ನನ್ನ ಮೊದಲ ಸಿನಿಮಾದ ಮೊದಲ ಶೂಟಿಂಗ್‌ನಲ್ಲೇ ಬಾಬು ಸರ್‌ ಕಪಾಳಕ್ಕೆ ಹೊಡೆದಿದ್ರು: ಅರ್ಜುನ್ ಸರ್ಜಾ

ಸ್‌ವಿಆರ್ @ 50 ಕಾರ್ಯಕ್ರಮಕ್ಕೆ ಆಗಮಿಸಿದ ನಟ ಅರ್ಜುನ್ ಸರ್ಜಾ (Arjun Saraja) ತಮ್ಮ ಬಾಲ್ಯದ ನೆನಪು, ಸಿನಿಮಾ ಇಂಡಸ್ಟ್ರಿಗೆ ಪಾದಾರ್ಪಣೆ, ರಾಜೇಂದ್ರಸಿಂಗ್ ಬಾಬು (Rajendra Singh Babu) ಅವರು ಕೊಟ್ಟ ಅವಕಾಶದ ಬಗ್ಗೆ ಮಾತಾಡಿ ಹಾಡಿ ಹೊಗಳಿದ್ದಾರೆ.

ನಿಮ್ಮ ನೆರಳಲ್ಲಿ ಬೆಳೆಯುವ ಎಲ್ಲರಿಗೂ ಇವತ್ತು ಗ್ರೇಟ್ ಡೇ. ನಿಮ್ಮ ನೆರಳಲ್ಲಿ ಬೆಳೆಯುತ್ತಿರುವ ನಮಗೂ 50 ವರ್ಷದ ಸಂಭ್ರಮಾಚರಣೆ. ಶಂಕರ್ ನಾಗ್ ಅಭಿನಯದ ಕಾಳಿಂಗ ಸರ್ಪ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ನನ್ನ ತಂದೆ ಮನೆಯಲ್ಲಿ ಇರಲಿಲ್ಲ. ನಮಗೆ ಸಿನಿಮಾದ ಬಗ್ಗೆ ಗೊತ್ತಿರಲಿಲ್ಲ. ಆಗ ನನ್ನ ಹತ್ತಿರ ಸಿನಿಮಾ ಮಾಡುತ್ತೀಯಾ ಅಂತ ಕೇಳಿದರು. ತಲೆ ಅಲ್ಲಾಡಿಸಿದ ಕೂಡಲೇ ಶರ್ಟ್ ಬಿಚ್ಚು ಎಂದು ಹೇಳಿ ತಂದೆ ಬಳಿ ನಾನು ಮಾತನಾಡುತ್ತೇನೆ ಎಂದಿದ್ದರು. ಹಾಗಾಗಿ ನಾನು ಸಿನಿಮಾ ಒಪ್ಪಿಕೊಂಡೆ. ಅದೇ ಸಿಂಹದ ಮರಿ ಸೈನ್ಯ ಎಂದು ವಿವರಿಸಿದರು. ಇದನ್ನೂ ಓದಿ:  ನಾವೇ ಒಂದು ಬ್ರ್ಯಾಂಡ್‌, ನಾವ್ಯಾಕೆ ಬ್ರ್ಯಾಂಡ್‌ ಹಿಂದೆ ಹೋಗ್ಬೇಕು – ಶಿವಣ್ಣ ಖಡಕ್ ನುಡಿ

ರಾಜೇಂದ್ರ ಸಿಂಗ್ ಬಾಬು ಸರ್ ನಿರ್ದೇಶನದ ಅಂತ ಸಿನಿಮಾ ಶೂಟಿಂಗ್ ಗೆ ಹೋಗಿದ್ದೆ. ಅಲ್ಲಿ ಅಂಬರೀಶ್‌ (Ambareesh) ಸರ್‌ ಇದ್ದರು. ಸಿನಿಮಾ ಶೂಟಿಂಗ್ ಮೊದಲು ನೋಡಿದ್ದು ಅದೇ ಮೊದಲು. ಬಳಿಕ ನನ್ನ ಸಿಂಹದ ಮರಿ (Simhada Mari Sainya) ಸಿನಿಮಾದ ಶವದ ಮುಂದೆ ಅಳೋ ಮೊದಲ ಸೀನ್ ಇತ್ತು. ನಾನು ಎಷ್ಟೇ ಅಳಬೇಕು ಅಂದರೂ ಅಳು ಬರುತ್ತಿರಲಿಲ್ಲ. ಸಿಟ್ಟಾದ ಬಾಬು ಸರ್‌ ಅಲ್ಲೇ ಕಪಾಳಕ್ಕೆ ಹೊಡೆದರು. ಆಗ ಕಣ್ಣೀರು ಬಂತು. ಕಣ್ಣೀರು ಬರುವುದನ್ನು ನೋಡಿ ತಗೋಳಿ ಈ ಶಾಟ್ ಎಂದು ಸೂಚಿಸಿದರು.

ರಾಜೇಂದ್ರ ಸಿಂಗ್ ಬಾಬು ಅವರು 22 ವಯಸ್ಸಿನಲ್ಲೇ ಒಳ್ಳೆಯ ಸಿನಿಮಾ ಮಾಡಿದ್ದಾರೆ. ಮೊದಲ ಸಿನಿಮಾಗೂ ಈಗಿನ ಸಿನಿಮಾಗೂ ತುಂಬಾ ವ್ಯತ್ಯಾಸ ಇದೆ. ಹಿಂದೆ ಮಾಡಿದ ಸಿನಿಮಾದ ಥರ ಈಗ ಸಿನಿಮಾ ಬಂದೇ ಇಲ್ಲ. ಅವತ್ತು ಬಾಬು ಸರ್ ಅವಕಾಶ ಕೊಟ್ಟಿದ್ದಕ್ಕೆ ನಾನು ಇಲ್ಲಿ ನಿಂತಿದ್ದೀನಿ ಎಂದು ಅರ್ಜುನ್ ಸರ್ಜಾ ಈ ವೇಳೆ ಹಳೆ ನೆನಪು ಮೆಲುಕು ಹಾಕಿದರು.