಾ, ಅವಿನಾಶ್ ಸೇರಿದಂತೆ ಹಲವರು ನಟಿಸಿದ್ದಾರೆ. ರಕ್ಷಿತ್‌ ಶೆಟ್ಟಿ ನಿರ್ಮಾಣ ಮಾಡಿದ್ದಾರೆ.

ಕನ್ನಡ ಸಿನಿಮಾ ಪ್ರೇಕ್ಷಕರು ಅಪ್ಪಿ ಒಪ್ಪಿಕೊಂಡ ಹಾಗೇ ತೆಲುಗು ವರ್ಷನ್‌ನಲ್ಲೂ ಗೆದ್ದು ಬೀಗುತ್ತಾ? ಕಾದು ನೋಡಬೇಕಿದೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]