ಮಂಡ್ಯದಲ್ಲಿ ಧಾರಾಕಾರ ಮಳೆ – 400ಕ್ಕೂ ಹೆಚ್ಚು ಮನೆಗಳಿಗೆ ನೀರು

mandya Rain

ಮಂಡ್ಯ: ಜಿಲ್ಲೆಯಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ನಗರದ ಬೀಡಿ ಕಾಲೋನಿಯಲ್ಲಿ 400ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಬಡಾವಣೆಯ ಜನರು ರಾತ್ರಿ ನಿದ್ರೆ ಇಲ್ಲದೇ ಮನೆಗೆ ನುಗ್ಗಿದ್ದ ನೀರನ್ನು ಹೊರಗೆ ಹಾಕಿದ್ದಾರೆ.

mandya Rain

ಬೀಡಿ ಕಾಲೋನಿ ನಿರ್ಮಾಣವಾಗಿರುವ ಜಾಗ ಈ ಹಿಂದೆ ಕೆರೆಯಾಗಿದ್ದು, ಸರ್ಕಾರ ಕೆರೆಯನ್ನು ಮುಚ್ಚಿ ಇಲ್ಲಿ ಕಾಲೋನಿಯನ್ನು ನಿರ್ಮಾಣ ಮಾಡಿತ್ತು. ಆದರೆ ಮೂಲಭೂತ ಸೌಕರ್ಯಗಳನ್ನು ಮಾತ್ರ ಸರಿಯಾಗಿ ಒದಗಿಸಿಲ್ಲ. ಸರಿಯಾದ ಒಳ ಚರಂಡಿ ಇಲ್ಲದ ಕಾರಣ ಈ ಬಡಾವಣೆಯ ಮನೆಗಳಿಗೆ ಪ್ರತಿ ಬಾರಿ ಮಳೆ ಬಂದಂತಹ ಸಂದರ್ಭದಲ್ಲಿ ಮಳೆಯ ನೀರು ನುಗ್ಗುತ್ತಿದೆ. ಇಲ್ಲಿನ ಜನರು ನಗರಸಭೆಗೆ ಎಷ್ಟೇ ಅರ್ಜಿಗಳನ್ನು ನೀಡಿದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕ್ಯಾರೆ ಎನ್ನುತ್ತಿಲ್ಲ. ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಫೇಸ್‍ಬುಕ್ ಖಾತೆ 2 ವರ್ಷ ಬ್ಯಾನ್ 

mandya Rain

ರಾತ್ರಿ ಸತತ ಮೂರು ಗಂಟೆಗೂ ಅಧಿಕ ಕಾಲ ಧಾರಾಕಾರವಾಗಿ ಮಳೆ ಬಿದ್ದ ಪರಿಣಾಮ ಬೀಡಿ ಕಾಲೋನಿಯ ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ಇಲ್ಲಿಯ ಜನರು ತಮ್ಮ ಮಕ್ಕಳನ್ನು ರಸ್ತೆಯಲ್ಲಿ ನಿಲ್ಲಿಸಿ ಇಡೀ ರಾತ್ರಿ ಮನೆಗೆ ನುಗ್ಗಿದ ನೀರನ್ನು ಹೊರಹಾಕಿದ್ದಾರೆ. ಇದಲ್ಲದೇ ಮನೆಯಲ್ಲಿ ಇದ್ದ ಪೀಠೋಪಕರಣ, ಎಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ ಎಲ್ಲಾ ವಸ್ತುಗಳು ಮಳೆ ನೀರಿನಲ್ಲಿ ನೆನೆದಿವೆ. ಇದನ್ನೂ ಓದಿ: ಭಾರೀ ಮಳೆ – ಚಾಮುಂಡಿ ಬೆಟ್ಟದಲ್ಲಿ ಗುಡ್ಡ ಕುಸಿತ

mandya Rain

ಒಂದು ಕಡೆ ಬೀಡಿ ಕಾಲೋನಿಗೆ ನೀರು ನುಗ್ಗಿದ್ರೆ, ಇನ್ನೊಂದು ಕಡೆ ಧಾರಾಕಾರ ಮಳೆಯಿಂದ ಬೆಳೆಗಳು ಹಾನಿಯಾಗಿವೆ. ಮಂಡ್ಯ, ಮಳವಳ್ಳಿ ತಾಲೂಕು ಸೇರಿದಂತೆ ಹಳ್ಳ-ಕೊಳ್ಳಗಳು ತುಂಬಿಹರಿಯುತ್ತಿರುವ ಕಾರಣ ಅಕ್ಕ-ಪಕ್ಕದ ಜಮೀನಿನಲ್ಲಿ ಇದ್ದ ಬೆಳೆಗಳು ನೀರಿನಲ್ಲಿ ಮುಳುಗಿ ನಾಶವಾಗಿವೆ. ಇದರಿಂದ ರೈತರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಇದನ್ನೂ ಓದಿ: ಮಧ್ಯರಾತ್ರಿ ಸಿಎಂಗೆ ಝೀರೋ ಟ್ರಾಫಿಕ್‌ – ಅರ್ಧಗಂಟೆ ಸರ್ವಿಸ್‌ ರಸ್ತೆಯಲ್ಲಿ ನಿಂತ ವಾಹನಗಳು

Comments

Leave a Reply

Your email address will not be published. Required fields are marked *