ಉದ್ಧವ್ ಠಾಕ್ರೆ ಸಿಎಂ ಆಗಿದ್ದಕ್ಕೆ ರಾಜ್ ಠಾಕ್ರೆಗೆ ಧ್ವನಿವರ್ಧಕಗಳ ಸಮಸ್ಯೆ: ಸಂಜಯ್ ರಾವತ್

ಮುಂಬೈ: ರಾಜ್ ಠಾಕ್ರೆ ಅವರಿಗೆ ತಮ್ಮ ಸೋದರ ಸಂಬಂಧಿ ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದಕ್ಕೆ ಈಗ ಅವರಿಗೆ ಧ್ವನಿವರ್ಧಕಗಳ ಸಮಸ್ಯೆ ಆರಂಭವಾಗಿದೆ ಎಂದು ಶಿವಸೇನೆಯ ಹಿರಿಯ ಮುಖಂಡ ಸಂಜಯ್ ರಾವತ್ ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಮಸೀದಿಗಳ ಧ್ವನಿವರ್ಧಕಗಳನ್ನು ತೆಗೆದು ಹಾಕುವಂತೆ ರಾಜ್ ಠಾಕ್ರೆ ಶಿವಸೇನೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಆಜಾನ್ ವಿರುದ್ಧ ಹನುಮಾನ್ ಚಾಲೀಸಾವನ್ನು ಮೊಳಗಿಸುವಂತೆ ಅವರು ತಮ್ಮ ಬೆಂಬಲಿಗರಿಗೆ ಮನವಿ ಮಾಡಿದ್ದಾರೆ ಎಂದು ರಾವತ್ ತಿಳಿಸಿದರು. ಇದನ್ನೂ ಓದಿ: ನನಗೋಸ್ಕರ ಮುಸ್ಲಿಮ್ ಧರ್ಮಕ್ಕೆ ಮತಾಂತರವಾಗಲು ಸಿದ್ಧರಿದ್ದರು: ನಾಗರಾಜು ಪತ್ನಿ ಅಶ್ರಿನ್

Raj Thackeray

ಇದೀಗ ಮಸೀದಿಗಳಲ್ಲಿ ಬಳಸುವ ಧ್ವನಿವರ್ಧಕಗಳ ಬಗ್ಗೆ ರಾಜಕೀಯ ನಡೆಯುತ್ತಿದೆ. ವಿಲಾಸ್‌ರಾವ್ ದೇಶ್‌ಮುಖ್, ದೇವೇಂದ್ರ ಫಡ್ನಾವಿಸ್ ಸಿಎಂ ಆಗಿದ್ದಾಗ 50 ವರ್ಷಗಳಿಂದ ಈ ವಿಷಯ ಏಕೆ ಪ್ರಸ್ತಾಪ ಮಾಡಿಲ್ಲ ಎಂದು ಪ್ರಶ್ನಿಸಿದರು.

ರಾಜ್ ಠಾಕ್ರೆಗೆ ಈ ಹಿಂದೆ ಧ್ವನಿವರ್ಧಕಗಳ ಬಗ್ಗೆ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಅವರ ಸಹೋದರ ಉದ್ಧವ್ ಠಾಕ್ರೆ ಸಿಎಂ ಆದ ಕಾರಣ ಸಮಸ್ಯೆಯಾಗಿದೆ ಎಂದು ಹೀಯಾಳಿಸಿದರು. ಇದನ್ನೂ ಓದಿ: ಭಾರತದಲ್ಲಿ ಕೋವಿಡ್‌ನಿಂದ 47 ಲಕ್ಷ ಮಂದಿ ಸಾವು – WHO ವರದಿ

Raj Thackeray

ಕಳೆದ ತಿಂಗಳು ರಾಜ್ ಠಾಕ್ರೆ ಸುಪ್ರೀಂ ಕೋರ್ಟ್ ಆದೇಶದಂತೆ ಎಲ್ಲಾ ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದು ಹಾಕಬೇಕೆಂದು ಆಗ್ರಹಿಸಿದ್ದು, ಇಲ್ಲವಾದಲ್ಲಿ ಮಸೀದಿಗಳ ಬಳಿ ಹನುಮಾನ್ ಚಾಲೀಸಾ ನುಡಿಸುವುದಾಗಿ ಎಚ್ಚರಿಕೆ ನೀಡಿದ್ದರು. ರಾಜ್ ಠಾಕ್ರೆ ನೀಡಿದ್ದ ಗಡುವು ಮುಗಿಯುತ್ತಿದ್ದಂತೆ ಮೇ 4 ರಂದು ಎಂಎನ್‌ಎಸ್ ಕಾರ್ಯಕರ್ತರು ಮುಂಬೈ ಮಸೀದಿಗಳ ಬಳಿ ಹನುಮಾನ್ ಚಾಲೀಸ ನುಡಿಸಲು ಪ್ರಯತ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಅನೇಕ ಎಂಎನ್‌ಎಸ್ ಕಾರ್ಯಕರ್ತರನ್ನು ಬಂಧಿಸಿದ್ದರು.

Comments

Leave a Reply

Your email address will not be published. Required fields are marked *