ಬೆಂಗಳೂರಿನಲ್ಲಿ ರಜನಿ-ಶಿವಣ್ಣ ನಟನೆ ಜೈಲರ್ ಸಿನಿಮಾದ ಡಬ್ಬಿಂಗ್

ಶಿವರಾಜ್ ಕುಮಾರ್ (Shivaraj Kumar) ಮತ್ತು ರಜನಿಕಾಂತ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ತಮಿಳಿನ ಜೈಲರ್ ಸಿನಿಮಾದ ಡಬ್ಬಿಂಗ್ (dubbing) ಕಾರ್ಯ ಬೆಂಗಳೂರಿನಲ್ಲೇ ನಡೆಯುತ್ತಿದೆ. ಚಿತ್ರದ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಮಾತಿನ ಮರುಲೇಪನ ಕಾರ್ಯಕ್ಕೆಂದೇ ಬೆಂಗಳೂರಿಗೆ ಬಂದಿಳಿದಿದ್ದಾರೆ. ಶಿವಣ್ಣ ಡಬ್ಬಿಂಗ್ ಸ್ಟುಡಿಯೋದಲ್ಲಿರುವ ಫೋಟೋವನ್ನು ಎನ್.ಎಸ್. ರಾಜಕುಮಾರ್ ಅವರು ಹಂಚಿಕೊಂಡಿದ್ದಾರೆ.

ರಜನಿಕಾಂತ್‌ (Rajanikanth) ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ಕಾಲಿವುಡ್‌ನ (Kollywood) ಬಹುನಿರೀಕ್ಷಿತ ಸಿನಿಮಾ ಇದಾಗಿದ್ದು, `ಜೈಲರ್’ (Jailer) ಸಿನಿಮಾ ಬಿಡುಗಡೆಗೆ ದಿನಾಂಕ ಕೂಡ ಘೋಷಣೆಯಾಗಿದೆ. ಮುಂದಿನ ಆಗಸ್ಟ್ 10 ರಂದು ತೆರೆಗೆ ಬರಲಿದೆ. ದಕ್ಷಿಣ ಭಾರತದ ಸ್ಟಾರ್‌ ನಟರು ನಟಿಸಿರುವ ಈ ಚಿತ್ರಕ್ಕೆ ನೆಲ್ಸನ್ ದಿಲೀಪ್ ಕುಮಾರ್ (Nelson Dilip Kumar) ಆಕ್ಷನ್‌ ಕಟ್‌ ಹೇಳಿದ್ದಾರೆ.

ರಜನಿಕಾಂತ್, ಹ್ಯಾಟ್ರಿಕ್‌ ಹೀರೊ ಶಿವರಾಜ್‌ಕುಮಾರ್‌, ಮೋಹನ್ ಲಾಲ್, ತಮನ್ನಾ ಭಾಟಿಯಾ ಇನ್ನೂ ಅನೇಕ ತಾರೆಯರು ಟೀಸರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳು ಚಿತ್ರದಲ್ಲಿ ಶಿವರಾಜ್‌ ಕುಮಾರ್‌ ನಟಿಸುತ್ತಿರುವುದು ಅಭಿಮಾನಿಗಳಿಗೆ ಹಬ್ಬವಾಗಿದೆ. ಇದನ್ನೂ ಓದಿ:ಅಮ್ಮು ಜೊತೆಗಿನ ಮದುವೆ ಬಗ್ಗೆ ರಾಕೇಶ್ ಅಡಿಗ ಸ್ಪಷ್ಟನೆ

ಅಲ್ಲದೇ ಶಿವಣ್ಣ ಮೊದಲ ಬಾರಿಗೆ ತಮಿಳು ಸಿನಿಮಾದಲ್ಲಿ (Tamil Cinema) ನಟಿಸುತ್ತಿದ್ದು, ಮಾಸ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬಹು ತಾರಾಗಣ ಹೊಂದಿರುವ ಈ ಸಿನಿಮಾ ಪೋಸ್ಟರ್‌ ಮೂಲಕವೇ ನಿರೀಕ್ಷೆ ಹುಟ್ಟಿಸಿತ್ತು. ಇದೀಗ ಚಿತ್ರದ ಬಿಡುಗಡೆ ದಿನಾಂಕ ಘೋಷಿಸುವ ಚಿತ್ರತಂಡ ಟೀಸರ್‌ ಇನ್ನಷ್ಟು ಕುತೂಹಲ ಹೆಚ್ಚಿಸಿದೆ. ತಲೈವಾ ನಟನೆಯ 169ನೇ ಸಿನಿಮಾ ಆಗಿರುವ ಕಾರಣ, ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ.