ಆ ರಜನಿಕಾಂತ್‍ಗೆ ಬುದ್ಧಿಯಿಲ್ಲ, ಶೂಟಿಂಗ್‍ಗೂ ಕೂಡ ಕರ್ನಾಟಕಕ್ಕೆ ಬರಬಾರದು: ವಾಟಾಳ್ ನಾಗರಾಜ್

ಮೈಸೂರು: ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ವಿರುದ್ಧ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

ರಜನಿಕಾಂತ್ ಅವರ ಕಾವೇರಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಜನಿಕಾಂತ್ ಒಬ್ಬ ಕನ್ನಡ ದ್ರೋಹಿಯಾಗಿದ್ದು, ತಮಿಳುನಾಡಿನ ಏಜೆಂಟ್ ಆಗಿದ್ದಾರೆ. ರಜನಿಕಾಂತ್ ಶೂಟಿಂಗ್‍ಗೂ ಕೂಡ ಕರ್ನಾಟಕಕ್ಕೆ ಬರಬಾರದು. ಅವರ ಮನೆಗೆ ಬರಬೇಕಾದರೆ ಬರಲಿ. ಅವರೇನು ಗೌನ್ ಹಾಕೊಂಡು ಬರೋಕಾಗುತ್ತಾ? ಹಾಗೇನಾದರೂ ಬಂದರೆ ನಾವು ಹೋರಾಟ ಮಾಡುತ್ತೇವೆ ಎಂದು ತಿರುಗೇಟು ನೀಡಿದರು.

ಆ ರಜಿನಿಕಾಂತ್‍ಗೆ ಬುದ್ಧಿ ಇಲ್ಲ. ಸಿನಿಮಾ ನಟನಿಂದ ನೇರವಾಗಿ ರಾಜಕಾರಣಿ ತರಹ ಮಾತನಾಡುತ್ತಿದ್ದಾರೆ. ಈಗಾಗಲೇ ಅವರಿಗೆ ಎಚ್ಚರಿಕೆ ಕೊಟ್ಟಿದೆ. ಮತ್ತೆ ಹೀಗೆ ಮಾತನಾಡಿದರೆ ಹೋರಾಟ ಮಾಡಬೇಕಾಗುತ್ತದೆ ಎಂದರು.

ಕರ್ನಾಟಕದಲ್ಲಿ ಯಾವುದೇ ಪಕ್ಷ ಆಡಳಿತಕ್ಕೆ ಬಂದರೂ ಸರಿ, ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ ನಿರ್ದೇಶನವನ್ನು ಅನುಷ್ಟಾನಕ್ಕೆ ತರಬೇಕು. ಕೋರ್ಟ್ ಸ್ಪಷ್ಟ ಆದೇಶ ನೀಡಿದ್ದು, ನಿರ್ವಹಣಾ ಮಂಡಳಿ ಅಥವಾ ಪ್ರಾಧಿಕಾರವೆಂಬ ತಾಂತ್ರಿಕ ಚೌಕಟ್ಟನ್ನು ಪ್ರದರ್ಶಿಸಬಾರದು ಎಂದು ರಜನಿಕಾಂತ್ ಚೆನ್ನೈನಲ್ಲಿ ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಕರ್ನಾಟಕದ ಬೆಳವಣಿಗೆ ಪ್ರಜಾಪ್ರಭುತ್ವಕ್ಕೆ ಸಿಕ್ಕ ವಿಜಯ: ರಜನಿಕಾಂತ್

Comments

Leave a Reply

Your email address will not be published. Required fields are marked *