ಜಗತ್ತಿನ ಅತ್ಯಂತ ದುಬಾರಿ ನಟನಿಗೆ ಗಾಳ ಹಾಕಿದ ರಾಜಮೌಳಿ

ಬಾಹುಬಲಿ, ಆರ್.ಆರ್.ಆರ್ ಸಿನಿಮಾಗಳ ಮೂಲಕ ಭಾರತೀಯ ಸಿನಿಮಾ ರಂಗದಲ್ಲಿ ಧೂಳ್ ಎಬ್ಬಿಸಿರುವ ನಿರ್ದೇಶಕ ರಾಜಮೌಳಿ ಇದೀಗ ಹಾಲಿವುಡ್ ನಟರತ್ತ ದೃಷ್ಟಿ ನೆಟ್ಟಿದ್ದಾರೆ. ಜಗತ್ತಿನ ಅತ್ಯಂತ ದುಬಾರಿ ನಟ ಎಂದೇ ಖ್ಯಾತರಾಗಿರುವ ಹಾಲಿವುಡ್ ನಟರೊಬ್ಬರನ್ನು ರಾಜಮೌಳಿ ಸಂಪರ್ಕಿಸಿದ್ದಾರೆ. ಇದನ್ನೂ ಓದಿ : ಮಹಾಶಿವರಾತ್ರಿ ದಿನಕ್ಕೆ ಅನನ್ಯ ಭಟ್ ಹಾಡಿರುವ ಶಿವ ಶಿವ ಹಾಡು ರಿಲೀಸ್

ಭಾರತೀಯ ಸಿನಿಮಾ ರಂಗದಲ್ಲೇ ಅತಿರಥ ಮಹಾರಥರಂತಹ ಕಲಾವಿದರು ಇರುವಾಗ, ನೇರವಾಗಿ ಈ ನಿರ್ದೇಶಕರು ಹಾಲಿವುಡ್ ನಟರತ್ತ ನಡೆದು ಹೊರಟಿದ್ದು ಸಿನಿಮಾ ಮಾಡಲು ಅಲ್ಲ. ಬದಲಾಗಿ ಆರ್.ಆರ್.ಆರ್ ಸಿನಿಮಾದ ಕಾರ್ಯಕ್ರಮಕ್ಕಾಗಿ ಆಹ್ವಾನಿಸಲು.  ಇದನ್ನೂ ಓದಿ : ನಟ ಚೇತನ್ ಬಂಧನ ಅಕ್ರಮ: ಮಾಜಿ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ

ಸದ್ಯದಲ್ಲಿಯೇ ದುಬೈನಲ್ಲಿ ಆರ್.ಆರ್.ಆರ್ ಸಿನಿಮಾದ ಪ್ರಿ-ರಿಲೀಸ್ ಕಾರ್ಯಕ್ರಮ ಆಯೋಜನೆ ಆಗಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಹಾಲಿವುಡ್ ಸೂಪರ್ ಸ್ಟಾರ್ ಟಾಮ್ ಕ್ರೂಸ್ ಬರಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಅವರೊಂದಿಗೆ ಆರ್.ಆರ್.ಆರ್ ಚಿತ್ರತಂಡ ಮಾತನಾಡಿದ್ದು, ಜಗತ್ತಿನ ಅತ್ಯಂತ ದುಬಾರಿ ನಟ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರಂತೆ. ಇದನ್ನೂ ಓದಿ : ಕೆಜಿಎಫ್ 2 ನಿರ್ಮಾಪಕರಿಗೇ ಚಮಕ್ ಕೊಟ್ಟ ಫ್ಯಾನ್ಸ್ : ಮೋದಿ ಪತ್ರದ ಅಸಲಿಯತ್ತೇನು?

ಅವೆಂಜರ್ಸ್ ಸೀರಿಸ್ ಮೂಲಕ ಜಗತ್ತಿನಾದ್ಯಂತ ಅಪಾರ ಅಭಿಮಾನಿ ಬಳಗ ಹೊಂದಿರುವ ಟಾಮ್ ಕ್ರೂಸ್, ಹಾಲಿವುಡ್ ನ ಐರಾನ್ ಮ್ಯಾನ್ ಎಂದೇ ಫೇಮಸ್. ಇವರ ನಟನೆಯ ಮಿಷನ್ ಇಂಪಾಸಿಬಲ್ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಇವತ್ತಿಗೂ ದಾಖಲೆಯಲ್ಲಿದೆ. ಇದನ್ನೂ ಓದಿ : ಅಶರೀರವಾಣಿ ಆಲ್ಬಂಗೆ ನೀನಾಸಂ ಸತೀಶ್ ಸಿಂಗರ್ : ಮಗಳೊಂದಿಗೆ ಹಾಡಿದ ಸ್ಟಾರ್ ನಟ

ಅಂದಹಾಗೆ ದುಬೈನಲ್ಲಿ ಈ ಕಾರ್ಯಕ್ರಮ ಯಾವತ್ತು ನಡೆಯಲಿದೆ ಎನ್ನುವ ಮಾಹಿತಿ ಚಿತ್ರತಂಡ ಹೊರಬಿದ್ದಿಲ್ಲ. ಆದರೆ, ಸದ್ಯದಲ್ಲೇ ಕಾರ್ಯಕ್ರಮ ನಡೆಯಲಿದೆಯಂತೆ.

Comments

Leave a Reply

Your email address will not be published. Required fields are marked *