ಜೈಪುರ: ಶಾಲೆಯ ಬಸ್ಸೊಂದು ಅಂಡರ್ ಪಾಸ್‍ನಲ್ಲಿ ಸಿಲುಕಿಕೊಂಡು, ಅದರಲ್ಲಿದ್ದ 70 ಮಕ್ಕಳು ಪ್ರಾಣಾಪಾಯದಿಂದ ಪಾರಾದ ಘಟನೆ ರಾಜಸ್ಥಾನದ ಸಿಕರ್ ನಲ್ಲಿ ನಡೆದಿದೆ.
ರೈಲ್ವೇ ಮಾರ್ಗದ ಕೆಳಗೆ ವಾಹನ ಸಂಚಾರಕ್ಕೆ ಅಂಡರ್ ಪಾಸ್ ನಿರ್ಮಾಣ ಮಾಡಲಾಗಿದೆ. ಈ ಮಾರ್ಗವಾಗಿ ಬಸ್ಸು ಚಾಲನೆ ಮಾಡಿದ ಪರಿಣಾಮ, 3 ರಿಂದ 4 ಅಡಿ ಕೆಸರು ಮಿಶ್ರಿತ ನೀರಿನಲ್ಲಿ ಬಸ್ಸು ಸಿಲುಕಿಕೊಂಡಿತ್ತು.
ಕೊನೆಗೆ ಸ್ಥಳೀಯರು ಬಸ್ಸಿನ ಮೇಲೆ ಏಣಿ ಇಟ್ಟು, ಮಕ್ಕಳನ್ನು ಒಬ್ಬರಂತೆ ಸೇತುವೆ ಮೇಲೆ ಹತ್ತಿಸಲಾಯಿತು. ಮಕ್ಕಳ ರಕ್ಷಣಾ ಕಾರ್ಯಾಚರಣೆ ನೋಡಲು ಅನೇಕರು ಸೇರಿದ್ದರು.
#Rajasthan: Locals rescue students from a school bus stuck in a flooded underpass in Sikar pic.twitter.com/xD5O8FvTJT
— ANI (@ANI) September 6, 2018
ಇಂತಹದ್ದೇ ಘಟನೆ ಉತ್ತರ ಪ್ರದೇಶದ ಖಾರ್ಕೊಡ್‍ನಲ್ಲಿ ನಡೆದಿತ್ತು. ಶಾಲೆಯಿಂದ ಮನೆಗೆ ಹೊರಟಿದ್ದ ಬಸ್ಸು ಅಂಡರ್ ಪಾಸ್ ಮೂಲಕ ಹೋಗುವಾಗ ಮಳೆ ನೀರಿನಲ್ಲಿ ಸಿಲುಕಿತ್ತು. ಅದೃಷ್ವಶಾತ್ ಚಾಲಕ, ನಿರ್ವಾಹಕ ಹಾಗೂ ಸ್ಥಳೀಯರ ಸಹಾಯದಿಂದ ಬಸ್ಸಿನಲ್ಲಿದ್ದ 21 ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಲಾಗಿತ್ತು.
#Rajasthan : #Schoolbus stuck in #floddedunderpass in #Sikar 80 children rescued. pic.twitter.com/z3gOpFomeT
— Aadi Dev Bharadwaj (@aadi_dev) September 6, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply