ಬಿಜೆಪಿ ಅಧಿಕಾರಕ್ಕೆ ಬಂದ್ರೆ ಮನೆ, ಮನೆಗೆ ಉಚಿತ ಸಿಲಿಂಡರ್: ರಾಜನಾಥ್ ಸಿಂಗ್ ಆಶ್ವಾಸನೆ

ಲಕ್ನೋ: ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಅವರಿಗೆ ಬೆಂಬಲಿಸಿ ಮತ ನೀಡಿ ಗೆಲ್ಲಿಸಿ. ಬಿಜೆಪಿ ಅಧಿಕಾರಕ್ಕೆ ಬಂದ್ರೆ ಉತ್ತರಪ್ರದೇಶದಲ್ಲಿ ಮನೆ, ಮನೆಗೆ ಉಚಿತ ಸಿಲಿಂಡರ್ ನೀಡುತ್ತೇವೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತದಾರರಿಗೆ ಭರವಸೆ ನೀಡಿದ್ದಾರೆ.

ಕರ್ನೈಲ್ ಗಂಜ್ ವಿಧಾನಸಭೆಯ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ ವೇಳೆ ಮಾತನಾಡಿ, ಬಿಜೆಪಿ ಸಾಧನೆಯನ್ನು ಜನರಿಗೆ ತಿಳಿಸುತ್ತಾ, ಈ ಬಾರಿಯ ಚುನಾವಣೆಯಲ್ಲಿ ಗೆದ್ದು ಬಿಜೆಪಿ ಸರ್ಕಾರ ರಚನೆಯಾದರೆ ಉಚಿತ ಎಲ್‍ಪಿಜಿ ಸಿಲಿಂಡರ್ ಕೊಡುವುದಾಗಿ ಆಶ್ವಾಸನೆ ನೀಡಿದರು. ಭಾರತವು ಈಗ ದುರ್ಬಲವಾಗಿಲ್ಲ. ಆದರೆ ಬಲವಾದ ಕೈಯಲ್ಲಿದೆ. ಮೊದಲು ಯಾರೂ ಭಾರತದ ಮಾತನ್ನು ಕೇಳುತ್ತಿರಲಿಲ್ಲ. ಜಗತ್ತು ಕೆಲಸ ಬಿಟ್ಟು ಭಾರತದ ಮಾತನ್ನು ಕೇಳುತ್ತದೆ. ನಾವು ಪಾಕಿಸ್ತಾನಕ್ಕೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಮಾಡಿದೆವು. ಈ ಮೂಲಕ ಭಾರತೀಯ ಸೇನೆ ಗಾಲ್ವಾನ್ ಕಣಿವೆಯಲ್ಲಿ ಹೆಮ್ಮೆ ಮತ್ತು ಧೈರ್ಯವನ್ನು ತೋರಿಸಿದೆ ಎಂದಿದ್ದಾರೆ. ಇದನ್ನೂ ಓದಿ: ಗಂಡನ ವೀರ್ಯವನ್ನು ಕೇಕ್‍ನಲ್ಲಿ ಮಿಕ್ಸ್ ಮಾಡಿ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಶಿಕ್ಷಕಿಗೆ 40 ವರ್ಷ ಜೈಲು

ಕೊರೊನಾ ಅವಧಿಯಲ್ಲಿ ಯೋಗಿ ಸರ್ಕಾರ ಐತಿಹಾಸಿಕ ಕೆಲಸ ಮಾಡಿದೆ. ಅಗತ್ಯವಿರುವ ಎಲ್ಲರಿಗೂ ಉಚಿತ ಪಡಿತರ ನೀಡಲಾಗಿದೆ. ಪ್ರಧಾನಿ ಮೋದಿ ನಿಜವಾದ ಸಮಾಜವಾದಿ. ದೇಶ ಮತ್ತು ಸಮಾಜಕ್ಕೆ ನಿಜವಾದ ಸೇವೆ ಮಾಡುತ್ತಿದ್ದಾರೆ . ರಾಹುಲ್ ಗಾಂಧಿಯವರಿಗೆ ಪ್ರಾಚೀನ ಇತಿಹಾಸದ ಬಗ್ಗೆ ಗೊತ್ತಿಲ್ಲ. ಯುಪಿಯಲ್ಲಿ ಎಲ್ಲಾ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *