ರಕ್ಷಾ ಬಂಧನ ವಿಶೇಷ – 2 ರೈಲಿನಲ್ಲಿ ಮಹಿಳೆಯರಿಗೆ ಮೆಗಾ ಕ್ಯಾಶ್‍ಬ್ಯಾಕ್ ಆಫರ್

ನವದೆಹಲಿ: ಭಾರತೀಯ ರೈಲ್ವೇ ತೇಜಸ್ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುವ ಎಲ್ಲಾ ಮಹಿಳಾ ಪ್ರಯಾಣಿಕರಿಗೆ ಮೆಗಾ ಕ್ಯಾಶ್‍ಬ್ಯಾಕ್ ಆಫರ್ ಘೋಷಿಸಿದೆ.

ರಕ್ಷಾ ಬಂಧನದ ವಿಶೇಷವಾಗಿ ದೆಹಲಿಯಿಂದ ಲಕ್ನೋಗೆ ಮತ್ತು ಮುಂಬೈನಿಂದ ಅಹಮದಬಾದ್ ಮಾರ್ಗದಲ್ಲಿ ಪ್ರಯಾಣಿಸುವ ಮಹಿಳೆಯರು ವಿಶೇಷ ಕ್ಯಾಶ್‍ಬ್ಯಾಕ್ ಆಫರ್‌ನನ್ನು ಪಡೆಯಲಿದ್ದಾರೆ ಎಂದು ಐಆರ್‌ಟಿಸಿ ತಿಳಿಸಿದೆ.

ದೆಹಲಿ-ಲಕ್ನೋ ಮತ್ತು ಮುಂಬೈ-ಅಹಮದಾಬಾದ್ ತೇಜಸ್ ಎಕ್ಸ್ ಪ್ರೆಸ್ ರೈಲು ಮಾರ್ಗಗಳಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರು ಮಾತ್ರ 5% ಕ್ಯಾಶ್‍ಬ್ಯಾಕ್ ಪಡೆಯಲಿದ್ದಾರೆ. ಹಾಗೂ ಈ ಆಫರ್ ಆಗಸ್ಟ್ 24ರವರೆಗೆ ಇರಲಿದೆ. ಕ್ಯಾಶ್ ಬ್ಯಾಕ್‍ನನ್ನು ಪ್ರತಿ ಬಾರಿ ಟಿಕೆಟ್ ಬುಕ್ ಮಾಡಿದ ಅದೇ ಖಾತೆಗೆ ಜಮಾ ಮಾಡಲಾಗುತ್ತದೆ. ಈ ಕೊಡುಗೆಯನ್ನು ಪ್ರಾರಂಭಿಸುವ ಮೊದಲು ಈ ಮಾರ್ಗಗಳಲ್ಲಿ ಈಗಾಗಲೇ ತಮ್ಮ ಟಿಕೆಟ್‍ಗಳನ್ನು ಕಾಯ್ದಿರಿಸಿರುವ ಮಹಿಳೆಯರಿಗೆ ಕ್ಯಾಶ್‍ಬ್ಯಾಕ್ ಲಭ್ಯವಿದೆ. ನೀಡಿರುವ ದಿನಾಂಕಗಳ ನಡುವೆ ಪ್ರೀಮಿಯಂ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ ಮಾತ್ರ ಅವರು ಕ್ಯಾಶ್‍ಬ್ಯಾಕ್ ಪಡೆಯಲಿದ್ದಾರೆ ಎಂದು ತಿಳಿಸಲಾಗಿದೆ. ಇದನ್ನೂ ಓದಿ:ಹೇಮಾವತಿ ನದಿ ಉಗಮ ಸ್ಥಾನದಲ್ಲಿ ಬಾಗಿನ ಅರ್ಪಣೆ

ಕೊರೊನಾ ಲಾಕ್‍ಡೌನ್‍ನಿಂದ ನಾಲ್ಕು ತಿಂಗಳು ಸ್ಥಗಿತಗೊಂಡಿದ್ದ ತೇಜಸ್ ಎಕ್ಸ್ ಪ್ರೆಸ್ ರೈಲುಗಳನ್ನು ಪುನಾರಂಭಿಸಲಾಗಿದೆ. ತೇಜಸ್ ಎಕ್ಸ್ ಪ್ರೆಸ್ ಸೋಮವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ ಸಂಚರಿಸುತ್ತದೆ.ಇದನ್ನೂ ಓದಿ:ಅಫ್ಘಾನ್ ಸೇನೆ ಹೋರಾಟ ಮಾಡದೇ ಇರುವಾಗ ನಮ್ಮವರು ಬಲಿಯಾಗುವುದರಲ್ಲಿ ಅರ್ಥವಿಲ್ಲ : ಬೈಡನ್

Comments

Leave a Reply

Your email address will not be published. Required fields are marked *