ರತನ್ ಟಾಟಾ ನಿಧನಕ್ಕೆ ಕಂಬನಿ ಮಿಡಿದ ರಜನಿಕಾಂತ್

ಭಾರತದ ಖ್ಯಾತ ಉದ್ಯಮಿ, ಕರುಣಾಮಯಿ, ಅಜಾತಶತ್ರು ಎನಿಸಿಕೊಂಡಿದ್ದ ರತನ್ ಟಾಟಾ ನಿಧನ ಸುದ್ದಿ ಎಲ್ಲರಿಗೂ ಶಾಕ್ ನೀಡಿದೆ. ಟಾಟಾ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದ ಅವರು ಇಂದು ನಮ್ಮ ಜೊತೆಯಿಲ್ಲ. ಇದಕ್ಕೆ ಚಿತ್ರರಂಗದವರು ಸಂತಾಪ ಸೂಚಿಸಿದ್ದಾರೆ. ಇನ್ನೂ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅವರು ರತನ್ ಟಾಟಾ (Ratan Tata) ನಿಧನಕ್ಕೆ ಭಾವುಕವಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ವಕೀಲ್ ಸಾಬ್ ಗೆಟಪ್‌ನಲ್ಲಿ ರಾಕಿ ಭಾಯ್- ಇದು ‘ಟಾಕ್ಸಿಕ್‌’ ಚಿತ್ರದಲ್ಲಿನ ಯಶ್‌ ಕ್ಯಾರೆಕ್ಟರ್?

ತಮ್ಮ ದೂರದೃಷ್ಟಿ ಮತ್ತು ಉತ್ಸಾಹದಿಂದ ಭಾರತವನ್ನು ಜಾಗತಿಕ ಭೂಪಟದಲ್ಲಿ ಇರಿಸಿದ ಮಹಾನ್ ಐತಿಹಾಸಿಕ ಐಕಾನ್. ಸಾವಿರಾರು ಕೈಗಾರಿಕೋದ್ಯಮಿಗಳಿಗೆ ಸ್ಫೂರ್ತಿ ನೀಡಿದ ವ್ಯಕ್ತಿ. ಹಲವು ತಲೆಮಾರುಗಳಿಗೆ ಲಕ್ಷಾಂತರ ಉದ್ಯೋಗವನ್ನು ಸೃಷ್ಟಿಸಿದ ವ್ಯಕ್ತಿಯಾಗಿದ್ದರು. ಎಲ್ಲರ ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾಗಿದ್ದರು. ಅವರಿಗೆ ನನ್ನ ನಮಸ್ಥಾರಗಳು. ಈ ಮಹಾನ್ ವ್ಯಕ್ತಿಯೊಂದಿಗೆ ಕಳೆದ ಪ್ರತಿಯೊಂದು ಕ್ಷಣವನ್ನು ಎಂದೆಂದಿಗೂ ಸ್ಮರಿಸುತ್ತೇನೆ. ಭಾರತದ ನಿಜವಾದ ಮಗ ಇನ್ನಿಲ್ಲ. ರೆಸ್ಟ್ ಇನ್ ಪೀಸ್ ಎಂದು ತಲೈವಾ ಭಾವುಕವಾಗಿ ಬರೆದುಕೊಂಡಿದ್ದಾರೆ.

ಈ ಮೂಲಕ ರತನ್ ಟಾಟಾ ಜೊತೆಗಿನ ಒಡನಾಟವನ್ನು ಹಂಚಿಕೊಂಡಿದ್ದಾರೆ. ಅವರ ನಿಧನ ತಲೈವಾಗೂ ಶಾಕ್ ಕೊಟ್ಟಿದೆ. ಹಾಗಾಗಿ ಉದ್ಯಮಿಯ ನಿಧನಕ್ಕೆ ತಲೈವಾ ಕಂಬನಿ ಮಿಡಿದಿದ್ದಾರೆ.