ಬೆಂಗಳೂರಿನಲ್ಲಿ ರಾತ್ರಿಯೆಲ್ಲಾ ಮಳೆ ಅಬ್ಬರ – ಕೆಆರ್ ಪುರ, ನಾಗರಭಾವಿ, ಯಲಹಂಕದಲ್ಲಿ ನೀರೋ ನೀರು

ಬೆಂಗಳೂರು: ನಗರದಲ್ಲಿ ಶುಕ್ರವಾರ ಸಂಜೆಯಿಂದ ಪ್ರಾರಂಭವಾದ ಮಳೆ ಇಂದು ಬೆಳಗಿನ ಜಾವದವರೆಗೂ ಸುರಿದಿದ್ದಾನೆ. ಕೆಆರ್ ಪುರಂ, ಕಮ್ಮನಹಳ್ಳಿ, ನಾಗವಾರ, ಲಿಂಗರಾಜಪುರ, ಇಂದ್ರನಗರ, ಹೆಚ್.ಎಸ್.ಆರ್ ಲೇಔಟ್, ಎಲೆಕ್ಟ್ರಾನಿಕ್ ಸಿಟಿ ಮತ್ತು ಯಲಹಂಕ ಭಾಗದಲ್ಲಿ ಜೋರು ಮಳೆಯಾಗಿದ್ದು ಮಳೆಯಿಂದಾಗಿ ಟ್ರಾಫಿಕ್ ಜಾಮ್ ಕೂಡ ಆಗಿತ್ತು.

ಮಲ್ಲೇಶ್ವರಂ, ರಾಜಾಜಿನಗರ, ಯಶವಂತಪುರ, ನಾಗರಬಾವಿ, ವಿಜಯನಗರ, ಮೆಜೆಸ್ಟಿಕ್, ದಾಸರಹಳ್ಳಿ ಸುತ್ತಮುತ ಸಾಧಾರಣ ಮಳೆಯಾಯ್ತು. ವರುಣನ ಅಬ್ಬರಕ್ಕೆ ಲಿಂಗರಾಜಪುರ, ಬಾಣಸವಾಡಿ ಮತ್ತು ಯಲಹಂಕದಲ್ಲಿ ಮರಗಳು ಧರೆಗುರುಳಿವೆ. ಇಂದು ಬೆಳಗಿನ ಜಾವ ಸಹ ಯಶವಂತಪುರ ಭಾಗದಲ್ಲಿ ತುಂತುರು ಮಳೆಯಾಗಿದೆ.

ಬಿಬಿಎಂಪಿ ಸಿಬ್ಬಂದಿ ಮರ ತೆರವು ಕಾರ್ಯದಲ್ಲಿ ತೊಡಗಿದ್ದಾರೆ. ಹಲವು ಕಡೆ ಮೆಳೆಯ ಅಬ್ಬರಕ್ಕೆ ರಸ್ತೆಗಳು ಕೆರೆಗಳಾಗಿದ್ದವು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *