ರಜನಿಕಾಂತ್ ಹೊಸ ಸಿನಿಮಾದಲ್ಲಿ ಕರ್ನಾಟಕದ ಹುಡುಗ

ಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಸದ್ಯ ‘ಕೂಲಿ’ (Coolie Film) ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರದಲ್ಲಿ ಶ್ರುತಿ ಹಾಸನ್, ಕನ್ನಡದ ‘ರತ್ನನ್ ಪ್ರಪಂಚ’ ನಟಿ ರೆಬಾ ಕಾಣಿಸಿಕೊಳ್ತಿದ್ದಾರೆ. ಇದರ ನಡುವೆ ಕನ್ನಡದ ಹುಡುಗನಿಗೆ ಈ ಚಿತ್ರದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.

ಇವರು ದೊಡ್ಡ ಸೆಲಬ್ರಿಟಿ ಏನಲ್ಲ, ಬದಲಿಗೆ ಕರ್ನಾಟಕದ ಮೂಲದ ಹುಡುಗ ಅನ್ನೋದು ವಿಶೇಷ. ವೈರಲ್‌ ಆಗಿರುವ ಸೋಷಿಯಲ್‌ ಮೀಡಿಯಾ ಪೋಸ್ಟ್‌ನಲ್ಲಿ ತಲೈವರ್ ಜೊತೆ ‘ಮಿಸ್ಟರ್ ಇಂಡಿಯನ್’ ಎಂದು ‘ಕೂಲಿ’ ಸಿನಿಮಾದ ಸೆಟ್‌ನಲ್ಲಿ ತೆಗೆದಿರುವ ಫೋಟೋ ಹಂಚಿಕೊಂಡಿದ್ದಾರೆ. ಸೆಟ್‌ನಲ್ಲಿ ಅವರು ಕಾಣಿಸಿಕೊಂಡ ಹಿನ್ನಲೆ ಕೂಲಿ ಸಿನಿಮಾದಲ್ಲಿ ನಟಿಸುತ್ತಾರಾ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಅಧಿಕೃತ ಮಾಹಿತಿಗಾಗಿ ಕಾದುನೋಡಬೇಕಿದೆ. ಇದನ್ನೂ ಓದಿ:ಬಹುಭಾಷಾ ನಟ ಪ್ರಭುದೇವ ಅಜ್ಜಿ ನಂಜನಗೂಡಿನಲ್ಲಿ ನಿಧನ

ಈ ಯುವಕನ ಹೆಸರು ರಾಜೇಶ್ ಸಂಜು. ಇವರು ತಮ್ಮ ಎಕ್ಸ್ ಅಕೌಂಟ್ ಬಯೋದಲ್ಲಿ ಫಿಲ್ಮ್ ಮೇಕಿಂಗ್, ಸ್ಟೋರಿ ಟೆಲ್ಲರ್ ಎಂದು ಬರೆದುಕೊಂಡಿದ್ದಾರೆ. ಇವರು ಮೂಲತಃ ಬೆಂಗಳೂರಿನವರು ಆಗಿದ್ದು, ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ರಾಜೇಶ್ ಸಂಜು ಅವರು ಶಾವೊಲಿನ್ ಕುಂಗ್ ಫೂ ಕೂಡ ಕಲಿತಿದ್ದಾರೆ ಅನ್ನೋದು ಅವರ ಸೋಷಿಯಲ್ ಮೀಡಿಯಾ ಖಾತೆಯಿಂದ ತಿಳಿದು ಬಂದಿದೆ.

‘ಕೂಲಿ’ ಸಿನಿಮಾದಲ್ಲಿ ರಜನಿಕಾಂತ್‌ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಮೊದಲ ಟೀಸರ್‌ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.