ಚೀನಾದ ಪಾಪಿ ಜನರು ಪ್ರಾಣಿಗಳನ್ನು ತಿಂದು ಕೊರೊನಾ ವೈರಸ್ ಹರಡಿಸಿದ್ದಾರೆ: ರಾಖಿ

ಮುಂಬೈ: ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಚೀನಾದ ಪಾಪಿ ಜನರು ಪ್ರಾಣಿಗಳನ್ನು ತಿಂದು ಕೊರೊನಾ ವೈರಸ್ ಹರಡಿಸಿದ್ದಾರೆ ಎಂದು ಹೇಳುವ ಮೂಲಕ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾಳೆ.

ರಾಖಿ ತನ್ನ ಇನ್‍ಸ್ಟಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾಳೆ. ಅದರಲ್ಲಿ, “ದೇವರೇ, ವೈರಸ್‍ನಿಂದ ಬಳಲುತ್ತಿರುವ ಜನರಿಗಾಗಿ ನಾನು ಪ್ರಾರ್ಥನೆ ಮಾಡುತ್ತಿದ್ದೇನೆ. ಇಡೀ ದೇಶದಲ್ಲಿ ಈ ವೈರಸ್ ಹರಡುತ್ತಿದೆ. ಚೀನಾದ ಜನರು ಇಷ್ಟು ದಿನ ಪ್ರಾಣಿಗಳನ್ನು ತಿಂದಿದ್ದಕ್ಕೆ ಈಗ ಬುದ್ಧಿ ಕಲಿಯುತ್ತಿದ್ದಾರೆ. ಅವರು ಇದೆಲ್ಲಾ ತಿನ್ನಬಾರದಿತ್ತು. ದೇವರೇ ದಯವಿಟ್ಟು ಚೀನಾದ ಪಾಪಿ ಜನರನ್ನು ಕ್ಷಮಿಸಿಬಿಡಿ” ಎಂದು ಹೇಳಿದ್ದಾಳೆ. ಇದನ್ನೂ ಓದಿ: ಕೊರೊನಾ ವೈರಸ್ ಕೊಲ್ಲಲು ಚೀನಾಗೆ ಹೊರಟ ರಾಖಿ

ದೇವರು ನಮಗೆ ಏನ್ನನ್ನು ತಿನ್ನಲು ನೀಡಿದ್ದಾರೋ ಅದನ್ನು ತಿನ್ನಿ. ನಾನು ಇಡೀ ಚೀನಾ ದೇಶದ ಕಡೆಯಿಂದ ಕ್ಷಮೆ ಕೇಳುತ್ತೇನೆ. ಕೊರೊನಾ ವೈರಸ್ ಈಗ ತುಂಬಾ ಹರಡಿದ್ದು, ಇವರನ್ನು ಕ್ಷಮಿಸಿ ಎಂದು ವಿಡಿಯೋದಲ್ಲಿ ಹೇಳಿದ್ದಾಳೆ. ರಾಖಿ ಈ ವಿಡಿಯೋ ಪೋಸ್ಟ್ ಮಾಡುತ್ತಿದ್ದಂತೆ ನೆಟ್ಟಿಗರು ಆಕೆಯನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ. ಕೆಲವರು ವಿಡಿಯೋ ಮಾಡಿ ಯಾರು ಪ್ರಾರ್ಥನೆ ಮಾಡುತ್ತಾರೆ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ದೇವರು ನಿಮ್ಮ ಫೋನಿನಲ್ಲಿ ಇದ್ದಾರಾ ಎಂದು ಕಮೆಂಟ್ ಮಾಡಿದ್ದಾರೆ.

ಈ ಹಿಂದೆ ರಾಖಿ ತಮ್ಮ ಇನ್‍ಸ್ಟಾದಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿ ಅದಕ್ಕೆ, ಮೋದಿಜಿ ನಾನು ಚೀನಾಗೆ ಹೋಗುತ್ತಿದ್ದೇನೆ. ಕೊರೊನಾ ವೈರಸ್ ಅನ್ನು ನಾಶ ಮಾಡುತ್ತೇನೆ. ನಾನು ಕ್ಷೇಮವಾಗಿ ವಾಪಸ್ ಬರಲಿ ಅಂತ ಎಲ್ಲರೂ ಪ್ರಾರ್ಥಿಸಿ. ನಾನು ನಾಸಾದಿಂದ ಕೊರೊನಾ ವೈರಸ್ ಅನ್ನು ನಾಶ ಮಾಡಲು ಸ್ಪೆಷಲ್ ಔಷಧಿ ತಂದಿದ್ದೇನೆ. ಚೀನಾದಲ್ಲಿ ಜನರು ಉಸಿರಾಡಲು ಕೂಡ ಕಷ್ಟ ಪಡುತ್ತಿದ್ದಾರೆ ಎಂದು ಹೇಳಿದ್ದಳು.

 

View this post on Instagram

 

#jesus #jesuschrist #jesuslovesyou #jesussaves #jesusislord

A post shared by Rakhi Sawant (@rakhisawant2511) on

Comments

Leave a Reply

Your email address will not be published. Required fields are marked *