ದೇವಭೂಮಿ ಉತ್ತರಾಖಂಡ್‍ನಲ್ಲಿ ಮೇಘಸ್ಫೋಟ – 12 ಮಂದಿ ಸಾವು, 20 ಮಂದಿ ನಾಪತ್ತೆ

Nainital

ಡೆಹ್ರಾಡೂನ್: ಕೇರಳದಲ್ಲಿ ಇದೀಗ ಮಳೆ ಕಡಿಮೆಯಾಗುತ್ತಿದ್ದಂತೆಯೇ, ಇತ್ತ ದೇವಭೂಮಿ ಉತ್ತರಾಖಂಡ್‍ನಲ್ಲಿ ಪ್ರವಾಹ ಸೃಷ್ಟಿ ಆಗಿದೆ.

Nainital

ನೈನಿತಾಲ್ ಜಿಲ್ಲೆಯ ರಾಮಘರ್‍ನಲ್ಲಿ ಮೇಘಸ್ಫೋಟ ಸಂಭವಿಸಿದ್ದು 12 ಮಂದಿ ಸಾವನ್ನಪ್ಪಿದ್ದಾರೆ. 20ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ. ಕಳೆದ 40 ಗಂಟೆಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಂದಾಗಿ ನೈನಿತಾಲ್ ನದಿಯ ನೀರಿನ ಮಟ್ಟ ತುಂಬಿ ಹುಕ್ಕಿ ಹರಿಯುತ್ತಿದ್ದು, ನೈನಿತಾಲ್ ಜಿಲ್ಲೆಯ ರಸ್ತೆಗಳು ಜಲಾವೃತಗೊಂಡಿದೆ. ಈ ಪ್ರದೇಶದಲ್ಲಿರುವ ಕಟ್ಟಡ ಹಾಗೂ ಮನೆಯೆಲ್ಲವೂ ನೀರಿನಲ್ಲಿ ಮುಳುಗಿಹೋಗಿದೆ. ಇದನ್ನೂ ಓದಿ: ಮರ್ಯಾದಾ ಹತ್ಯೆ – ಮಗಳು ಪ್ರೀತಿಸಿ ವಿವಾಹವಾಗಿದ್ದಕ್ಕೆ ಇಡೀ ಕುಟುಂಬವನ್ನೇ ಜೀವಂತ ಸುಟ್ಟ ತಂದೆ

Nainital

ಕೋಸಿ, ದೌಲಾ ನದಿ ಉಕ್ಕಿ ಹರಿಯುತ್ತಿದೆ. ಮೇಘಸ್ಫೋಟದಿಂದ ಉಂಟಾಗಿರುವ ಪ್ರವಾಹಕ್ಕೆ 12 ಮನೆಗಳು ಕೊಚ್ಚಿಕೊಂಡು ಹೋಗಿವೆ. ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ ರಸ್ತೆಯಲ್ಲಿರುವ ಹೋಟೆಲ್ ಗಳಿಗೆ ನೀರು ನುಗ್ಗಿದ್ದು ಪ್ರವಾಸಿಗಳು ಪರದಾಡುತ್ತಿದ್ದಾರೆ. ರೆಸಾರ್ಟ್‍ನಲ್ಲಿ 100ಕ್ಕೂ ಹೆಚ್ಚು ಪ್ರವಾಸಿಗರು ಸಿಲುಕಿದ್ದು ವಾಹನಗಳು ಮುಳುಗಡೆ ಆಗಿವೆ. ನಿರ್ಮಾಣ ಹಂತದ ಸೇತುವೆಯೊಂದು ಕೊಚ್ಚಿಕೊಂಡು ಹೋಗಿದೆ. ಗೋಲ್ಪಾರ್‍ ನಲ್ಲಿ ಸೇತುವೆ ಬದಿ ಕೊಚ್ಚಿ ಹೋಗಿದ್ದು ಸಂಚಾರ ಸ್ಥಗಿತಗೊಳಿಸಲಾಗಿದೆ. ಇದನ್ನೂ ಓದಿ: ಕಾಲಿನಿಂದ ತಲೆವರೆಗೂ ಬೊಮ್ಮಾಯಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ: ರಣದೀಪ್ ಸಿಂಗ್ ಸುರ್ಜೇವಾಲಾ

Nainital

ನದಿಯ ನಾಲ್ಕು ಗೇಟ್‍ಗಳಿಂದ ನೀರನ್ನು ಹೊರಬಿಟ್ಟಿದ್ದರೂ, ನೀರಿನ ಮಟ್ಟ ನಿರಂತರವಾಗಿ ಹೆಚ್ಚುತ್ತಲೆ ಇದೆ ಮತ್ತು ನದಿಯ ನೀರು ಮಾಲ್ ರಸ್ತೆ, ತಾಲಿಟಾಲ್ ಬಸ್ ನಿಲ್ದಾಣದ ಮೂಲಕ ಭೋವಾಲಿ ಮತ್ತು ಹಲ್ದ್ವಾನಿ ರಸ್ತೆಯ ಕಡೆಗೆ ಹಾದು ಹೋಗುತ್ತಿದೆ. ಇನ್ನೂ ಕೆಲವು ದಿನಗಳ ಕಾಲ ಉತ್ತರಾಖಂಡದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಉತ್ತರಾಖಂಡದಲ್ಲಿ ರೆಡ್ ಅಲರ್ಟ್ ಘೋಷಿಸಿದೆ.

Comments

Leave a Reply

Your email address will not be published. Required fields are marked *