ದೊಡ್ಮನೆಯಲ್ಲಿ ಯಾರು ಸ್ಟ್ರಾಂಗ್, ಯಾರು ವೀಕ್?- ಮಂಜು, ರಜತ್ ನಡುವೆ ಬಿಗ್ ಫೈಟ್

ದೊಡ್ಮನೆ ಆಟ 50 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಶೋಭಾ ಶೆಟ್ಟಿ, ರಜತ್ ಎಂಟ್ರಿ ಕೊಟ್ಟಿದ್ದಾರೆ. ಇದೀಗ ದೊಡ್ಮನೆಯಲ್ಲಿ ರಜತ್ (Rajath Kishen) ರಾಂಗ್ ಆಗಿದ್ದಾರೆ. ಉಗ್ರಂ ಮಂಜು ಅವರು ರಜತ್ ಮೇಲೆ ಸಿಡಿದೆದ್ದಿದ್ದಾರೆ.‌ ಬಿಗ್‌ ಬಾಸ್‌ಯಲ್ಲಿ ಯಾರು ಸ್ಟ್ರಾಂಗ್‌, ಯಾರು ವೀಕ್?‌ ಎಂಬ ವಿಚಾರಕ್ಕೆ ಮಂಜು (Ugramm Manju) ಮತ್ತು ರಜತ್‌ ನಡುವೆ ಕಿತ್ತಾಟ ನಡೆದಿದೆ. ಇದನ್ನೂ ಓದಿ:ಸಲ್ಮಾನ್ ಖಾನ್ ಜೊತೆ ಈದ್, ಹೋಳಿ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ರಶ್ಮಿಕಾ

ವೈಲ್ಡ್ ಕಾರ್ಡ್ ಸ್ಪರ್ಧಿಗಳು ಎಂಟ್ರಿ ಆದ ಮೇಲೆ ‘ಬಿಗ್ ಬಾಸ್’ ಮನೆಯ ಅಸಲಿ ಆಟ ಶುರುವಾಗಿದೆ. ಈ ವಾರ ಬಿಗ್ ಬಾಸ್ ಮನೆಯ ಸದಸ್ಯರಿಗೆ ಫಿಸಿಕಲ್ ಟಾಸ್ಕ್ ಕೊಟ್ಟಿದ್ದು, ಗೆಲ್ಲೋ ಕಿಚ್ಚು ಹೆಚ್ಚಾಗಿದೆ. ಕೊಳವೆ ಮೂಲಕ ಬರುವ ಚೆಂಡನ್ನು ತೆಗೆದುಕೊಂಡು ಹೋಗುವ ಟಾಸ್ಕ್‌ನಲ್ಲಿ ಗೋಲ್ಡ್ ಸುರೇಶ್ ಹಾಗೂ ರಜತ್ ಅವರ ಮಧ್ಯೆ ಜಗಳ ನಡೆದಿತ್ತು. ರಜತ್ ಮೇಲೆ ಕೂಗಾಡಿದ ಸುರೇಶ್ (Gold Suresh) ಅವರು ಬಿಗ್ ಬಾಸ್ ಮನೆ ಬಿಟ್ಟು ಹೋಗಲು ನಿರ್ಧಾರ ಮಾಡಿದ್ದರು.

ಸುರೇಶ್ ಅವರ ಬಳಿಕ ರಜತ್ ಮತ್ತು ಮಂಜು ನಡುವೆ ವಾಕ್ಸಮರ ನಡೆದಿದೆ. ಟಾಸ್ಕ್‌ ಮಧ್ಯೆ ರಜತ್ ಅವರು ನಾನು, ತ್ರಿವಿಕ್ರಮ್ (Trivikram) ಒಂದೇ ಟೀಮ್‌ನಲ್ಲಿ ಇದ್ದರೆ ಎದುರಾಳಿ ತಂಡ ಸ್ವಲ್ಪ ವೀಕ್ ಆಗುತ್ತೆ ಎಂದಿದ್ದಾರೆ. ರಜತ್ ಅವರ ಈ ಮಾತು ಮಂಜು ಅವರನ್ನು ಕೆರಳುವಂತೆ ಮಾಡಿದೆ. ಯಾವ ನನ್ಮಗ ಇಲ್ಲ ಅಂತಾನೆ. ಫಿಸಿಕಲ್ ಕೊಟ್ಟರೆ ನಾವು ಸ್ಟ್ರಾಂಗ್. ನಾವು ಮಾತನಾಡಿದ್ರೆ, ಉರಿ ಕಿತ್ತುಕೊಂಡು ಬಿಟ್ಟಿತು ಎಂದು ಮಂಜುಗೆ ರಜತ್ ತಿರುಗೇಟು ನೀಡಿದ್ದಾರೆ.

ನೀವು, ತ್ರಿವಿಕ್ರಮ್ ಇಬ್ಬರು ಒಂದೇ ಟೀಮ್‌ನಲ್ಲಿ ಇದ್ದರೆ ನಾವೆಲ್ಲಾ ವೀಕ್ ಅಂತಾನ ಎಂದು ರಜತ್‌ಗೆ ಮಂಜು ಪ್ರಶ್ನಿಸಿದ್ದಾರೆ. ಹಾಗಾದ್ರೆ ಇಬ್ಬರು ಒಂದೇ ಟೀಮ್‌ಗೆ ಹೋಗಿ ಗುರು. ಜೋರಾಗಿ ಮಾತಾಡಬೇಡ, ನನಗೂ ಬರುತ್ತದೆ ಎಂದು ನೇರವಾಗಿ ಯುದ್ಧಕ್ಕೆ ನಿಂತಿದ್ದಾರೆ ರಜತ್. ಬಿಗ್ ಬಾಸ್ ಮನೆಯಲ್ಲಿ ತ್ರಿವಿಕ್ರಮ್, ಮಂಜು ಮಧ್ಯೆ ನಡೆಯುತ್ತಿದ್ದ ಫೈಟ್‌ನಲ್ಲಿ ರಜತ್ ಅವರು ಎಂಟ್ರಿಯಾಗಿದ್ದಾರೆ. ಒಟ್ನಲ್ಲಿ ವಾರಾಂತ್ಯದ ನಾಮಿನೇಷನ್‌ನಲ್ಲಿ ಯಾರು ವೀಕ್, ಯಾರು ಸ್ಟ್ರಾಂಗ್? ಎಂಬುದಕ್ಕೆ ಉತ್ತರ ಸಿಗಲಿದೆ.