ನವದೆಹಲಿ: ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಮುಂದಿನ ಮುಖ್ಯ ಚುನಾವಣಾ ಆಯುಕ್ತರಾಗಿ ಗುರುವಾರ ನೇಮಕಗೊಂಡಿದ್ದಾರೆ.
ಹಾಲಿ ಸುಶೀಲ್ ಚಂದ್ರ ಅವರ ಅಧಿಕಾರವಧಿ ಮೇ 14ಕ್ಕೆ ಮುಗಿಯಲಿದೆ. ಮೇ 15 ರಂದು ರಾಜೀವ್ ಕುಮಾರ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಕಾನೂನು ಸಚಿವಾಲಯ ಹೊರಡಿಸಿದ ಅಧಿಸೂಚನೆ ತಿಳಿಸಿದೆ. ಇದನ್ನೂ ಓದಿ: ಮೇ 17ರ ಒಳಗಡೆ ಜ್ಞಾನವಾಪಿ ಮಸೀದಿಯ ಸಮೀಕ್ಷೆ ನಡೆಸಿ: ಕೋರ್ಟ್

ಸಚಿವಾಲಯದ ಅಧಿಸೂಚನೆಯನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಕೇಂದ್ರ ಸಚಿವ ಕಿರಣ್ ರಿಜಿಜು ಅವರು, ರಾಜೀವ್ ಕುಮಾರ್ ಅವರಿಗೆ ಶುಭಾಶಯ ತಿಳಿಸಿದ್ದಾರೆ.
ರಾಜೀವ್ ಕುಮಾರ್ ಅವರು 2020ರಿಂದ ಈವರೆಗೂ ಚುನಾವಣಾ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. 1984ನೇ ಬ್ಯಾಚ್‌ನ ಜಾರ್ಖಂಡ್ ಕೇಡರ್ ಅಧಿಕಾರಿಯಾಗಿದ್ದಾರೆ. ಇದನ್ನೂ ಓದಿ: ಅಂಧ ವ್ಯಕ್ತಿ ಮಗಳ ಕನಸ್ಸನ್ನು ಕೇಳಿ ಮೋದಿ ಭಾವುಕ – ವೀಡಿಯೋ ವೈರಲ್

Leave a Reply