BBK 11: ರಜತ್ ರಂಪಾಟಕ್ಕೆ ಚೈತ್ರಾ ಕುಂದಾಪುರ ಗಪ್‌ಚುಪ್‌

ನ್ನಡದ ಬಿಗ್ ಬಾಸ್ ಮನೆಯ (Bigg Boss Kannada 11) ಆಟ ದಿನದಿಂದ ದಿನಕ್ಕೆ ರಂಗೇರುತ್ತಿದೆ. ದೊಡ್ಮನೆಯ ಆಟ 90ನೇ ದಿನದತ್ತ ಮುನ್ನುಗ್ಗುತ್ತಿದೆ. ಇದರ ನಡುವೆ ಬಿಗ್ ಬಾಸ್‌ನಲ್ಲಿ ರಜತ್ (Rajath) ರಂಪಾಟ ಜೋರಾಗಿದೆ. ಸಿಕ್ಕಿದ್ದೇ ಚಾನ್ಸ್ ಅಂತ ಮಂಜು ಮತ್ತು ಚೈತ್ರಾಗೆ ಸಖತ್ ಆಗಿ ಆಟ ಆಡಿಸಿದ್ದಾರೆ. ಇದನ್ನೂ ಓದಿ:ಕಾಲ್ತುಳಿತ ಪ್ರಕರಣ: ಮೃತ ಮಹಿಳೆ ಕುಟುಂಬಕ್ಕೆ 2 ಕೋಟಿ ಪರಿಹಾರ ಘೋಷಿಸಿದ ಅಲ್ಲು ಅರ್ಜುನ್ ತಂದೆ

ದೊಡ್ಮನೆಯಲ್ಲಿ ಈ ವಾರ ಎರಡು ತಂಡವಾಗಿ ವಿಂಗಡಣೆಯಾಗಿದೆ. ಒಂದು ತಂಡದಲ್ಲಿ ಚೈತ್ರಾ ಕುಂದಾಪುರ, ಐಶ್ವರ್ಯಾ, ಮಂಜು, ಗೌತಮಿ, ಹನುಮಂತ ಒಂದು ಟೀಮ್‌ನಲ್ಲಿದ್ದಾರೆ. ಮತ್ತೊಂದು ಟೀಮ್‌ನಲ್ಲಿ ತ್ರಿವಿಕ್ರಮ್, ಭವ್ಯಾ, ಧನರಾಜ್, ರಜತ್ ಹಾಗೂ ಮೋಕ್ಷಿತಾ ಇದ್ದಾರೆ. ನಿನ್ನೆಯ ಸಂಚಿಕೆಯಲ್ಲಿ ತ್ರಿವಿಕ್ರಮ್ ತಂಡದವರು ಬಿಗ್ ಬಾಸ್ ರೆಸಾರ್ಟ್‌ನಲ್ಲಿ ಕೆಲಸ ಮಾಡುವವರಾಗಿದ್ದರು. ಉಗ್ರಂ ಮಂಜು ಟೀಮ್ ರೆಸಾರ್ಟ್‌ಗೆ ಅತಿಥಿಗಳಾಗಿ ಎಂಟ್ರಿ ಕೊಟ್ಟಿದ್ದರು. ಈಗ ಅದು ಉಲ್ಟಾ ಆಗಿದೆ.

ನಿನ್ನೆ ಮಂಜು ತಂಡ ಬೇಕಾ ಬಿಟ್ಟಿಯಾಗಿ ರೆಸಾರ್ಟ್ ಕೆಲಸಗಾರರ ಮೇಲೆ ದರ್ಪ ತೋರಿಸಿದ್ದರು. ಚೈತ್ರಾ ಕುಂದಾಪುರ (Chaithra Kundapura) ಅಂತೂ ಸಿಕ್ಕಿದ್ದೇ ಚಾನ್ಸ್ ಅಂತ ರಜತ್‌ಗೆ ಕೆಲಸ ಕೊಟ್ಟಿದ್ದರು. ಈಗ ಆಟದಲ್ಲಿ ‘ಬಿಗ್ ಬಾಸ್’ ಟ್ವಿಸ್ಟ್ ಕೊಟ್ಟಿದ್ದಾರೆ. ನಿನ್ನೆ ಕೆಲಸಗಾರರಾಗಿದ್ದ ತ್ರಿವಿಕ್ರಮ್ ಟೀಮ್ ಈಗ ಅತಿಥಿಗಳಾಗಿದ್ದಾರೆ. ಮಂಜು ಟೀಮ್ ಬಿಗ್ ಬಾಸ್ ರೆಸಾರ್ಟ್‌ನಲ್ಲಿ ಕೆಲಸ ಮಾಡುವವರಾಗಿದ್ದಾರೆ.

ಈಗ ಬಿಗ್ ಬಾಸ್ ಮನೆಯಲ್ಲಿ ಅಸಲಿ ಆಟ ಶುರುವಾಗಿದೆ. ತ್ರಿವಿಕ್ರಮ್ ತಂಡ ತಮ್ಮ ಆಟವನ್ನು ಸ್ಟಾರ್ಟ್ ಮಾಡಿದ್ದಾರೆ. ಬೇಕು ಬೇಕು ಅಂತಾನೇ ಬಿಗ್ ಬಾಸ್ ರೆಸಾರ್ಟ್‌ನಲ್ಲಿ ಕೆಲಸ ಮಾಡುವವರಿಗೆ ಹೆಚ್ಚಾಗಿ ವರ್ಕ್ ಕೊಟ್ಟಿದ್ದಾರೆ. ರಜತ್ ಅಂತೂ ಸಿಕ್ಕಿದ್ದೇ ಚಾನ್ಸ್ ಚೈತ್ರಾ ಮೇಲೆ ಸೇಡು ತೀರಿಸಿಕೊಂಡಿದ್ದಾರೆ. ಎದುರಾಳಿ ತಂಡಕ್ಕೆ ಸಖತ್ ಆಗಿ ಕ್ವಾಟ್ಲೆ ಕೊಟ್ಟಿದ್ದಾರೆ. ಆಗ ಮೋಕ್ಷಿತಾ ತೊಡೆ ಮೇಲೆ ಕುಳಿತುಕೊಂಡಿದ್ದಾರೆ. ಆಗ ರಜತ್ ಮೇಲೆ ಮೋಕ್ಷಿತಾ ರೇಗಾಡಿದ್ದಾರೆ. ಇದು ವಾಹಿನಿ ಹಂಚಿಕೊಂಡ ಪ್ರೋಮೋದಲ್ಲಿ ಹೈಲೆಟ್ ಆಗಿದೆ.