ಉಡುಪಿಯ ರೈತರಿಗೆ ನೆಮ್ಮದಿ ತಂದ ಮಳೆರಾಯ

weather

ಉಡುಪಿ: ಜಿಲ್ಲೆಯಲ್ಲಿ ಎರಡು ದಿನದಿಂದ ಧಾರಕಾರ ಮಳೆಯಾಗುತ್ತಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಇನ್ನೆರಡು ದಿನ ವರ್ಷಧಾರೆ ಆಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ರವಾನಿಸಿದೆ.

rain

ಉಡುಪಿ ಜಿಲ್ಲೆಯಲ್ಲಿ ಸತತ ಎರಡು ದಿನಗಳಿಂದ ಮತ್ತೆ ಮಳೆಯಾಗುತ್ತಿದೆ. ಕೆಲ ದಿನಗಳ ಬ್ರೇಕ್ ನ ನಂತರ ಮತ್ತೆ ಧಾರಾಕಾರ ಮಳೆ ಸುರಿಯುತ್ತಿದೆ. ಶನಿವಾರ ದಿನಪೂರ್ತಿ ಮಳೆ ಬಿದ್ದಿದ್ದು, ಕಳೆದ ರಾತ್ರಿಯಿಂದ ನಿರಂತರವಾಗಿ ತುಂತುರು ಮಳೆಯಾಗುತ್ತಿದೆ. ಹವಾಮಾನ ಇಲಾಖೆ ಭಾನುವಾರ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಸೋಮವಾರ ಜಿಲ್ಲೆಯಲ್ಲಿ ಎಲ್ಲೋ ಅಲರ್ಟ್ ಇರಲಿದೆ. ಇದನ್ನೂ ಓದಿ:ಕೆಂಗೇರಿ ಮೆಟ್ರೋ ವೇದಿಕೆ ಕಾರ್ಯಕ್ರಮದ ಬ್ಯಾನರ್‌ನಲ್ಲಿ ಕನ್ನಡ ಮಾಯ

rain

ಭಾರೀ ಕಾರ್ಮೋಡ ಕವಿದ ವಾತಾವರಣವಿದ್ದು, ಮತ್ತೆ ಮುಂಗಾರಿನ ಅನುಭವವಾಗುತ್ತಿದೆ. ಕಳೆದ ಹತ್ತು ಹದಿನೈದು ದಿನಗಳಿಂದ ಮುಂಗಾರು ಕೊಂಚ ವಿರಾಮ ಕೊಟ್ಟಿತ್ತು. ಬಿಸಿಲಿನ ವಾತಾವರಣ ಕಂಡು ಬಂದಿತ್ತು. ಭತ್ತದ ಬೇಸಾಯ ಮಾಡಿದವರಿಗೆ ಮಳೆ ಇಲ್ಲವೆಂಬ ಆತಂಕ ಎದುರಾಗಿತ್ತು. ಇದೀಗ ಎರಡು ದಿನದಿಂದ ಮಳೆ ಸುರಿಯುತ್ತಿದ್ದು, ರೈತರಿಗೆ ಜೀವಕಳೆ ಬಂದಂತಾಗಿದೆ. ಸೆಪ್ಟೆಂಬರ್ 2ರವರೆಗೆ ಉಡುಪಿ ಜಿಲ್ಲೆಯಲ್ಲಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಇದನ್ನೂ ಓದಿ:ಹುಬ್ಬಳ್ಳಿ-ಧಾರವಾಡ ಗುಂಡಿಗಳ ನಗರ ಬಿಜೆಪಿ ವಿರುದ್ಧ ಡಿಕೆಶಿ ಕಿಡಿ

Comments

Leave a Reply

Your email address will not be published. Required fields are marked *