ಫೆ.18ಕ್ಕೆ ರಾಜೀವ್ ಕುಮಾರ್ ನಿವೃತ್ತಿ – ಯಾರಾಗ್ತಾರೆ ಮುಂದಿನ ಮುಖ್ಯ ಚುನಾವಣಾ ಆಯುಕ್ತ?

ನವದೆಹಲಿ: ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ (CEC) ರಾಜೀವ್‌ ಕುಮಾರ್‌ (Rajiv Kumar) ಅವರ ಅಧಿಕಾರ ಅವಧಿ ಇದೇ ಫೆ.18ರಂದು ಕೊನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಚುನಾವಣಾ ಆಯುಕ್ತರ ಹೆಸರನ್ನು ಅಂತಿಮಗೊಳಿಸಲು ಪ್ರಧಾನಿ ಮಟ್ಟದ ಉನ್ನತ ಮಟ್ಟದ ಆಯ್ಕೆ ಸಮಿತಿ ಸೋಮವಾರ ಸಭೆ ಸೇರುವ ಸಾಧ್ಯತೆಗಳಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಪ್ರಧಾನಿ ನೇತೃತ್ವದ ಆಯ್ಕೆ ಸಮಿತಿಯಲ್ಲಿ ಪಿಎಂ ಮೋದಿ (PM Modi), ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಮತ್ತು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi), ಕೇಂದ್ರ ಗೃಹ ಸಚಿವ ಅಮಿತ್‌ ಶಾ ಇದ್ದಾರೆ. ಪ್ರಧಾನಿಗಳ ಅಧಿಕೃತ ನಿವಾಸದಲ್ಲೇ ಸಭೆ ನಡೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಮೊದಲು ಸರ್ಚಿಂಗ್‌ ಕಮಿಟಿಯಿಂದ ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಹೆಸರನ್ನು ಸಮಿತಿ ಶಿಫಾರಸು ಮಾಡಲಿದೆ. ನಂತರ ಅಧ್ಯಕ್ಷರು ಶಿಫಾರಸಿನ ಆಧಾರದ ಮೇಲೆ ಮುಂದಿನ ಸಿಇಸಿಯನ್ನು ನೇಮಿಸಲಿದ್ದಾರೆ. ಇದನ್ನೂ ಓದಿ: ಕಳ್ಳರ ಹಾವಳಿಗೆ ಒನಕೆ ಓಬವ್ವನ ರೂಪ ತಾಳಿದ ಮಹಿಳೆಯರು – ರಾತ್ರಿ ಗಸ್ತು ಸಂಚಾರ

ರಾಜೀವ್ ಕುಮಾರ್ ನಂತರ ಜ್ಞಾನೇಶ್ ಕುಮಾರ್ ಅತ್ಯಂತ ಹಿರಿಯ ಚುನಾವಣಾ ಆಯುಕ್ತರಾಗಿದ್ದು, ಅವರ ಅಧಿಕಾರ ಅವಧಿಯು ಜನವರಿ 26, 2029ರ ವರೆಗೆ ಇದೆ. ನಂತರದಲ್ಲಿ ಸುಖಬೀರ್ ಸಿಂಗ್ ಸಂಧು ಇದ್ದಾರೆ.

ರಾಜೀವ್‌ ಕುಮಾರ್‌ ಮುಂದಿನ ನಡೆ ಏನು?
ನಿವೃತ್ತಿ ಬಳಿಕ ತಮ್ಮ ಮುಂದಿನ ನಡೆ ಏನೆಂಬುದನ್ನು ಈಗಾಗಲೇ ರಾಜೀವ್‌ ಕುಮಾರ್‌ ಬಹಿರಂಗಪಡಿಸಿದ್ದಾರೆ. ನಿವೃತ್ತಿ ಬಳಿಕ ಮುಂದಿನ ನಾಲ್ಕೈದು ತಿಂಗಳು ಹಿಮಾಲಯಕ್ಕೆ ತೆರಳುವುದಾಗಿ ಹೇಳಿದ್ದಾರೆ. ನನಗೆ ಸ್ವಲ್ಪ ಏಕಾಂತ ಮತ್ತು ಸ್ವಯಂ ಅಧ್ಯಯನ ಬೇಕಿರುವುದರಿಂದ ಆತ್ಮಾವಲೋಕನ ಮಾಡಿಕೊಳ್ಳುವತ್ತ ಕಾಲ ಕಳೆಯುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಉದಯಗಿರಿ ಗಲಭೆ ಕೇಸ್‌ – ದಾಂಧಲೆ ಮಾಡುವವರ ವಿರುದ್ಧ ಬುಲ್ಡೋಜರ್‌ ಕ್ರಮ ಆಗುತ್ತಾ? – ಪರಮೇಶ್ವರ್‌ ಹೇಳಿದ್ದೇನು?