ಈಗ ಅಧಿಕೃತ: ಜುಲೈನಲ್ಲಿ ರಕ್ಷಿತ್- ರಶ್ಮಿಕಾ ಎಂಗೇಜ್‍ಮೆಂಟ್

ಉಡುಪಿ: ಸ್ಯಾಂಡಲ್‍ವುಡ್‍ನ ಕ್ಯೂಟ್ ಜೋಡಿ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಲವ್ ಸೈಲೆಂಟಾಗಿ ನಡೆಯುತ್ತಿದ್ದು, ಶೀಘ್ರದಲ್ಲೇ ಇವರಿಬ್ಬರ ಎಂಗೇಜ್‍ಮೆಂಟ್ ನಡೆಯಲಿದೆ.

ಲವ್ ವಿಚಾರದ ಬಗ್ಗೆ ಮಾಧ್ಯಮಗಳು ಪ್ರಶ್ನೆ ಮಾಡಿದ್ದಕ್ಕೆ ನಮ್ಮದೇನು ಇಲ್ಲ ಅಂತ ಇಬ್ಬರೂ ಸುದ್ದಿಯನ್ನು ಸೈಡಿಗೆ ತಳ್ಳಿದ್ದರು. ಆದ್ರೆ ಪಬ್ಲಿಕ್ ಟಿವಿಗೆ ಸಿಕ್ಕ ಖಚಿತ ಮಾಹಿತಿ ಪ್ರಕಾರ ರಶ್ಮಿಕಾ, ರಕ್ಷಿತ್ ಮದುವೆ ಪಕ್ಕಾ ಆಗಿದೆ.

ಹೌದು, ಜುಲೈ 3ರಂದು ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅವರ ನಿಶ್ಚಿತಾರ್ಥ ನಡೆಯಲಿದೆ. ಕುಶಾಲನಗರದಲ್ಲಿ ನಿಶ್ಚಿತಾರ್ಥ ನಡೆಯಲಿದ್ದು, ಎರಡು ಕುಟುಂಬದದ ಸದಸ್ಯರು ಮತ್ತು ಆಪ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಕಿರಿಕ್ ಪಾರ್ಟಿಯಲ್ಲಿ ಕರ್ಣ ಮತ್ತು ಸಾನ್ವಿಯಾಗಿ ನಟಿಸಿದ್ದ ಈ ಜೋಡಿಯ ನಿಶ್ಚಿತಾರ್ಥ ಜುಲೈನಲ್ಲಿ ನಡೆದರೆ ಮದುವೆ ದಿನಾಂಕ ಇನ್ನು ಅಂತಿಮವಾಗಿಲ್ಲ. ಮದುವೆ ಉಡುಪಿಯಲ್ಲಿ ನಡೆದರೆ ಬೆಂಗಳೂರಲ್ಲಿ ಆರತಕ್ಷತೆ ನಡೆಯಲಿದೆ ಎನ್ನುವ ಮಾಹಿತಿ ಪಬ್ಲಿಕ್ ಟಿವಿಗೆ ಸಿಕ್ಕಿದೆ.

 

ರಕ್ಷಿತ್ ಶೆಟ್ಟಿ ಈಗ ‘ಅವನೇ ಶ್ರೀಮನ್ನನಾರಾಯಣ’ ಸಿನಿಮಾದಲ್ಲಿ ತೊಡಗಿದ್ದು, ಇದಾದ ಬಳಿಕ ಸುದೀಪ್ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ರಕ್ಷಿತ್ ಅವರ ಬರೆದ ಕಥೆಯಾಧಾರಿತ ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಸಿನಿ ಲೋಕಕ್ಕೆ ರಶ್ಮಿಕಾ ಎಂಟ್ರಿ ಕೊಟ್ಟಿದ್ದರು. ಮೊದಲ ಚಿತ್ರದಲ್ಲೇ ಮೆಚ್ಚುಗೆ ಪಡೆದ ಇವರು ಈಗ ಸುನಿ ನಿರ್ದೇಶನದ ‘ಚಮಕ್’ ನಲ್ಲಿ ಅಭಿನಯಿಸುವುದರ ಜೊತೆಗೆ ತೆಲುಗು ಚಿತ್ರದಲ್ಲೂ ನಟಿಸುತ್ತಿದ್ದಾರೆ.

ತಮ್ಮ ಚಿತ್ರದಲ್ಲಿ ಅವಕಾಶ ನೀಡಿದ ಹುಡುಗಿಯನ್ನೇ ಮದುವೆಯಾಗುವ ಮೂಲಕ ರಕ್ಷಿತ್ ಶೆಟ್ಟಿ ಚಿತ್ರರಂಗದ ತಾರಾ ಜೋಡಿಗಳ ಸಾಲಿಗೆ ಸೇರುತ್ತಿದ್ದಾರೆ.

ಸುಳ್ಳು ಸುದ್ದಿ ಅಂದಿದ್ರು: ಈ ಹಿಂದೆ ಪಬ್ಲಿಕ್ ಟಿವಿ ರಶ್ಮಿಕಾ ಅವರನ್ನು ಈ ವಿಚಾರದ ಬಗ್ಗೆ ಮಾತನಾಡಿಸಿತ್ತು, ಆಗ ಅವರು, ನನಗೆ ಇತ್ತೀಚಿಗೆ ಈ ಸುದ್ದಿ ತಿಳಿಯಿತು. ಅದೂವರೆಗೂ ಗೊತ್ತಿರಲಿಲ್ಲ. ಇದು ಸುಳ್ಳು ಸುದ್ದಿ. ಇದರಿಂದ ನನ್ನ ಸಿನಿ ಕೆರಿಯರ್‍ಗೆ ತೊಂದರೆ ಆಗುತ್ತದೆ. ದಯವಿಟ್ಟು ಈ ರೀತಿಯ ಸುದ್ದಿಗಳನ್ನು ಹಬ್ಬಿಸಬೇಡಿ. ನಾನು ಮೂರ್ನಾಲ್ಕು ಫಿಲ್ಮ್‍ಗಳಲ್ಲಿ ಬ್ಯೂಸಿಯಾಗಿದ್ದೇನೆ. ನನ್ನ ಖಾಸಗಿ ವಿಚಾರಗಳಿಗೆ ಸಮಯ ಸಿಗುತ್ತಿಲ್ಲ. ನನಗೆ ಪ್ರತಿದಿನ ತುಂಬಾ ಕೆಲಸಗಳಿರುತ್ತವೆ. ಪರೀಕ್ಷೆಗಳಿವೆ. ಶೂಟಿಂಗ್‍ನಲ್ಲಿ ಬ್ಯೂಸಿಯಿದ್ದೇನೆ. ನನಗೆ ಲವ್ ಮಾಡಲು ಸಮಯವಿಲ್ಲ. ರಕ್ಷಿತ್ ಅವರು ಸಹ ಸಿನಿಮಾದಲ್ಲಿ ಬ್ಯೂಸಿಯಾಗಿದ್ದಾರೆ. ರಕ್ಷಿತ್ ಮತ್ತು ನನ್ನ ನಡುವಿನ ಸುದ್ದಿಗಳೆಲ್ಲಾ ಫೇಕ್ ಎಂದು ಪ್ರತಿಕ್ರಿಯಿಸಿದ್ದರು.

Comments

Leave a Reply

Your email address will not be published. Required fields are marked *