ಬೊಮ್ಮಾಯಿ ಅವರದ್ದು ಸಮರ್ಥ ನಾಯಕತ್ವ: ರಾಜನಾಥ್ ಸಿಂಗ್ ಶ್ಲಾಘನೆ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರದ್ದು ಸಮರ್ಥ ನಾಯಕತ್ವ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಫ್ಲೈಟ್ ಕಂಟ್ರೋಲ್ ಸಿಸ್ಟಮ್ ಕಾಂಪ್ಲೆಕ್ಸ್ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯವು ತನ್ನ ಸಮರ್ಥ ಹಾಗೂ ದಕ್ಷ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಪ್ರಗತಿ ಸಾಧಿಸುತ್ತಿದ್ದು, ಅತಿ ಶೀಘ್ರದಲ್ಲಿಯೇ ವಿಶ್ವದಲ್ಲಿ ತನ್ನ ಅಸ್ಮಿತೆಯನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಗಲಿದೆ. ದೇಶದ ಪ್ರಗತಿಗೆ ಸಂಬಂಧಿಸಿದಂತೆ ಬೊಮ್ಮಾಯಿ ಅವರಿಗಿರುವ ಬದ್ಧತೆ ಪ್ರಶ್ನಾತೀತವಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಿಜಬ್ ತೀರ್ಪು: ವಿಧಾನ ಪರಿಷತ್‍ನಲ್ಲಿ ಬಿಜೆಪಿ-ಕಾಂಗ್ರೆಸ್ ಜಟಾಪಟಿ

ಕರ್ನಾಟಕ ಹೃದಯಕ್ಕೆ ಹತ್ತಿರ. ಕರ್ನಾಟಕ ಹಾಗೂ ರಾಜಧಾನಿ ಬೆಂಗಳೂರು ಯಾವಾಗಲೂ ನಮ್ಮ ಹೃದಯಕ್ಕೆ ಬಹಳ ಹತ್ತಿರ. ಈ ರಾಜ್ಯ ವಿಶಾಲವಾದ ಆಲದಮರವಿದ್ದಂತೆ. ತನ್ನ ಸಂಸ್ಕೃತಿ ಹಾಗೂ ಪರಂಪರೆಯ ಬೇರುಗಳನ್ನು ನೆಲದಾಳಕ್ಕೆ ಬಿಟ್ಟಿದೆ. ಆಧುನಿಕ ತಂತ್ರಜ್ಞಾನ ಅಭಿವೃದ್ಧಿಗೆ ಪ್ರಮುಖ ಕೇಂದ್ರವೂ ಆಗಿದ್ದು, ಆಕಾಶದೆತ್ತರಕ್ಕೆ ತನ್ನ ಶಾಖೆಗಳನ್ನು ಚಾಚಿದೆ ಎಂದು ಬಣ್ಣಿಸಿದ್ದಾರೆ.

ಎಫ್‌ಸಿಎಸ್‌ ಕಟ್ಟಡವನ್ನು ಅತ್ಯುತ್ತಮವಾಗಿ ಶ್ರದ್ಧೆಯಿಂದ ಕಟ್ಟಲಾಗಿದೆ. ಕೇವಲ 45 ದಿನಗಳಲ್ಲಿ ಕಟ್ಟಡ ನಿರ್ಮಾಣವಾಗಿರುವುದು ಶ್ಲಾಘನೀಯ ಎಂದು ಪ್ರಶಂಸಿಸಿದ್ದಾರೆ. ಇದನ್ನೂ ಓದಿ: ಸಭಾಪತಿ ಮೇಲೆ FIR ಹಾಕಿದ ಅಧಿಕಾರಿಯನ್ನ ಅಮಾನತು ಮಾಡಿ – ಪಕ್ಷಾತೀತವಾಗಿ ಒತ್ತಾಯ

Comments

Leave a Reply

Your email address will not be published. Required fields are marked *