ಬಾಲಿವುಡ್ ನಟಿ ರಾಕಿ ಸಾವಂತ್ ಆಸ್ಪತ್ರೆಗೆ ದಾಖಲಾಗಿದ್ದು, ಸತತ ನಾಲ್ಕು ಗಂಟೆಗಳ ಕಾಲ ಅವರು ಆಪರೇಷನ್ ಗೆ ಒಳಗಾಗಿದ್ದಾರಂತೆ. ಆಪರೇಷನ್ ನಂತರ ಬಾಯ್ ಫ್ರೆಂಡ್ ಜೊತೆ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಲ್ಲದೇ ರಾಕಿ ಸಾವಂತ್ ಗೆ ಆಗಿದ್ದು ಆಬಾರ್ಷನ್ನಾ? ಅಥವಾ ಆಪರೇಷನ್ನಾ? ಎನ್ನುವ ಕಾಮೆಂಟ್ ಗಳು ಹರಿದು ಬಂದಿವೆ.

ಆಪರೇಷನ್ ಗೆ ಹೋಗುವ ಮುನ್ನ ಬಾಯ್ ಫ್ರೆಂಡ್ ಆದಿಲ್ ಜೊತೆ ಆಸ್ಪತ್ರೆಯಲ್ಲೇ ರಾಕಿ ಡಾನ್ಸ್ ಮಾಡಿದ್ದು, ಆ ವಿಡಿಯೋ ಹಂಚಿಕೊಂಡಿದ್ದಾರೆ. ಎಂತಹ ಸಂದರ್ಭದಲ್ಲಿ ನನ್ನೊಂದಿಗೆ ನಿಲ್ಲಬಲ್ಲ ಹುಡುಗ ಎಂದು ಆದಿಲ್ ನನ್ನು ಹಾಡಿ ಹೊಗಳಿದ್ದಾರೆ. ಜೀವನದಲ್ಲಿ ಎಂತಹ ಕಷ್ಟಗಳು ಬಂದರೂ, ಆದಿಲ್ ನನ್ನ ಜೊತೆ ಇರುತ್ತಾನೆ ಎನ್ನುವುದಕ್ಕೆ ಅವನು ಆಸ್ಪತ್ರೆಗೆ ಬಂದಿರುವುದೇ ಸಾಕ್ಷಿ ಎಂದೂ ರಾಕಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಗೆದ್ದ ಸಂತಸದಲ್ಲಿ ಪ್ರಾರ್ಥನೆ ಮಾಡ್ತಿದ್ದ ಜಯಶ್ರೀಗೆ ಕಾಟ ಕೊಟ್ಟ ಅಕ್ಷತಾ!

ರಾಕಿ ಸಾವಂತ್ ಗೆ ಹೊಟ್ಟೆಯಲ್ಲಿ ಗಂಟು ಪತ್ತೆಯಾಗಿದ್ದು, ಅದಕ್ಕಾಗಿ ಆಪರೇಷನ್ ಮಾಡಿಸಿಕೊಳ್ಳಲೇಬೇಕು ಎಂದು ವೈದ್ಯರು ಸಲಹೆ ನೀಡಿದ್ದರಂತೆ. ಹಾಗಾಗಿ ನಾಲ್ಕು ಗಂಟೆಗಳ ಕಾಲ ಹೊಟ್ಟೆ ಆಪರೇಷನ್ ಗೆ ಒಳಗಾಗಿದ್ದಾರೆ ರಾಕಿ. ಆಪರೇಷನ್ ನಂತರ ಅವರು ತಮ್ಮ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿ ಕೊಡದೇ ಇದ್ದರೂ, ಅಭಿಮಾನಿಗಳು ಮಾತ್ರ, ಇದು ಆಪರೇಷನ್ ಅಲ್ಲ ಗರ್ಭಪಾತ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Leave a Reply